Advertisement
ಸಮಾಜದಲ್ಲಿ ನಾವೊಬ್ಬ ಸ್ವತಂತ್ರ ಜೀವಿ ಅಷ್ಟೆ , ಆದರೆ ನನ್ನಿಂದಲೆ ಎಲ್ಲವೂ ನಡೆಯುತ್ತದೆಂಬುದು ಮೂರ್ಖತನ. ಅನಿಶ್ಚಿತ ಸುಖಕ್ಕಾಗಿ ನಿತ್ಯವೂ ಹಪಾಹಪಿ ಪಡುವ ಭಿಕ್ಷುಕರಂತೆ ಭಗವಂತನಲ್ಲಿ ಬೇಡುವ ಅತೃಪ್ತ ವ್ಯಕ್ತಿಗಳು ನಾವು. ಆತ ಕೊಟ್ಟಾಗ ಜಗತ್ತಿನಲ್ಲಿ ನಾನೇ ಶ್ರೀಮಂತನೆಂದು ಬೀಗುತ್ತೇವೆ, ದರ್ಪ ತೋರುತ್ತೇವೆ, ಅದೆ ಉಮೇದಿನಲ್ಲಿ ನಮ್ಮನ್ನು ಕೈಹಿಡಿದು ಬೆಳೆಸಿದವರನ್ನು ಮತ್ತು ಸಾಕಿದವರನ್ನು ದೂರ ತಳ್ಳುತ್ತೇವೆ ಇದು ಎಂದೂ ಶಾಶ್ವತವಲ್ಲ. ದರ್ಪಕ್ಕೊಂದು ಕೊನೆ ಇರಬೇಕಲ್ಲವೆ ಸಾವೆ ಇಲ್ಲದ ಹಿರಣ್ಯಕಶಪುವಿನ ಅಂತ್ಯಕ್ಕೆ ಅವನ ಉದ್ಧಟತನವೆ ಕಾರಣವಲ್ಲವೆ. ದರ್ಪವು ಕೊನೆಯಾದಾಗ ಪೆಚ್ಚುಮೋರೆ ಹಾಕಿಕೊಂಡು ಏಕಾಂಗಿಯಾಗಿ ಬಾಳು ಸಾಗಿಸಬೇಕಲ್ಲ ಎಂದು ಬೀಗಿ ಬದುಕಿದ್ದ ಶರೀರಕ್ಕೆ ಇಂದು ಬಾಗಿ ಬದುಕುವ ದುಃಸ್ಥಿತಿ ತಾನೆ ಬಂದೊದಗುತ್ತದೆ.
Related Articles
Advertisement
ನಮ್ಮ ಬಾಳು ಇದರಂತೆ ಅಲ್ಲವೆ ಅಧಿಕಾರವೆಂಬ ನಶೆಯಲ್ಲಿ ಬೀಗುವ ಬದಲು ನಿಮ್ಮಲ್ಲಿ ನಾನು ಒಬ್ಬ ಈ ಪದವಿ ಪ್ರತಿಷ್ಠೆಗಳು ಎಲ್ಲವೂ ಕ್ಷಣಮಾತ್ರ. ಜಗತ್ತನ್ನೇ ಗೆದ್ದ ಅಲೆಕ್ಸಾಂರ್ಡ ಸಾಯುವಾಗ ತನ್ನ ಶಿಷ್ಯರಿಗೆ ಹೀಗೆ ಹೇಳಿದ ನಾನು ಸತ್ತಾಗ ನನ್ನ ಶವದ ಪೆಟ್ಟಿಗೆಯಿಂದ ಕೈಗಳು ಹೊರಬರುವಂತೆ ಮಾಡಿ ಅದರ ಜತೆಗೆ ಮಸಣಕ್ಕೆ ಹೋಗುವ ದಾರಿಯಲ್ಲಿ ಕೈಯೊಳಗೆ ಬಂಗಾರದ ವಸ್ತುಗಳನು ಹಾಕಿ ಅದು ಚೆಲ್ಲುತ್ತ ಹೋಗಲಿ ಶಿಷ್ಯರು ಸರಿ ಹಾಗೆ ಮಾಡುತ್ತೇವೆಂದರು. ಏಕೆ ಹೀಗೆ ಹೇಳಿದ್ದಾರೆ ಮಹಾರಾಜ ಎಂದಾಗ ನನ್ನ ಜೀವನದುದ್ದಕ್ಕೂ ನಾನು ಏಕಾಂಗಿಯಾಗೆ ಇದ್ದೆ. ಇಡಿ ದೇಶವನ್ನೆ ಗೆದ್ದೆ ಕೊನೆಗೆ ನಾನು ಏನನ್ನು ಒಯ್ಯಲಾಗಲಿಲ್ಲ. ಬರುವಾಗ ಹೇಗೆ ಒಂಟಿಯಾಗಿ ಬಂದೆನೋ ಹೋಗುವಾಗ ಹಾಗೆ ಒಬ್ಬನೆ ಹೊರಟಿದ್ದೇನೆ ಈ ಸತ್ಯ ಜಗತ್ತಿಗೆ ಗೊತ್ತಾಗಲಿ ಎಂಬುದು ಅದರ ಅರ್ಥ.
ಇದ್ದಾಗ ಎಲ್ಲವೂ ನಡೆದರೆ ಕೊನೆಗೆ ಯಾವುದು ನಡೆಯುವುದಿಲ್ಲ. ಅಂತ್ಯಕಾಲದಲ್ಲಿ ಗಂಜಿಯನ್ನು ಕುಡಿಸುವವರಿಲ್ಲದೆ ಒದ್ದಾಡಬೇಕಾಗುತ್ತದೆ. ಅಧಿಕಾರದಲ್ಲಿದ್ದಾಗ ತೋರಿದ ಜರ್ಬು ಈಗ ನಡೆಯುವುದಿಲ್ಲ. ಕೊನೆಗೆ ಒಂದು ದಿನ ಏಕಾಂಗಿಯಾಗಿ ಪರಮಾತ್ಮನ ಸಾನ್ನಿಧ್ಯವನ್ನು ಸೇರಿಬಿಡುತ್ತದೆ. ಇರುವಷ್ಟು ದಿನ ಎಲ್ಲರನ್ನೂ ಪ್ರೀತಿಯಿಂದ ಬೆರೆಯುತ್ತ ಹೋದರೆ ನಾವು ಕಾಲವಾಗಿ ಹೋದಮೇಲೂ ಜನ ನಮ್ಮನ್ನೂ ನೆನಪಿಡುತ್ತಾರೆ. ಏಕಾಂಗಿತನ ತೊರೆಯೋಣ ಜನರನ್ನು ಬೆರೆಯೋಣ.
- ಶಂಕರಾನಂದ
ಹೆಬ್ಟಾಳ