Advertisement

ಬೇಸಗೆ ಕಾಲಕ್ಕೆ ಹಿತವೆನ್ನಿಸುವ ಲಾಂಗ್‌ ಮ್ಯಾಕ್ಸಿ ಸಮ್ಮರ್‌ ದಿರಿಸು

12:28 AM Mar 20, 2020 | Sriram |

ಬೇಸಗೆ ಆರಂಭವಾಯಿತು. ನಮ್ಮೊಳಗೂ, ಹೊರಗೂ ಧಗೆ ಸಹಿಸಲು ಅಸಾಧ್ಯ ಎನ್ನುವಂತಹ ವಾತಾವರಣ. ಈ ರಣಬಿಸಿಲಿಗೆ ಏನೋ ಅಸಹನೆ, ಕಿರಿಕಿರಿ. ಯಾವ ಬಟ್ಟೆ ತೊಟ್ಟರೂ ಏನೋ ಒಂಥರಾ ಅಹಿತವಾದ ಭಾವನೆ. ಸೆಕೆಯಿಂದ ಸುಖದ ನಿದ್ದೆ ದೂರ. ಬೆಳಗಾದ್ರೆ ಕೆಲಸದ ಗಡಿಬಿಡಿ. ಕಚೇರಿಗೆ ತೆರಳಬೇಕು ಎಂದರೆ ಇವತ್ತು ಯಾವ ಬಟ್ಟೆ ಧರಿಸಲಿ ಎಂಬ ಪ್ರಶ್ನೆ ಪ್ರತಿಯೊಬ್ಬರಿಗೂ ಕಾಡುತ್ತದೆ. ಅದರಲ್ಲೂ ಬೇಸಗೆ ಕಾಲದಲ್ಲಂತೂ ಬಟ್ಟೆ ಆಯ್ಕೆಯದೇ ಒಂದು ದೊಡ್ಡ ಸಮಸ್ಯೆ ಆಗಿ ಬಿಡುತ್ತದೆ. ಆದರೆ ಲಾಂಗ್‌ ಮ್ಯಾಕ್ಸಿ ಸಮ್ಮರ್‌ ದಿರಿಸು ಈ ಬೇಸಗೆಯಲ್ಲಿ ಟ್ರೆಂಡಿಂಗ್‌ ಆಗುತ್ತಿದ್ದು, ಬೇಸಗೆ ತಿರುಗಾಟಕ್ಕೆ ಸೂಕ್ತ ಏನುತ್ತಾರೆ ಸುಶ್ಮಿತಾ ಜೈನ್‌.

Advertisement

ಧರಿಸುವ ಬಟ್ಟೆ ನೋಡಲು ಸುಂದರವಾಗಿದ್ದರೆ ಮಾತ್ರ ಸಾಲದು, ಮನಸ್ಸಿಗೂ ದೇಹಕ್ಕೂ ಹಿತಕರವಾಗಿರಬೇಕು. ಅದರಲ್ಲಂತೂ ಈ ಬೇಸಗೆ ಕಾಲಕ್ಕೆ ಧರಿಸುವ ಉಡುಪು ಟ್ರೆಂಡಿ ಲುಕ್‌ ನೀಡುವುದರ ಜತೆಗೆ ಧರಿಸುವುದಕ್ಕೂ ಹಿತ ಎನ್ನಿಸಬೇಕು. ಅಂತಹ ಆರಾಮದಾಯಕ ಅನುಭವವನ್ನು ನೀಡುವ ಮೂಲಕ ಫ್ಯಾಷನ್‌ ಲೋಕದಲ್ಲಿ ಲಾಂಗ್‌ ಮ್ಯಾಕ್ಸಿ ಸಮ್ಮರ್‌ ದಿರಿಸು ಟ್ರೆಂಡ್‌ ಆಗುತ್ತಿದ್ದು, ಹೆಂಗಳೆಯರನ್ನು ಆಕರ್ಷಿಸುತ್ತಿದೆ.

