Advertisement

ವಾಡಿ: ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸುದ್ದಿ ಕೇಳಿ ಮೂರ್ಛೆ ಹೋದ ಬಿಜೆಪಿ ಅಧ್ಯಕ್ಷ

02:05 PM Jun 04, 2024 | Team Udayavani |

ವಾಡಿ: ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ದಡ ಸೇರುತ್ತಿರುವ ಸಂಗತಿ ಸಹಿಸಿಕೊಳ್ಳಲಾಗದೆ ಬಿಜೆಪಿ ನಗರ ಶಕ್ತಿಕೇಂದ್ರದ ಅಧ್ಯಕ್ಷನೋರ್ವ ಸ್ಥಳದಲ್ಲೇ ಮೂರ್ಛೆ ಹೋದ ಘಟನೆ ಕಲಬುರ್ಗಿ ವಿವಿ ಮತ ಎಣಿಕೆ ಕೇಂದ್ರದಲ್ಲಿ ನಡೆದಿದೆ.

Advertisement

ಮಂಗಳವಾರ ಕಲಬುರ್ಗಿ ವಿವಿಯಲ್ಲಿ ನಡೆಯುತ್ತಿದ್ದ ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯಲ್ಲಿ ಚಿತ್ತಾಪುರ ವಿಧಾನಸಭಾ ಮತಕ್ಷೇತ್ರದ ವಿಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಪರ ಮತಗಳ ದಾಖಲೆ ಪಟ್ಟಿ ಮಾಡಿಕೊಳ್ಳುತ್ತಿದ್ದ ವಾಡಿ ನಗರ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ, ಏಕಾಏಕಿ ಕುಳಿತಲ್ಲೇ ಕುಸಿದು ಬಿದ್ದಿದ್ದಾರೆ. ಬಿಜೆಪಿ ಅಭ್ಯರ್ಥಿಯ ಹಿನ್ನೆಡೆ ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗಿದೆ ವೀರಣ್ಣ ಮೂರ್ಛೆ ಹೋಗಿದ್ದಾರೆ. ತಕ್ಷಣ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೃದಯಕ್ಕೆ ಸಂಬಂದಿಸಿದಂತೆ ಇನ್ನಿತರ ಪರೀಕ್ಷೆಗಳನ್ನು ನಡೆಸಲು ವೈದ್ಯರು ಮುಂದಾಗಿದ್ದಾರೆ ಎಂದು ಸ್ಥಳದಲ್ಲಿರುವ ಬಿಜೆಪಿ ಇಂಗಳಗಿ ಮಂಡಲ್ ಅಧ್ಯಕ್ಷ ಸೋಮು ಚೌವ್ಹಾಣ್ ಉದಯವಾಣಿಗೆ ತಿಳಿಸಿದ್ದಾರೆ.

ದೇಶದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಬೇಕು ಎಂಬುದು ವೀರಣ್ಣ ಯಾರಿ ಗುರಿಯಾಗಿತ್ತು. ನರೇಂದ್ರ ಮೋದಿ ಅವರು ಕಲಬುರ್ಗಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಚಿತ್ತಾಪುರ ತಾಲೂಕಿನಿಂದ ಮೋದಿ ಭೇಟಿಗೆ ವೀರಣ್ಣ ಆಯ್ಕೆಯಾಗಿದ್ದರು. ವಿಮಾನ ನಿಲ್ದಾಣದಲ್ಲಿ ಮೋದಿಗೆ ಹಸ್ತಲಾಘವ ನೀಡಿ ಪುಳಕಿತಗೊಂಡಿದ್ದರು. ಈ ಸಲ ಕಲಬುರ್ಗಿಯಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ದೇಹಲಿಗೆ ಕಳಿಸಲು ಶಕ್ತಿಮೀರಿ ಶ್ರಮಿಸುವುದಾಗಿ ಮೋದಿಗೆ ಮಾತು ಕೊಟ್ಟಿದ್ದರು. ಆದರೆ ಫಲಿತಾಂಶ ಮಾತ್ರ ಕಾಂಗ್ರೆಸ್ ಪರ ವಾಲುತ್ತಿರುವುದನ್ನು ಗಮನಿಸಿ ತೀವ್ರ ಬೇಸರಕ್ಕೊಳಗಾದ ವೀರಣ್ಣ ಯಾರಿ, ಕುಳಿತ ಜಾಗದಲ್ಲೇ ಮೂರ್ಛೆ ಹೋಗಿದ್ದಾರೆ ಎಂದು ಬಿಜೆಪಿ ನಾಯಕರು ಪ್ರತಿಕ್ರೀಯಿಸಿದ್ದಾರೆ.

ಇದನ್ನೂ ಓದಿ: LokSabha Result: ದೇವರನಾಡು ಕೇರಳದಲ್ಲಿ ಖಾತೆ ತೆರೆದ ಬಿಜೆಪಿ, ಅಣ್ಣಾಮಲೈ ಕೈತಪ್ಪಿದ ಗೆಲುವು

Advertisement

Udayavani is now on Telegram. Click here to join our channel and stay updated with the latest news.

Next