Advertisement

ಕರೀನಾಗೆ ಕಾಂಗ್ರೆಸ್‌ ಟಿಕೆಟ್?

02:22 AM Jan 22, 2019 | Team Udayavani |

ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‌ನಲ್ಲೂ ಬಾಲಿವುಡ್‌ ತಾರೆಯೊಬ್ಬರನ್ನು ತನ್ನ ಬಳಗದಿಂದ ಸ್ಪರ್ಧೆಗಳಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ. ಮಧ್ಯಪ್ರದೇಶದ ಭೋಪಾಲ್‌ ಕ್ಷೇತ್ರದಿಂದ ನಟಿ ಕರೀನಾ ಕಪೂರ್‌ರನ್ನು ಕಣಕ್ಕಿಳಿಸಲು ಆಲೋಚಿಸಲಾಗಿದ್ದು, ಈಗಾಗಲೇ ಕಾಂಗ್ರೆಸ್‌ನ ಗುಡ್ಡು ಚೌಹಾಣ್‌, ಅನಾಸ್‌ ಖಾನ್‌, ಕರೀನಾ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆಂದು ಹೇಳಲಾಗಿದೆ. ಆದರೆ, ನನಗೆ ರಾಜಕೀಯ ಸೇರುವ ಆಸೆಯಿಲ್ಲ. ನನ್ನ ಗುರಿ ಸಿನಿಮಾ ಮಾತ್ರ ಎಂದಿದ್ದಾರೆ ಕರೀನಾ.

Advertisement
Advertisement

Udayavani is now on Telegram. Click here to join our channel and stay updated with the latest news.

Next