ಹೊಸದಿಲ್ಲಿ: ಲೋಕಸಭೆ ಚುನಾವಣೆ ಎಲ್ಲಾ ಪಕ್ಷಗಳು ಸಿದ್ದತೆ ನಡೆಸುತ್ತಿರುವಂತೆ ಬಹುಜನ ಸಮಾಜವಾದಿ ಪಕ್ಷವು (ಬಿಎಸ್ ಪಿ) ಏಕಾಂಗಿಯಾಗಿ ಚುನಾವಣೆ ಎದುರಿಸಲು ಮುಂದಾಗಿದೆ. ಬಿಎಸ್ ಪಿ ಪಕ್ಷದ ನಾಯಕಿ ಮಾಯಾವತಿ ಅವರು ಈ ಬಗ್ಗೆ ಸ್ಪಷ್ಟಪಡಿಸಿದ್ದು, ತಮ್ಮ ಪಕ್ಷವು ಯಾವುದೇ ಮೈತ್ರಿಗೆ ಒಳಪಡುವುದಿಲ್ಲ ಎಂದಿದ್ದಾರೆ.
ಬಿಎಸ್ ಪಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಆದರೆ ಚುನಾವಣೋತ್ತರ ಮೈತ್ರಿಗೆ ಆಯ್ಕೆ ಮುಕ್ತವಾಗಿದೆ ಎಂದು ಮಾಯಾವತಿ ಹೇಳಿದ್ದಾರೆ.
ಬಿಎಸ್ ಪಿಯು ಉತ್ತರ ಪ್ರದೇಶದಲ್ಲಿ ಬೇರೊಂದು ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದಾಗಲೆಲ್ಲಾ ಅದು ಯಾವುದೇ ಲಾಭಕ್ಕಿಂತ ಹೆಚ್ಚಿನ ನಷ್ಟವನ್ನು ಅನುಭವಿಸುತ್ತದೆ, ಅಲ್ಲದೆ ಮತಗಳು ಇತರ ಪಕ್ಷಕ್ಕೆ ವರ್ಗಾಯಿಸಲ್ಪಡುತ್ತವೆ ಎಂದು ಮಾಯಾವತಿ ಹೇಳಿದ್ದಾರೆ.
“ಯುಪಿಯಲ್ಲಿ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಎಸ್ ಪಿ ಲಾಭಕ್ಕಿಂತ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಯಿತು, ಏಕೆಂದರೆ ಅದರ ಮತಗಳು ಮೈತ್ರಿ ಪಾಲುದಾರರಿಗೆ ಸ್ಪಷ್ಟವಾಗಿ ವರ್ಗಾವಣೆಯಾಗುತ್ತವೆ ಎಂದು ಹೇಳಿದರು.
ಬಿಎಸ್ ಪಿ ಈ ಹಿಂದೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು, ಅದರಲ್ಲಿ ಕಾಂಗ್ರೆಸ್ ಲಾಭ ಪಡೆದಿದೆ.