ಬೇಸಗೆಗೆ ಹೇಳಿ ಮಾಡಿಸಿದ ದಿರಿಸು
ನೋಡಲು ಮನಮೋಹಕವೆನಿಸುವ ಟಾಪ್‌, ಲಾಂಗ್‌ ಫ್ರಾಕ್‌ನಂತೆ ಕಾಣುವ ಫೊÅàರಲ್‌ ಮ್ಯಾಕ್ಸಿ, ಸ್ಲಿಟ್‌ ಮ್ಯಾಕ್ಸಿ, ಕ್ಯಾಪ್‌ ಸ್ಲಿàವ್‌, ಶೋಲ್ಡರ್‌ಲೆಸ್‌, ಸ್ಕರ್ಟ್‌ ಸ್ಟೈಲ್‌ ಪ್ಲಂಪಿಯಾಗಿದ್ದರೂ ಸ್ಲೊಪಿಯಾಗಿ ನಿಲ್ಲುವ ಪ್ಲಸ್‌ ಸೈಜ್‌ ಮ್ಯಾಕ್ಸಿ ಡ್ರೆಸ್‌ಗಳು ಇಂದು ಸೀಸನ್‌ಗೆ ತಕ್ಕಂತೆ ಬದಲಾಗಿವೆ. ಬೇಸಗೆಗೆ ಹೇಳಿ ಮಾಡಿಸಿದಂತಿರುವ ಈ ವಸ್ತ್ರ ಮಾನನಿಯರ ಮನಸ್ಸು ಕದಿಯುತ್ತಿದೆ. ಹೂಗಳ ಚಿತ್ತಾರ, ಟ್ರಾಪಿಕಲ್‌, ನೇಚರ್‌ ಹೀಗೆ ನಾನಾ ಪ್ರಿಂಟ್‌ಗಳನ್ನು ಒಳಗೊಂಡ ಈ ಹೊಸ ಶೈಲಿಯ ಮ್ಯಾಕ್ಸಿ ಡ್ರೆಸ್‌ಗಳು ಇಂದು ಎಲ್ಲಾ ವಯಸ್ಸಿನ ಹೆಂಗಳೆಯರನ್ನು ಆಕರ್ಷಿಸುತ್ತಿವೆ.

ಹಿತವೆನ್ನಿಸುವ ವಿನ್ಯಾಸ
ಇದು ಫ್ಯಾಷನ್‌ ಕಾಲವಾದ ಕಾರಣ ಎಲ್ಲರೂ ಫ್ಯಾಷನ್‌ಗೆ ಹೆಚ್ಚು ಮಹತ್ವ ನೀಡುತ್ತಾರೆ. ಬೇಸಗೆ ಋತುವಿಗೂ ಸಾಕಷ್ಟು ವಿಧದ ಡ್ರೆಸ್‌ಗಳು ಲಭ್ಯವಾಗುತ್ತವೆ. ಅದರಲ್ಲಿ ಹೆಚ್ಚಾಗಿ ಲಾಂಗ್‌ ಮ್ಯಾಕ್ಸಿ ಸಮ್ಮರ್‌ ಡ್ರೆಸ್‌ ಕೂಡ ಒಂದಾಗಿದ್ದು , ಇದರ ವಿನ್ಯಾಸ ಮನಸ್ಸಿಗೂ ಕಣ್ಣಿಗೂ ಹಿತವೆನ್ನಿಸುವಂತಿದೆ. ಬಟ್ಟೆ ಸ್ವಲ್ಪ ತೆಳುವಾಗಿ, ಲೂಸ್‌ ಆಗಿ, ಮೊಣಕಾಲು ಕೆಳಗಿನವರೆಗೆ ಜೋತು ಬೀಳುವ ಈ ವಸ್ತ್ರ ದೇಹವನ್ನು ಹೆಚ್ಚು ತಂಪಾಗಿಟ್ಟುಕೊಳ್ಳುತ್ತದೆ. ಅದರಂತೆಯೇ ಕಾಕ್‌ ಟೈಲ್‌ ಎಂಬ ವೈವಿಧ್ಯಮಯ ಮಾದರಿಯ ಡ್ರೆಸ್‌ ಕೂಡ ಇದ್ದು, ಮೊಣಕಾಲುಗಳಿಂತ ಕೆಳಗಿನವರೆಗೆ ನಿಲುವಂಗಿ ವಿನ್ಯಾಸದಲ್ಲಿಯೂ ಲಭ್ಯವಿವೆ. ಆದರೆ, ಇವೆಲ್ಲ ಕಾಟನ್‌ ಆಗಿದ್ದರೆ ಉತ್ತಮ.

