ಬಿಹಾರದ ನಲವತ್ತು ಕ್ಷೇತ್ರಗಳಲ್ಲಿ ಒಂದಾಗಿದೆ ಮಾಧೇಪುರ. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಕೆಲವೊಂದು ವಿಧಾನಸಭಾ ಕ್ಷೇತ್ರಗಳು ಬದಲಾವಣೆಯಾಗಿವೆ. ಹಿಂದಿನ ಸಂದರ್ಭದಲ್ಲಿಯೂ 6 ಕ್ಷೇತ್ರಗಳು ಇದ್ದವು. ಈಗಲೂ ಅಷ್ಟೇ ಇದ್ದರೂ, ಕೆಲವೊಂದು ಕ್ಷೇತ್ರಗಳ ಸೇರ್ಪಡೆಯಲ್ಲಿ ಬದಲಾವಣೆ ಮಾಡಲಾಗಿದೆ. ಈಗ ಆಲಂನಗರ್, ಬಿಹಾರಿಗಂಜ್, ಮಾಧೇಪುರ, ಸೋನ್‌ಬಾಶಾì, ಸರ್ಹಸಾ, ಮಹಿಷಿ ಎಂಬ ಕ್ಷೇತ್ರ ಗಳಿವೆ. ಕಳೆದ ಬಾರಿ ಜೆಡಿಯು ಅಭ್ಯರ್ಥಿಯಾಗಿದ್ದ ಶರದ್ ಯಾದವ್ ಈಗ ಆರ್‌ಜೆಡಿ, ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಎರಡು ಬಾರಿ ಅವರು ಲಾಲು ಯಾದವ್‌ರಿಂದಲೇ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.
ಸದ್ಯ ಜೈಲುವಾಸಿಯಾಗಿರುವ ಲಾಲು ಪ್ರಸಾದ್ ಯಾದವ್ ಈ ಕ್ಷೇತ್ರದ ಸಂಸದರಾಗಿದ್ದರು. ಲಾಲು ಮತ್ತು ಶರದ್ 1997 ರಿಂದ ವಿರುದ್ಧ ಮುಖಗಳಾಗಿದ್ದರು. ಆ ವರ್ಷ ಜನತಾದಳ ವಿಭಜ ನೆಗೊಂಡು ಆರ್‌ಜೆಡಿ ರಚನೆಯಾಯಿತು. 1999ರಲ್ಲಿ ಬಿಹಾರ ದಲ್ಲಿ ಆರ್‌ಜೆಡಿ ಆಡಳಿತ ಇದ್ದರೂ, ಈ ಕ್ಷೇತ್ರದಿಂದ ಶರದ್ ಯಾದವ್ ಲಾಲುಗೆ ಸೋಲು ಕಾಣಿಸಿದ್ದರು. ಆ ಸಂದರ್ಭದಲ್ಲಿ ಎದುರಾಳಿ ಅಭ್ಯರ್ಥಿ ಅಕ್ರಮ ಎಸಗಿದ್ದರು ಎಂದು ಆರೋಪಿಸಿ ಶರದ್ ಮತ ಎಣಿಕೆ ಕೇಂದ್ರದಲ್ಲಿಯೇ ಧರಣಿ ನಡೆಸಿದ್ದರು.
ಲಾಲು-ಶರದ್ ಮುನಿಸು 2015ರಲ್ಲಿ ಮಹಾಮೈತ್ರಿಕೂಟ ರಚನೆಯಾಗುವ ವರೆಗೆ ಮುಂದುವರಿದಿತ್ತು. ಈಗ ಏನಿದ್ದರೂ ಭಾಯಿ ಭಾಯಿ ಅನ್ನೋಣ. ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿಕೂಟ ಎದುರಿಸಲು ಮಹಾಮೈತ್ರಿಕೂಟ ರಚನೆ ಮಾಡಲು ಕಾಂಗ್ರೆಸ್, ಆರ್‌ಜೆಡಿ ಮತ್ತು ಇತರ ಪಕ್ಷಗಳ ನಾಯಕರ ಜತೆಗೆ ಮಾತುಕತೆ ನಡೆಸಿ ಭೂಮಿಕೆ ಸಿದ್ಧಪಡಿಸುವ ವೇಳೆಯೇ ಶರದ್ ಯಾದವ್‌ರನ್ನು ಮಾಧೇಪುರದಿಂದಲೇ ಕಣಕ್ಕೆ ಇಳಿಸಲು ಚಿಂತನೆ ನಡೆಸಲಾಗಿತ್ತು ಎನ್ನಲಾಗುತ್ತಿದೆ.
2009ರ ಚುನಾವಣೆಯಲ್ಲಿ ಶರದ್ ಯಾದವ್ ಆರ್‌ಜೆಡಿ ಅಭ್ಯರ್ಥಿ ರವೀಂದ್ರ ಚರಣ್ ಯಾದವ್‌ರನ್ನು ಸೋಲಿಸಿದ್ದರು. 2014ರಲ್ಲಿ ಆರ್‌ಜೆಡಿ ಅಭ್ಯರ್ಥಿ ಪಪ್ಪು ಯಾದವ್ ಶರದ್‌ರನ್ನು ಸೋಲಿಸಿದ್ದರು. ಕ್ಷೇತ್ರದ ಹಾಲಿ ಸಂಸದ ