Advertisement

Election Results:ದೇಶದೆಲ್ಲೆಡೆ ಅಂಚೆ ಮತಗಳ ಎಣಿಕೆ ಆರಂಭ; ಬಿಜೆಪಿ ಅಭ್ಯರ್ಥಿಗಳಿಗೆ ಮುನ್ನಡೆ

08:15 AM Jun 04, 2024 | Team Udayavani |

ನವದೆಹಲಿ/ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕ್ರಿಯೆ ಆರಂಭಗೊಂಡಿದೆ. ಜಗತ್ತಿನ ಅತೀ ದೊಡ್ಡ ಚುನಾವಣೆಯ ಫ‌ಲಿತಾಂಶದ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.

Advertisement

ಸುಮಾರು 82 ದಿನಗಳ ಕಾಲ ನಡೆದ ಸುದೀರ್ಘ‌ ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗಳು ಆರಂಭಗೊಂಡಿದೆ.

ಮೊದಲಿಗೆ ಅಂಚೆ ಮತಗಳ ಎಣಿಗೆ ಆರಂಭಗೊಂಡಿದ್ದು, ಆ ಬಳಿಕ ವಿದ್ಯುನ್ಮಾನ ಮತಯಂತ್ರಗಳಲ್ಲಿರುವ ಮತಗಳನ್ನು ಲೆಕ್ಕ ಹಾಕಲಾಗುತ್ತದೆ ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಲಭಸುವ ಸಾಧ್ಯತೆಯಿದೆ.

ಅಂಚೆ ಮತದಲ್ಲಿ ಬಿಜೆಪಿಗೆ ಮುನ್ನಡೆ:

ರಾಜ್ಯದ ತುಮಕೂರು, ಕೋಲಾರ ಹಾಗೂ ಮೈಸೂರು – ಕೊಡಗು ಕ್ಷೇತ್ರ ಸೇರಿದಂತೆ ದೇಶದೆಲ್ಲೆಡೆ ಅಂಚೆ ಮತಗಳ ಎಣಿಕೆ ಶುರುವಾಗಿದೆ.

Advertisement

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಅಂಚೆ ಮತಗಳಲ್ಲಿ ಆರಂಭದಲ್ಲೇ ಬಿಜೆಪಿ ಮೇಲುಗೈ ಸಾಧಿಸಿದೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೆ ಹಿನ್ನಡೆ ಅನುಭವಿಸಿದ್ದಾರೆ.

ಇತ್ತ ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ, ಮಂಡ್ಯದಲ್ಲಿ ಹೆಚ್‌ ಡಿ ಕುಮಾರಸ್ವಾಮಿ ಅಂಚೆ ಮತಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ.

ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅಂಚೆ ಮತಗಳಲ್ಲಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಬ್ರಿಜೇಶ್‌ ಚೌಟ ಮುನ್ನಡೆ ಕಾಯ್ದುಕೊಂಡಿದ್ದಾರೆ.

543 ಲೋಕಸಭಾ ಕ್ಷೇತ್ರಗಳಿಗಾಗಿ ಒಟ್ಟು 8,360 ಅಭ್ಯರ್ಥಿಗಳು ಸ್ಪರ್ಧೆ: ಜಗತ್ತಿನ ಅತೀ ದೊಡ್ಡ ಚುನಾವಣೆ ಇದಾಗಿರುವುದರಿಂದ ದೇಶದ ಒಟ್ಟು 543 ಲೋಕಸಭಾ ಕ್ಷೇತ್ರಗಳಿಗಾಗಿ 8,360 ಅಭ್ಯರ್ಥಿಗಳ ಭವಿಷ್ಯ ಇಂದು ಹೊರಬೀಳಲಿದೆ.

ಇದರಿಂದರೊಂದಿಗೆ ಆಂಧ್ರ ಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆ ಸೇರಿದಂತೆ 25 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫ‌ಲಿತಾಂಶವೂ ಮಂಗಳವಾರವೇ ಹೊರಬೀಳಲಿದೆ.

ಉಲ್ಟಾ ಆಗಬಹುದೇ ಸಮೀಕ್ಷೆಗಳು? : ಇನ್ನು ಬಹುತೇಕ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಎನ್‌ ಡಿಎ ಒಕ್ಕೂಟ ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂದು ಹೇಳಿದೆ. ಇನ್ನೊಂದೆಡೆ ʼಇಂಡಿಯಾ ಒಕ್ಕೂಟʼ ನಮಗೆ ಸಮೀಕ್ಷೆಗಳ ಮೇಲೆ ನಂಬಿಕೆ ಮೇಲೆ. ಕನಿಷ್ಠ 295 ಸೀಟ್‌ ಗಳನ್ನು ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next