Advertisement

ಕೋವಿಡ್ 19 ವೈರಸ್ ನಿಂದ ಲೋಕಪಾಲ್ ಸದಸ್ಯ ಜಸ್ಟೀಸ್ ಎಕೆ ತ್ರಿಪಾಠಿ ಸಾವು

08:27 AM May 04, 2020 | Nagendra Trasi |

ನವದೆಹಲಿ: ಲೋಕಪಾಲ್ ಸದಸ್ಯ ನಿವೃತ್ತ ಜಸ್ಟೀಸ್ ಎಕೆ ತ್ರಿಪಾಠಿ(62ವರ್ಷ) ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ. ಏಪ್ರಿಲ್ 2ರಂದು ತ್ರಿಪಾಠಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Advertisement

ತ್ರಿಪಾಠಿ ಪುತ್ರಿ ಹಾಗೂ ಅಡುಗೆಯವರಿಗೂ ಅಪಾಯಕಾರಿ ಕೋವಿಡ್ 19 ವೈರಸ್ ತಗುಲಿದ್ದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ. ಜಸ್ಟೀಸ್ ತ್ರಿಪಾಠಿ ಅವರು ಚತ್ತೀಸ್ ಗಢದ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶರಾಗಿದ್ದು, ಕೋವಿಡ್ 19 ವೈರಸ್ ಗೆ ತುತ್ತಾಗಿದ್ದ ಅವರನ್ನು ಏಮ್ಸ್ ಐಸಿಯು ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ವರದಿ ತಿಳಿಸಿದೆ.

ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ತ್ರಿಪಾಠಿ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ತಾತ್ರಿ 8.45ಕ್ಕೆ ವಿಧಿವಶರಾಗಿರುವುದಾಗಿ ವರದಿ ವಿವರಿಸಿದೆ. ಭ್ರಷ್ಟಾಚಾರ ನಿಗ್ರಹ ಓಂಬುಡ್ಸ್ ಮನ್ ಲೋಕಪಾಲ್ ನ ನಾಲ್ಕು ಮಂದಿ ಜ್ಯುಡಿಶಿಯಲ್ ಸದಸ್ಯರಲ್ಲಿ ಜಸ್ಟೀಸ್ ತ್ರಿಪಾಠಿ ಕೂಡಾ ಒಬ್ಬರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next