ನರಗುಂದ:ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಸೇರುವ ಗದಗ ಜಿಲ್ಲೆ ನರಗುಂದ ವಿಧಾನಸಭಾ ಕ್ಷೇತ್ರ ಬಂಡಾಯದ ನೆಲವಾಗಿದ್ದು, ರೈತಪರ ಹೋರಾಟಗಳ ಕರ್ಮಭೂಮಿಯಾಗಿದೆ. ಈ ನೆಲದಲ್ಲಿ ನಡೆದ ಹೋರಾಟಗಳಿಗೆ ಸರ್ಕಾರಗಳೇ ಬೆಚ್ಚಿ ಬಿದ್ದಿರುವ ಉದಾಹರಣೆಗಳಿವೆ. ಇಲ್ಲಿಂದಲೇ ಆರಂಭವಾದ ಹೋರಾಟಗಳು ರಾಜ್ಯವ್ಯಾಪಿ ಆವರಿಸಿರುವುದು ಇತಿಹಾಸ ಕಣ್ಮುಂದಿದೆ.
Advertisement
ಇದನ್ನೂ ಓದಿ:ದಸರಾ ಹಬ್ಬಕ್ಕೆ ಪ್ಯಾನ್ ಇಂಡಿಯಾ ಫೈಟ್: ʼಮಾರ್ಟಿನ್ʼಗೆ ರಜಿನಿ, ಜೂ.NTR ಸಿನಿಮಾ ಟಕ್ಕರ್
ಗಮನಾರ್ಹ ಸಂಗತಿ. ಪ್ರಸ್ತುತ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದಿನ ಬಿಜೆಪಿ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಸಿ.ಸಿ. ಪಾಟೀಲರು ಹಾಲಿ ಶಾಸಕರಾಗಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ 7,979 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಸಿ.ಸಿ. ಪಾಟೀಲರು ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕೂದಲೆಳೆ ಅಂತರದಿಂದ (ಕೇವಲ 1,791 ಮತಗಳ) ಗೆಲುವು ಸಾಧಿಸಿದ್ದರು. 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ನಂತರ ನರಗುಂದ ವಿಧಾನಸಭಾ ಕ್ಷೇತ್ರ ಬಾಗಲಕೋಟೆ
ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರ್ಪಡೆಯಾಯಿತು.
Related Articles
Advertisement
ಲೋಕಸಭಾ ಚುನಾವಣೆ ಲೆಕ್ಕಾಚಾರ ಏನು?: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪ ರ್ಧಿಸಿದ್ದ 14 ಪಕ್ಷಗಳ ಅಭ್ಯರ್ಥಿಗಳ ಪೈಕಿ ಬಿಜೆಪಿ 72,835 (ಶೇ. 48.48) ಮತಗಳನ್ನು ಪಡೆದರೆ, ಕಾಂಗ್ರೆಸ್ 71,044 (ಶೇ. 47.29) ಮತಗಳನ್ನು ಪಡೆದಿತ್ತು. ಈ ಬಾರಿ ಕಾಂಗ್ರೆಸ್‌ನ ಗ್ಯಾರಂಟಿ ಲಾಭ ಪಡೆದ ಮಹಿಳೆಯರು ಕಾಂಗ್ರೆಸ್‌ಗೆ ಅಧಿಕ ಮತಗಳನ್ನು ಚಲಾಯಿಸಲಿದ್ದಾರೆ ಎಂದು ಕಾಂಗ್ರೆಸ್ ಲೆಕ್ಕಾಚಾರ ಹಾಕಿ ಕುಳಿತಿದ್ದರೆ, ಪ್ರಧಾನಿ ನೇಂದ್ರ ಮೋದಿ ಅವರ ಭ್ರಷ್ಟಾಚಾರ ರಹಿತ ಆಡಳಿತ, ಮೋದಿ ಹವಾ ಕಳೆದ ಮೂರು ಲೋಕಸಭಾ ಚುನಾವಣೆಗಿಂತಲೂ ಅಧಿಕ ಅಂತರದ ಮತಗಳು ಬಿಜೆಪಿ ಅಭ್ಯರ್ಥಿಗೆ ಬೀಳಲಿವೆ ಎಂಬ ಲೆಕ್ಕಾಚಾರ ಬಿಜೆಪಿಪಾಳಯದಲ್ಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಯಾವಗಲ್ ಅವರು ಅಲ್ಪಮತಗಳ ಅಂತರದಿಂದ ಸೋಲನುಭವಿಸಿದ್ದರು. ಆ ಸೋಲಿನ ಕಹಿ ಅನುಭವ ಮರೆಯಲು ಮತದಾರರು ಕಾಂಗ್ರೆಸ್‌ಗೆ ಅಧಿಕ ಮತಗಳನ್ನು ಹಾಕಬೇಕೆಂದು ನಿರ್ಧರಿಸಿ ಮತ ಚಲಾಯಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಸಂಪೂರ್ಣ ಅನುಷ್ಠಾನಗೊಂಡಿದ್ದು, ಮತದಾರರು ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟಿದ್ದಾರೆ.
*ಪ್ರವೀಣ ಯಾವಗಲ್, ಅಧ್ಯಕ್ಷ, ನರಗುಂದ ಬ್ಲಾಕ್ ಕಾಂಗ್ರೆಸ್ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕೇಂದ್ರ ಸರಕಾರದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸಂಸದ ಪಿ.ಸಿ. ಗದ್ದಿಗೌಡರ ಶ್ರಮ ವಹಿಸಿದ್ದಾರೆ. ಸೌಮ್ಯ-ಶಾಂತ ಸ್ವಭಾವದ ಗದ್ದಿಗೌಡರ ಅವರು ಮತದಾರರ ಕಷ್ಟಗಳಲ್ಲಿ
ಭಾಗಿಯಾಗಿದ್ದಾರೆ. ನರೇಂದ್ರ ಮೋದಿ ಅವರ ಆಡಳಿತ, ಗದ್ದಿಗೌಡರ ಅವರ ವ್ಯಕ್ತಿತ್ವ ಬಿಜೆಪಿ ಗೆಲುವಿಗೆ ಕಾರಣವಾಗಲಿದೆ.
*ಅಜ್ಜನಗೌಡ ಪಾಟೀಲ, ಅಧ್ಯಕ್ಷ, ನರಗುಂದ ಬಿಜೆಪಿ ಮಂಡಲ *ಅರುಣಕುಮಾರ ಹಿರೇಮಠ