Advertisement

ಲಂಡನ್‌ ಕಡು ಸಸ್ಯಾಹಾರಿಗಳಿಗೆ ಅತ್ಯಂತ ಫ್ರೆಂಡ್ಲಿ ಸಿಟಿ!

09:41 AM Dec 04, 2019 | sudhir |

ಲಂಡನ್‌: ಸಾಮಾನ್ಯವಾಗಿ ಸಸ್ಯಾಹಾರಿಗಳಿಗೆ ಉತ್ತಮ ಊಟ-ತಿಂಡಿಗೆ ಅತಿ ಪ್ರಶಸ್ತ ಜಾಗ ಯಾವುದು ಎಂದರೆ ಹಲವರು ಅದು ಏನಿದ್ದರೂ ಭಾರತವೇ.

Advertisement

ಭಾರತದ ಯಾವುದೇ ನಗರ, ಇನ್ನಿತರ ಪ್ರದೇಶದಲ್ಲಿ ಸಸ್ಯಾಹಾರಿ ಚೆನ್ನಾಗಿ ಊಟ-ತಿಂಡಿ ಮಾಡಿಕೊಂಡು ಹಾಯಾಗಿ ಇರಬಹುದು ಎನ್ನುವುದು ನಿಮ್ಮ ಭಾವನೆಯಾಗಿರಬಹುದು. ಆದರೆ, ಇಲ್ಲೊಂದು ಸಮೀಕ್ಷೆ ಪ್ರಕಾರ ಜಗತ್ತಿನಲ್ಲಿ ಕಡು ಸಸ್ಯಾಹಾರಿಗಳಿಗೆ ಅತಿ ಸೂಕ್ತವಾದ ನಗರ ಅಂದರೆ ಲಂಡನ್‌ ಎಂದು ಹೇಳಿದೆ.

ಹ್ಯಾಪಿಕೌ ಎನ್ನುವ ಆನ್‌ಲೈನ್‌ ತಾಣ ಈ ಸಮೀಕ್ಷೆ ನಡೆಸಿದ್ದ, ಲಂಡನ್‌ನಲ್ಲಿ ಅತಿ ದೊಡ್ಡ ಮತ್ತು ಅತಿ ಹೆಚ್ಚು ಕಡು ಸಸ್ಯಾಹಾರಿ ರೆಸ್ಟೋರೆಂಟ್‌ಗಳಿವೆ ಎಂದು ಹೇಳಿದೆ. ಅಲ್ಲದೇ ಲಂಡನ್‌ನ ಹಲವು ಹೋಟೆಲ್‌ಗ‌ಳು 2017ರಲ್ಲಿ ಜಗತ್ತಿನ ಕಡು ಸಸ್ಯಾಹಾರಿ ಸ್ನೇಹಿ ರೆಸ್ಟೋರೆಂಟ್‌ಗಳಲ್ಲಿ ಸ್ಥಾನ ಪಡೆದಿವೆಯಂತೆ. ಸದ್ಯ ಲಂಡನ್‌ನಲ್ಲಿ 125 (8 ಕಿ.ಮೀ. ಆಸುಪಾಸಿನಲ್ಲಿ) ಕಡು ಸಸ್ಯಾಹಾರಿ ರೆಸ್ಟೋರೆಂಟ್‌ಗಳಿವೆಯಂತೆ. ಇಡೀ ಲಂಡನ್‌ ಪರಿಗಣಿಸಿದರೆ 152 ರೆಸ್ಟೋರೆಂಟ್‌ಗಳು ಇವೆಯಂತೆ.

ಇನ್ನು ಕಡು ಸಸ್ಯಾಹಾರಿಗಳ ಸಂಖ್ಯೆ ಲಂಡನ್‌ನಲ್ಲಿ ಹೆಚ್ಚುತ್ತಿದ್ದು, ಈಗ ಸುಮಾರು 6 ಲಕ್ಷ ಮಂದಿ ಇದ್ದಾರೆ ಎಂದು ಹೇಳುತ್ತಾರೆ. ಕಡು ಸಸ್ಯಾಹಾರ ಈಗ ಲಂಡನ್‌ನಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಆದ್ದರಿಂದ ರೆಸ್ಟೋರೆಂಟ್‌ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ.

ಜಗತ್ತಿನಲ್ಲಿ ಈಗ ಸಸ್ಯಾಹಾರಕ್ಕಿಂತಲೂ ಕಡು ಸಸ್ಯಾಹಾರ ಮಾದರಿ ಹೆಚ್ಚು ಪ್ರಸಿದ್ಧವಾಗುತ್ತಿದೆ. ಕಡು ಸಸ್ಯಾಹಾರಿಗಳು ಪ್ರಾಣಿಜನ್ಯವಾದ ಯಾವುದೇ ಉತ್ಪನ್ನಗಳನ್ನು, ಕೃತಕ ಬಣ್ಣ, ಹೆಚ್ಚು ಪಾಲಿಶ್‌ ಮಾಡಿದ, ಕೃತಕ ವಿಧಾನದಲ್ಲಿ ಮಾಡಿದ ಆಹಾರವನ್ನು ಸೇವಿಸುವುದಿಲ್ಲ. ಇದಕ್ಕೆ “ವೆಗಾನಿಸಮ್‌’ ಎಂದು ಕರೆಯುತ್ತಾರೆ. ಕಡು ಸಸ್ಯಾಹಾರಿಗಳನ್ನು “ವೆಗಾನ್‌’ಗಳು ಎಂದು ಕರೆಯುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next