Advertisement
ನೀವು ಸರಕಾರ ರಚನೆ ಮಾಡುತ್ತೀರಾ? ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟವಾಗಿ ಯಾವುದೇ ಉತ್ತರ ನೀಡಿಲ್ಲ. ಈ ಪ್ರಶ್ನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಹುಲ್, ನಾವಿನ್ನೂ ಈ ವಿಷಯವನ್ನು ಮಿತ್ರಪಕ್ಷಗಳ ಜತೆಗೆ ಚರ್ಚೆ ನಡೆಸಿಲ್ಲ. ಹಾಗಾಗಿ ಇವತ್ತು ನನ್ನಲ್ಲಿ ಇದಕ್ಕೆ ಉತ್ತರವಿಲ್ಲ. ಆದರೆ ನಾಳೆ (ಬುಧವಾರ) ನನ್ನಲ್ಲಿ ಉತ್ತರವಿರುತ್ತದೆ ಎಂದು ಹೇಳಿದ್ದಾರೆ.
ಎನ್‌ಡಿಎ ಮಿತ್ರಪಕ್ಷಗಳನ್ನು ಸೆಳೆಯಲು ಐಎನ್‌ಡಿಐಎ ಕೂಟ ಬಲವಾದ ಪ್ರಯತ್ನ ನಡೆಸಬಹುದು
ಇತರ ರೂಪದಲ್ಲಿ ಗೆದ್ದಿರುವ ಸಂಸದರನ್ನು ಸಂಪರ್ಕಿಸಿ ಒಳಕ್ಕೆಳೆದುಕೊಳ್ಳಬಹುದು. ಆದರೆ ಇದು ಕಷ್ಟದ ದಾರಿ
ಬಿಜೆಪಿ-ಮೋದಿಯ ಮೇಲೆ ವಿಪಕ್ಷಗಳಿಗೆ ಇರುವ ಸಿಟ್ಟನ್ನೇ ಅವಕಾಶವನ್ನಾಗಿ ಮಾಡಿಕೊಂಡು ನಿತೀಶ್, ಚಂದ್ರಬಾಬು ಅವರನ್ನು ಸೆಳೆಯಲು ಯತ್ನಿಸಬಹುದು
Related Articles
ಮೂಲಗಳ ಪ್ರಕಾರ ನಿತೀಶ್ ಕುಮಾರ್ ನಾಯಕತ್ವದ ಜೆಡಿಯು ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಕೃಪಾಂಕಕ್ಕಾಗಿ ಐಎನ್‌ಡಿಐಎ ಮೈತ್ರಿಕೂಟ ಬಲವಾದ ಯತ್ನ ನಡೆಸಿದೆ. ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದ ಕಾರಣ ಎರಡೂ ಪಕ್ಷಗಳು ಎನ್‌ಡಿಎ ಬಹುಮತದಲ್ಲಿ ಮಹತ್ವದ ಪಾತ್ರ ವಹಿಸಿವೆ. ಹೀಗಾಗಿ ಈ ಇಬ್ಬರು ನಾಯಕರನ್ನು ಸೆಳೆಯಲು ನಿತೀಶ್‌ಕುಮಾರ್‌ಗೆ ಉಪ್ರಪ್ರಧಾನಿ ಸ್ಥಾನ ವನ್ನು, ಚಂದ್ರಬಾಬು ಅಧಿಕಾರದಲ್ಲಿರುವ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಭರವಸೆ ನೀಡಿದ್ದಾರೆನ್ನಲಾಗಿದೆ.
Advertisement
ಪ್ರಿಪರೇಟರಿ ಹಂತದಲ್ಲೇ ಮೈತ್ರಿ ಮಾಡಿ ಗೆದ್ದ ಬಿಜೆಪಿಎನ್ಡಿಎ ಮತ್ತೆ ಅಧಿಕಾರಕ್ಕೆ ಬರಲು ಮುಖ್ಯ ಕಾರಣವಾಗಿರುವುದು 12 ಸ್ಥಾನ ಹೊಂದಿರುವ ನಿತೀಶ್ ಕುಮಾರ್ ಜೆಡಿಯು ಮತ್ತು 16 ಸ್ಥಾನ ಹೊಂದಿರುವ ಚಂದ್ರಬಾಬು ನಾಯ್ಡು ಟಿಡಿಪಿ. ವಾಸ್ತವವಾಗಿ ಈ ಎರಡೂ ಪಕ್ಷಗಳು ಎನ್‌ಡಿಎ ಮೈತ್ರಿಕೂಟದಿಂದ ಹೊರ ಹೋಗಿದ್ದವು. ಜನವರಿ ಮಧ್ಯಾವಧಿ ಹೊತ್ತಿಗೆ ಐಎನ್‌ಡಿಐಎ ಕೂಟದ ಮೇಲೆ ಸಿಟ್ಟಾದ ನಿತೀಶ್ ದಿಢೀರ್ ಎನ್‌ಡಿಎ ಸೇರಿದರು. ಮಾರ್ಚ್ ಹೊತ್ತಿಗೆ ಚಂದ್ರಬಾಬು ಕೂಡ ಸೇರಿಕೊಂಡರು. ಚಾಣಕ್ಯ ಅಮಿತ್ ಶಾ ತಂತ್ರವೋ, ಆಗಲೇ ಬಿಜೆಪಿಗೆ ಸೋಲಿನ ಸುಳಿವು ಸಿಕ್ಕಿತ್ತೋ ಎನ್ನುವುದು ಖಾತ್ರಿಯಿಲ್ಲ. ಆದರೆ ಈ ಮೈತ್ರಿಯೇ ಬಿಜೆಪಿಯನ್ನು ಅಧಿಕಾರದಲ್ಲಿ ಉಳಿಸಿದೆ. ಇದು ಐತಿಹಾಸಿಕ ವಿಜಯ
ಜನ ಎನ್‌ಡಿಎ ಮೇಲೆ ಸತತ 3ನೇ ಬಾರಿಗೆ ನಂಬಿಕೆ ಯಿಟ್ಟಿದ್ದಾರೆ. ಇದು ಭಾರತೀಯ ಇತಿಹಾಸದಲ್ಲಿ ಐತಿಹಾಸಿಕ ಸಾಧನೆ. ಆಂಧ್ರದಲ್ಲಿ ಚಂದ್ರಬಾಬು, ಬಿಹಾರದಲ್ಲಿ ನಿತೀಶ್ ಕುಮಾರ್ ನಾಯಕತ್ವದಲ್ಲಿ ಎನ್‌ಡಿಎ ಅತ್ಯುತ್ತಮ ಸಾಧನೆ ಮಾಡಿದೆ. ಅವರಿಗೆ ಧನ್ಯವಾದ. ಕಳೆದ 10 ವರ್ಷದಲ್ಲಿ ಮಾಡಿದ್ದ ಒಳ್ಳೆಯ ಕೆಲಸಗಳನ್ನು ಮುಂದುವರಿಸುತ್ತೇವೆ. ಜನರ ಆಶೋತ್ತರಗಳನ್ನು ಪೂರೈಸುವ ದಿಕ್ಕಿನಲ್ಲಿ ನಡೆಯುತ್ತೇವೆ.
-ನರೇಂದ್ರ ಮೋದಿ, ಪ್ರಧಾನಿ