Advertisement

Loksabha; 2 ದಿನದಲ್ಲಿ ಬಿಜೆಪಿ ಮೊದಲಪಟ್ಟಿ ಬಿಡುಗಡೆ?ಕಾರ್ಯಕ್ಷಮತೆ ತೋರದ ಸಂಸದರಿಗೆ ಕೊಕ್‌?

11:29 AM Feb 29, 2024 | Team Udayavani |

ನವದೆಹಲಿ: ಲೋಕಸಭೆ ಚುನಾವಣೆಗೆ ಮಾ.1 ಅಥವಾ 2ರಂದು ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಗುರುವಾರ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ನಿರ್ಣಾಯಕ ಸಭೆ ನಡೆಯಲಿದ್ದು, ಪಕ್ಷವು ಮೊದಲ ಪಟ್ಟಿಯನ್ನು ಅಂತಿಮಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಮೊದಲ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೆಸರುಗಳು ಇರುವ ನಿರೀಕ್ಷೆಯಿದೆ. ಮೋದಿ ಅವರು ಮತ್ತೂಮ್ಮೆ ವಾರಾಣಸಿ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ.

ಅರ್ಧದಷ್ಟು ಸಂಸದರಿಗೆ ಟಿಕೆಟ್‌ ಇಲ್ಲ?: ಉತ್ತರ ಪ್ರದೇಶದಲ್ಲಿ ಬಿಜೆಪಿ 62 ಸಂಸದರನ್ನು ಹೊಂದಿದೆ. ಕಾರ್ಯ ಕ್ಷಮತೆ ತೋರದ, ಕ್ಷೇತ್ರಗಳಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಅರ್ಧದಷ್ಟು ಸಂಸದರಿಗೆ ಟಿಕೆಟ್‌ ನಿರಾಕರಿಸಲು ಪಕ್ಷ ಯೋಜಿಸಿದೆ.

ಹೊಸ ಮುಖಗಳಿಗೆ ಮನ್ನಣೆ: 2019ರ ಚುನಾವಣೆಯಲ್ಲಿ ರಾಜಸ್ಥಾನದ ಎಲ್ಲಾ 25 ಕ್ಷೇತ್ರಗಳನ್ನು ಎನ್‌ಡಿಎ ಕ್ಲೀನ್‌ ಸ್ವೀಪ್‌ ಮಾಡಿತ್ತು. ತನ್ನ 7 ಸಂಸದರನ್ನು ಇತ್ತೀಚಿಗೆ ನಡೆದ ರಾಜಸ್ಥಾನ ವಿಧಾನಸಭೆ ಚುನಾವಣೆ ಯಲ್ಲಿ ಬಿಜೆಪಿ ಕಣಕ್ಕಿಳಿಸಿತ್ತು. ಆದರೆ ಈ ಪೈಕಿ ನಾಲ್ವರು ಜಯ ಸಾಧಿಸಿದ್ದರು. ಸೋತ ಮೂವರು ಸಂಸದರಿಗೆ ಟಿಕೆಟ್‌ ನಿರಾಕರಿಸಲಾಗುತ್ತದೆ. ಅಲ್ಲದೇ, 12 ಮಂದಿ ಹೊಸಬರನ್ನು ಕಣಕ್ಕಿಳಿಸಲಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next