ಮ್ಯಾಕ್ಸಿ ಡಬ್ಬಲ್‌ ಟಾಪ್‌
ನೋಡಲು ಸಿಂಗಲ್‌ನಂತೆ ಇದ್ದರೂ ಎರಡು ಲೆಯರ್‌ ಹೊಂದಿರುವ ಇವು ಬ್ರೈಟ್‌ ಲುಕ್‌ ನೀಡುತ್ತವೆ ಎಂಬ ಕಾರಣಕ್ಕಾಗಿ ಸಾಕಷ್ಟು ಹುಡುಗಿಯರು ಡಬ್ಬಲ್‌ ಟಾಪ್‌ಗ್ಳ ಮೊರೆ ಹೋಗುತ್ತಿದ್ದಾರೆ. ಪ್ಲೇನ್‌ಗಿಂತ ಪ್ರಿಂಟೆಡ್‌ ಹಾಗೂ ಕೊಂಚ ಜಿಯೊಮೆಟ್ರಿಕ್‌ ವಿನ್ಯಾಸಗಳನ್ನೊಳಗೊಂಡ ವಸ್ತ್ರ ಹೆಚ್ಚು ಪ್ರಚಲಿತದಲ್ಲಿದ್ದು, ಇವುಗಳ ಫ್ಯಾಷನ್‌ ಸ್ಟೇಟ್ಮೆಂಟ್ ಕೊಂಚ ಹೆಚ್ಚಾಗಿಯೇ ಇದೆ. ಜತೆಗೆ ಡಬ್ಬಲ್‌ ಟಾಪ್‌ ಶೈಲಿಯ ಮ್ಯಾಕ್ಸಿ ಡ್ರೆಸ್‌ ನೋಡಲು ವೆಸ್ಟರ್ನ್ ಸ್ಟೈಲ್‌ನಂತೆ ಕಾಣುತ್ತವೆ. ಅಲ್ಲದೇ ಇವನ್ನು ಯಾವುದಕ್ಕಾದರೂ ಮ್ಯಾಚ್‌ ಮಾಡಬಹುದು.

Advertisement

ಮ್ಯಾಕ್ಸಿ ಸ್ಕರ್ಟ್‌
ಮ್ಯಾಕ್ಸಿ ಸ್ಕರ್ಟ್‌ ಇಂದು ಯಾವ ಮಟ್ಟಿಗೆ ಟ್ರೆಂಡಿಯಾಗಿದೆ ಎಂದರೇ, ಕಾಲೇಜು ಹುಡುಗಿಯರಿಂದ ಹಿಡಿದು ಕಾರ್ಪೋರೇಟ್‌ ಕ್ಷೇತ್ರದ ಬೆಡಗಿಯರವರೆಗೆ ತಲುಪಿದೆ. ಮೊದಲೆಲ್ಲಾ ವೀಕೆಂಡ್‌ ಸುತ್ತಾಟಕೆ ಸೀಮಿತವಾಗಿದ್ದ ಈ ಸ್ಕರ್ಟ್‌ಗಳು ಇದೀಗ ಕಾಲೇಜು, ಕಚೇರಿ ಕ್ಯಾಂಪಸ್‌ಗಳಲ್ಲಿಯೂ ಕಾಣಿಸಿಕೊಳ್ಳತೊಡಗಿವೆ. ವೈಬ್ರೆಂಟ್‌ ಕಲರ್‌ನಲ್ಲಿ ಲಭ್ಯ ವಿರುವ ಈ ಮ್ಯಾಕ್ಸಿ ಸ್ಕರ್ಟ್‌ಗಳ ಮೇಲೆ ಲೆಯರ್‌ ಲುಕ್‌ ನೀಡುವ ಆಕ್ಸೆಸರೀಸ್‌ ಹಾಗೂ ಹ್ಯಾಂಡ್‌ ಬ್ಯಾಗ್‌ ಪರ್ಫೆಕ್ಟ್ ಮ್ಯಾಚ್‌ ಆಗುತ್ತದೆ.  ಫಿಶ್‌ ಕಟ್‌, ಕ್ರಾಪ್‌, ಎ ಕಟ್‌ ಹೀಗೆ ನಾನಾ ವಿನ್ಯಾಸಗಳಲ್ಲಿ ಈ ಮ್ಯಾಕ್ಸಿ ಸ್ಕರ್ಟ್‌ಗಳು ಲಭ್ಯ.

