Advertisement
ತಾ|ನ 81 ಗ್ರಾಮಗಳಲ್ಲೂ ಅಭಿವೃದಿಯಾಗಬೇಕಿದೆ. ಮುಖ್ಯವಾಗಿ ನಗರ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಯಾಗಬೇಕಿದೆ. ಜತೆಗೆ ರಸ್ತೆ, ನೀರು, ಉದ್ಯೋಗ, ಎಂಡೋಸಲ್ಫಾನ್, ಆರೋಗ್ಯ ಮೊದಲಾದ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರ ಯೋಜನೆಗಳನ್ನು ಮಾದರಿಯನ್ನಾಗಿಟ್ಟು ಕೊಂಡು ದೀರ್ಘಾವಧಿಗೆ ಉಪಯೋಗಕ್ಕೆ ಬರುವ ಯೋಜನೆಗಳನ್ನು ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದು ಹರೀಶ್ ಪೂಂಜ ಹೇಳಿದರು.
Related Articles
ಭ್ರಷ್ಟಾಚಾರ ನಿಯಂತ್ರಣಕ್ಕೆ ಚುನಾವಣೆ ಬಂದಾಗ ಕಚೇರಿಗೆ ಹೋಗಿ ಅಬ್ಬರಿಸಿದರೆ ಪ್ರಯೋಜನವಿಲ್ಲ. ಸೂಕ್ತ ಅಧಿಕಾರಿಗಳನ್ನು ನಿಯೋಜಿಸಿದಲ್ಲಿ ವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ಹೋಗುತ್ತವೆ. ಯೋಗ್ಯ ತಹಶೀಲ್ದಾರ್, ಎಸಿ ನಿಯುಕ್ತಿ ಮಾಡದಿದ್ದರ ಪರಿಣಾಮ ಮತ್ತು ಆಗ್ಗಿಂದಾಗ್ಗೆ ಬದಲಿಸುತ್ತಿರುವ ಕಾರಣ ಜನರಿಗೆ ತೊಂದರೆಯಾಗುತ್ತದೆ.
Advertisement
ಇನ್ನು ಸವಲತ್ತುಗಳ ವಿತರಣೆಯನ್ನು ಶಾಸಕರೇ ನೀಡಬೇಕು ಎಂದು ಬಿಜೆಪಿ ಬಯಸುವುದಿಲ್ಲ. ಇದುವರೆಗೆ ಶಾಸಕರು ಹಳ್ಳಿ ಮೂಲೆಯಲ್ಲಿನ ಜನರನ್ನು ತಾಲೂಕು ಕಚೇರಿಗೆ ಕರೆಯಿಸಿ ಸವಲತ್ತು ವಿತರಿಸುತ್ತಿದ್ದರು. ಮುಂದೆ ಸ್ಥಳೀಯ ಸಂಸ್ಥೆಗಳೇ ಅದನ್ನು ನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರತಾಪ್‌ಸಿಂಹ ನಾಯಕ್ ತಿಳಿಸಿದರು.
ಆಗುತ್ತಿರುವ ಅಭಿವೃದ್ಧಿ ಬಗ್ಗೆ ತಿಂಗಳಿಗೊಮ್ಮೆ ಪಕ್ಷದ ವತಿಯಿಂದ ಶಾಸಕರ ನೇತೃತ್ವದಲ್ಲಿ ಪರಿಶೀಲನ ಸಭೆ ನಡೆಸಲಿದ್ದೇವೆ. ಪಕ್ಷದ ಪ್ರಣಾಳಿಕೆಯಲ್ಲಿನ ಅಂಶಗಳಿಗೆ ಹೆಚ್ಚು ಒತ್ತು ನೀಡಲಿದ್ದೇವೆ. ಎಂಡೋ ಸಂತ್ರಸ್ತರ ಪುನರ್ವಸತಿಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಮುಂದಿನ ಚುನಾವಣೆ ಹತ್ತಿರ ಬಂದಾಗ ಯಾವುದೇ ಗಿಮಿಕ್ ಮಾಡುವ ಆವಶ್ಯಕತೆ ಇಲ್ಲ. ಸಾಧನೆಗಳನ್ನೇ ಮಾನದಂಡವಾಗಿ ಮತ್ತೆ ಆಯ್ಕೆಯಾಗಲು ಬಳಸಲಾಗುವುದು ಎಂದು ಹರೀಶ್ ಪೂಂಜ ಹೇಳಿದರು.