Advertisement

ಶೀಘ್ರ ಹೋಟೆಲ್‌ನಿಂದ ಲೋಕಪಾಲ ಸ್ಥಳಾಂತರ

12:12 AM May 03, 2019 | Team Udayavani |

ಹೊಸದಿಲ್ಲಿ: ಇಲ್ಲಿಯ ಚಾಣಕ್ಯಪುರಿಯ ”

Advertisement

‘ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೋಕಪಾಲ ಕಚೇರಿ ಈಗ ತನ್ನ ಸ್ವಂತ ಕಚೇರಿಗೆ ಸ್ಥಳಾಂತರಗೊಳ್ಳಲಿದೆ. ಈ ಕುರಿತು ಆರ್‌ಟಿಐ ಅಡಿ ಕೇಳಲಾಗಿದ್ದ ಪ್ರಶ್ನೆಗೆ ಉತ್ತರಿಸಿರುವ ಸಿಬ್ಬಂದಿ ಸಚಿವಾಲಯ. ಲೋಕಪಾಲಕ್ಕೆ ಶಾಶ್ವತ ಕಚೇರಿಯ ವ್ಯವಸ್ಥೆ ಮಾಡಲು ಸರಕಾರ‌ ಪ್ರಯತ್ನ ನಡೆಸಿದೆ. ಇನ್ನು ಕೆಲವೇ ದಿನಗಳಲ್ಲಿ ಸ್ವಂತ ಕಚೇರಿಗೆ ಲೋಕಪಾಲ ಸ್ಥಳಾಂತರಗೊಳ್ಳಲಿದೆ ಎಂದಿದೆ. ಅಶೋಕ ಹೋಟೆಲ್‌ನಲ್ಲಿ ಪಡೆದಿರುವ ಕೊಠಡಿಗೆ ಇನ್ನೂ ಬಾಡಿಗೆ ಪಾವತಿಸಿಲ್ಲ ಎಂದು ಕೂಡಾ ಹೇಳಿದೆ. ಏ. 23ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಲೋಕಪಾಲ ಅಧ್ಯಕ್ಷರಾಗಿ ನ್ಯಾ. ಪಿನಾಕಿ ಚಂದ್ರ ಘೋಸ್‌ ಅವರಿಗೆ ಪ್ರಮಾಣ ವಚನ ಬೋಧಿಸಿದಾಗಿನಿಂದಲೂ ಲೋಕಪಾಲ ಕಚೇರಿ ದ ಅಶೋಕ ಹೋಟೆಲ್‌ನಲ್ಲಿಯೇ ಕಾರ್ಯನಿರ್ವಹಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next