ರಂಗೀಲಾ ಬಣ್ಣ
ಯಾವುದೇ ಉಡುಪು ಆಗಲಿ ಅದರ ಅಂದ ಬಣ್ಣದಲ್ಲಿಯೂ ಅಡಗಿರುತ್ತದೆ. ಹಾಗಾಗಿ ಈ ದಿರಿಸುಗಳನ್ನು ಕೊಳ್ಳುವಾಗ ಕಲರ್‌ನ ಬಗ್ಗೆ ಕೊಂಚ ಗಮನ ಕೊಡುವುದು ಒಳಿತು. ಇನ್ನೂ ರಂಗೀಲಾ ಬಣ್ಣಗಳ ರಂಗು ರಂಗಾದ ವರ್ಣದ ಮ್ಯಾಕ್ಸಿ ಉಡುಪುಗಳು ಇಂದು ಹೆಚ್ಚು ಟ್ರೆಂಡಿಯಾಗುತ್ತಿದ್ದು, ಧರಿಸಿದಾಗ ಫ್ರೆಶ್‌ ಲುಕ್‌ ನೀಡುತ್ತವೆ

ಶುಭಸಮಾರಂಭಕ್ಕೂ ಮ್ಯಾಕ್ಸಿ ವಸ್ತ್ರಗಳೇ ಬೇಕು
ಇನ್ನೂ ಬೇಸಗೆ ಕಾಲದಲ್ಲಿ ನಡೆಯುವ ಶುಭಸಮಾರಂಭಗಳಲ್ಲೂ ಈ ವಸ್ತ್ರಗಳು ಸ್ಥಾನ ಪಡೆದುಕೊಳ್ಳುತ್ತಿದ್ದು, ಸಾಂಪ್ರದಾಯಿಕ ವಿನ್ಯಾಸದ ಮ್ಯಾಕ್ಸಿ ಸಮರ್‌ ಡ್ರೆಸ್‌ ಮಾರುಕಟ್ಟೆಯಲ್ಲಿ ಸಿಗುತ್ತಿವೆ. ನೋಡಲು ಸಿಂಪಲ್‌ ಆಗಿ ಕಾಣುವ ಈ ಟ್ರೆಡಿಷನಲ್‌ ಮಾಕ್ಸಿ ಉಡುಪು ತೊಟ್ಟಾಗ ರೀಚ್‌ ಲುಕ್‌ ನೀಡುವುದಂತೂ ಗ್ಯಾರಂಟಿ. ಇನ್ನೂ ಈ ದಿರಿಸನ್ನು ತೊಟ್ಟಾಗ ಅತೀಯಾದ ಅಲಂಕಾರ, ಆಭರಣದ ಅಗತ್ಯ ಇರುವುದಿಲ್ಲ.

