Advertisement

ಕೊಂಕಣಿ ಲೋಕೋತ್ಸವಕ್ಕೆ:ಗೌರವ ಪ್ರಶಸ್ತಿ, ಪುಸ್ತಕ ಪುರಸ್ಕಾರ ಪ್ರದಾನ

03:45 AM Feb 13, 2017 | Team Udayavani |

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಮತ್ತು ನೇತೃತ್ವದಲ್ಲಿ ನಗರದ ಪುರಭವನದಲ್ಲಿ ನಡೆದ 3 ದಿನಗಳ ಕೊಂಕಣಿ ಲೋಕೋತ್ಸವ ರವಿವಾರ ಸಂಜೆ ಮೂರು ಮಂದಿಗೆ 2016ನೇ ಸಾಲಿನ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಹಾಗೂ 3 ಮಂದಿಗೆ ಪುಸ್ತಕ ಬಹುಮಾನ ವಿತರಣೆಯೊಂದಿಗೆ ಸಮಾರೋಪಗೊಂಡಿತು. 

Advertisement

ಗೌರವ ಪ್ರಶಸ್ತಿಗಳನ್ನು ಮಂಗಳೂರಿನ ಸಿರಿಲ್‌ ಜೆ. ಸಿಕ್ವೇರಾ (ಸಾಹಿತ್ಯ), ಶಿರಸಿಯ ವಾಸುದೇವ ಶಾನುಭೋಗ್‌ (ಕಲೆ), ಯಲ್ಲಾಪುರದ ಕ್ಲಾರಾ ಸಿದ್ದಿ (ಜಾನಪದ) ಅವರಿಗೆ ಹಾಗೂ ಪುಸ್ತಕ ಬಹುಮಾನಗಳನ್ನು ಅಕಾಡೆಮಿಯ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ (ಕನ್ನಡದ 30 ಕಥೆಗಳ ಭಾಷಾಂತರ), ಕಾರ್ಕಳದ ಉಮೇಶ್‌ ಗೌತಮ್‌ ನಾಯಕ್‌ (ಕಾವ್ಯ- ಶ್ರೀನಿವಾಸ ಕಲ್ಯಾಣ), ಮಂಗಳೂರಿನ ಸಿ| ಆಗ್ನೇಸಿಯಾ ಫ್ರಾಕ್‌ (ಅಧ್ಯಯನ ಕೃತಿ- ಅಮೃತ್‌ ತುಜ್ಯಾ ಹಾತಿಂ) ಅವರಿಗೆ ಪ್ರದಾನ ಮಾಡಲಾಯಿತು.

ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್‌ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ಶಾಸಕ ಬಿ.ಎ. ಮೊದಿನ್‌ ಬಾವಾ, ಮಂಗಳೂರು ಧರ್ಮಧಿಪ್ರಾಂತದ ಪ್ರದಾನ ಗುರು ಮೊ| ಡೆನಿಸ್‌ ಮೊರಾಸ್‌ ಪ್ರಭು, ಮೈಸೂರಿನ ಉದ್ಯಮಿ ಹಾಗೂ ಜಿಎಸ್‌ಬಿ ಸಭಾದ ಗೌರವಾಧ್ಯಕ್ಷ ಜಗನ್ನಾಥ ಶೆಣೈ, ಮುಂಬಯಿನ ಹಿರಿಯ ಕೊಂಕಣಿ ಮುಖಂಡ ಡಾ| ಸಿ.ಎನ್‌. ಶೆಣೈ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಜಾನಕಿ ಬ್ರಹ್ಮಾವರ, ಮುಂಬಯಿನ ಹಿರಿಯ ಬ್ಯಾಂಕಿಂಗ್‌ ಧುರೀಣ ಜಾನ್‌ ಡಿ’ಸಿಲ್ವಾ, ಕೊಂಕಣಿ ಅಕಾಡೆಮಿ ರಿಜಿಸ್ಟ್ರಾರ್‌ ಡಾ| ಬಿ. ದೇವದಾಸ್‌ ಪೈ ಉಪಸ್ಥಿತರಿದ್ದರು.

ಕೊಂಕಣಿಯ ಶಕ್ತಿ ಪ್ರದರ್ಶನ: ರೈ
ಕೊಂಕಣಿ ಜನರಿಗೆ ಮತ್ತು ಭಾಷೆಗೆ ವಿಶೇಷವಾದ ಶಕ್ತಿ ಇದೆ ಎನ್ನುವುದನ್ನು ಈ ಲೋಕೋತ್ಸವದ ಮೂಲಕ ಜಗತ್ತಿಗೆ ಪ್ರಸ್ತುತಪಡಿಸಿದ್ದಾರೆ ಎಂದು ಸಚಿವ ಬಿ. ರಮಾನಾಥ ರೈ ಹೇಳಿದರು.

