Advertisement

ತೇಜಸ್‌ 2 ವಿನ್ಯಾಸ 2022ಕ್ಕೆ ಸಿದ್ಧ

12:32 AM Aug 24, 2019 | mahesh |

ನವದೆಹಲಿ: ದೇಶದ ರಕ್ಷಣಾ ವಲಯ ಬಹುಕಾಲದಿಂದ ನಿರೀಕ್ಷೆ ಮಾಡುತ್ತಿರುವ ತೇಜಸ್‌ ಎಂಕೆ 2 ಲಘು ಯುದ್ಧ ವಿಮಾನದ ವಿನ್ಯಾಸ 2022ಕ್ಕೆ ಸಿದ್ಧವಾಗಲಿದೆ.

Advertisement

ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅದರ ವಿನ್ಯಾಸ ಸಿದ್ಧಪಡಿಸಲಿವೆ. 2025-2026ನೇ ಸಾಲಿನಿಂದ ಬೆಂಗಳೂರಿನ ಎಚ್ಎಎಲ್ನಲ್ಲಿ ಉತ್ಪಾದನೆ ಶುರುವಾಗಲಿದೆ. ಪ್ರಸ್ತಾವಿತ ಲಘು ಯುದ್ಧ ವಿಮಾನ 17.5 ಟನ್‌ ತೂಕ ಇರಲಿದೆ. ಅದರಲ್ಲಿ ಎಇಎಸ್‌ಎ ರಾಡಾರ್‌ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.

2009ರಲ್ಲಿ ಎಕೆ 2 ಮಾದರಿ ಯುದ್ಧ ವಿಮಾನ ಹೊಂದುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಹೊಸ ಯುದ್ಧ ವಿಮಾನದಲ್ಲಿ ಜಿಇ 414 ಮಾದರಿ ಎಂಜಿನ್‌ ಇರಲಿದೆ. ಅದು ಮಿರಾಜ್‌, ಜಾಗ್ವಾರ್‌ ಮತ್ತು ಗ್ರಿಪನ್‌ ಯುದ್ಧ ವಿಮಾನಗಳ ಎಂಜಿನ್‌ಗಿಂತ ಹೆಚ್ಚು ಭಾರ ಇರಲಿದೆ. ಅದು ಮಿಗ್‌ 21 ಯುದ್ಧ ವಿಮಾನಗಳ ಸ್ಥಾನದಲ್ಲಿ ಬರಲಿದೆ. ಇದರ ಜತೆಗೆ ಏರಾನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಅತ್ಯಾಧುನಿಕ ಮಧ್ಯಮ ಕ್ರಮಾಂಕದ ಯುದ್ಧ ವಿಮಾನ (ಎಎಂಸಿಎ) ಉತ್ಪಾದನೆ ಮಾಡುವ ನಿಟ್ಟಿನಲ್ಲಿಯೂ ಕ್ಷಿಪ್ರಗತಿಯ ಹೆಜ್ಜೆ ಇಡಲು ನಿರ್ಧರಿಸಿದೆ. ಅದರಲ್ಲಿ ಎರಡು ಎಂಜಿನ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next