ಸ್ಲಿಟ್ಸ್‌ ಸ್ಕರ್ಟ್ಸ್
ಸ್ಲಿಟ್ಸ್‌ ಸ್ಕರ್ಟ್ಸ್ಗಳೂ ಇಂದು ಹೆಚ್ಚಾಗಿ ಟ್ರೆಂಡ್‌ ಆಗುತ್ತಿವೆ. ಸಿನಿ ಲೋಕದ ತಾರೆಯರು, ಸಾಮಾನ್ಯ ಹುಡುಗಿಯರು ಕೂಡ ಸ್ಲಿಟ್‌ ಇರುವಂತಹ ಮ್ಯಾಕ್ಸಿ ಸ್ಕರ್ಟ್‌ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸ್ಟ್ರೈಪ್ಸ್‌ ಹಾಗೂ ವೈಬ್ರೆಂಟ್‌ ಶೇಡ್‌ನ‌ ಇವು ಬಿಂದಾಸ್‌ ಸ್ಟೈಲ್‌ ಸ್ಟೇಟ್ಮೆಂಟ್ ನ ಪ್ರತಿಬಿಂಬ ಎಂದರೂ ತಪ್ಪಿಲ್ಲ ಎನ್ನುತ್ತಾರೆ ಪ್ಯಾಷನ್‌ ತಜ್ಞರು.

ಬೇಸಗೆ ಕಾಲದ ಔಟಿಂಗ್‌, ಪ್ರವಾಸ, ಪಿಕ್‌ನಿಕ್‌ ಅಂತಹ ಸಮಯದಲ್ಲಿ ಶಾರ್ಟ್‌ ಮ್ಯಾಕ್ಸಿ ಸ್ಕರ್ಟ್‌ ಉತ್ತಮ. ಇದರ ಹೊರತಾಗಿ ನಿಲುವಂಗಿ ವಿನ್ಯಾಸದ ಸ್ಲೀವ್
ಲೆಸ್‌ ಸ್ಕರ್ಟ್‌ಗಳನ್ನು ಕೂಡ ಧರಿಸಬಹುದು. ಪಾರ್ಟಿಗಳಿಗೆ ಮ್ಯಾಕ್ಸಿ ಟಾಪ್‌ ಜೀನ್ಸ್ ಪ್ಯಾಂಟ್‌ ಸೂಕ್ತ ವಾಗಿದ್ದು, ಶುಭಸಮಾರಂಭಗಳಿಗೆ ಸಾಂಪ್ರಾದಾಯಿಕ ಮ್ಯಾಕ್ಸಿ ಸ್ಕರ್ಟ್‌ ಉತ್ತಮ.

ಹೊಂದಾಣಿಕೆಯಾಗುವ ಆಭರಣಗಳು
ಫ್ಲಿಪ್‌ ಫ್ಲಾಪ್‌ ಚಪ್ಪಲಿ ಹೊಂದುತ್ತದೆ. ಸ್ಲೀವ್ ಲೆಸ್‌ ಡ್ರೆಸ್‌ ಧರಿಸಿದಾಗ ಬ್ರೆಸ್ಲೆಟ್‌ಗಳನ್ನು ಹಾಕಿಕೊಂಡರೆ ಕೈಗಳ ಅಂದ ಹೆಚ್ಚುತ್ತದೆ.ಉಗುರಿನ ಸೌಂದರ್ಯಕ್ಕಾಗಿ ವೈಬ್ರೆಂಟ್‌ ನೇಲ್‌ ಆರ್ಟ್‌ ಮಾಡಿಕೊಳ್ಳ ಬಹುದು.ಸಿಂಪಲ್‌ ನೆಕ್‌ಲೈನ್‌ಗೆ ಹೆವ್ವಿ ನೆಕ್‌ಪೀಸ್‌ ಹಾಗೂ ಚೈನ್‌ಗಳನ್ನು ಧರಿಸಬಹುದು.ಸಾಂಪ್ರದಾಯಿಕ ದಿರಿಸಿಗೆ ದೊಡ್ಡ ಹ್ಯಾಂಗಿಂಗ್ಸ್ ,ಜುಮುಕಿಗಳು ಮ್ಯಾಚ್‌ ಆಗುತ್ತವೆ. ಹೇರ್‌ ಸ್ಟೈಲ್‌ ಮಾತ್ರ ಸೀಸನ್‌ಗೆ ತಕ್ಕಂತೆ ಮಾಡಿ.

Advertisement

Udayavani is now on Telegram. Click here to join our channel and stay updated with the latest news.

Next