ಪಿಯುಸಿ ಹಂತದಲ್ಲಿ ಕೊಂಕಣಿ: ಐವನ್‌
ಪಿಯುಸಿ ಹಂತದಲ್ಲಿ ಕೊಂಕಣಿ ಕಲಿಕೆ ಮತ್ತು ಮಂಗಳೂರಿನಲ್ಲಿ ಕೊಂಕಣಿ ಭವನ ನಿರ್ಮಾಣ ಮಾಡುವ ಕುರಿತು ಹಾಗೂ ಅಕಾಡೆಮಿಗೆ ಇನ್ನೂ ಅಧಿಕ ಅನುದಾನ ಒದಗಿಸುವ ವಿಚಾರವನ್ನು ಮುಂದಿನ ರಾಜ್ಯ ಬಜೆಟ್‌ನಲ್ಲಿ ಸೇರಿಸುವ ಬಗ್ಗೆ ಮುಖ್ಯಮಂತ್ರಿ ಜತೆ ಸಮಾಲೋಚನೆ ನಡೆಸುತ್ತೇನೆ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಭರವಸೆ ನೀಡಿದರು.

Advertisement

ಅಕಾಡೆಮಿ ಅಧ್ಯಕ್ಷ ರೋಯ್‌ ಕ್ಯಾಸ್ತೆಲಿನೊ ಪ್ರಸ್ತಾವನೆಗೈದು, 3 ದಿನಗಳ ಲೋಕೋಧಿತ್ಸವದ ಸಂದರ್ಭ ತಲಾ ಹತ್ತು ಮಕ್ಕಳು, ಮಹಿಳೆಯರು, ಯುವಜನರು, ಪುರುಷರು ಸೇರಿದಂತೆ 40 ಮಂದಿ ಕೊಂಕಣಿ ಸಾಧಕಧಿರನ್ನು ಸಮ್ಮಾಧಿನಿಸಧಿಲಾಗಿದೆ. 41 ಕೊಂಕಣಿ ಸಮುದಾಯಗಳ ಕಲೆ, ಸಂಸ್ಕೃತಿಯ ವೈವಿಧ್ಯ ಪ್ರದರ್ಶಿಸಲಾಗಿದೆ ಎಂದರು.

ಅಕಾಡೆಮಿ ರಿಜಿಸ್ಟ್ರಾರ್‌ ಡಾ| ಬಿ. ದೇವದಾಸ್‌ ಪೈ, ಸದಸ್ಯರಾದ ಡಾ| ಚೇತನ್‌ ನಾಯಕ್‌, ಕಮಲಾಕ್ಷ ಶೇಟ್‌, ಶೇಖರ ಗೌಡ, ಜಯರಾಂ ಸಿದ್ದಿ, ಡಾ| ಅರವಿಂದ ಶ್ಯಾನುಭೋಗ್‌, ಅಶೋಕ್‌, ಶಿವಾನಂದ ಶೇಟ್‌, ಮಮತಾ ಕಾಮತ್‌, ಡಾ| ವಾರಿಜಾ ನೀರೆಬೈಲ್‌, ಯಾಕೂಬ್‌ ಅಹ್ಮದ್‌ಜೀ, ಲುಲುಸ್‌ ಕುಟಿನ್ಹೊ, ಕೆ. ದೇವದಾಸ್‌ ಪೈ, ಲಾರೆನ್ಸ್‌ ಡಿ’ಸೋಜಾ ಉಪಸ್ಥಿತರಿದ್ದರು. ನರೇಶ್‌ ಕಿಣಿ ಮತ್ತು ಐರಿನ್‌ ರೆಬೆಲ್ಲೊ ನಿರ್ವಹಿಸಿದರು.

ಸಮಾರಂಭದ ಪೂರ್ವಭಾವಿಯಾಗಿ ಮಾಂಡ್‌ ಸೊಭಾಣ್‌ ಖ್ಯಾತಿಯ ಎರಿಕ್‌ ಒಝೇರಿಯೊ ಹಾಗೂ ಖ್ಯಾತ ಗಾಯಕಿ ವಸಂತಿ ಆರ್‌. ನಾಯಕ್‌ ನೇತೃತ್ವದ ನೂರು ಸಂಗೀತಗಾರರು “ಕೊಂಕಣಿ ಆವುÕಕ್‌ ಜಯ ಮØಣುಂಯಾಂ’ ಗೀತೆ, ಲೋಕೋತ್ಸವದ ಆಶಯ ಗೀತೆ 
ಹಾಗೂ ಕರ್ನಾಟಕ ನಾಡಗೀತೆಯೊಂದಿಗೆ ಕಾರ್ಯ ಕ್ರಮಕ್ಕೆ ಆರಂಭ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next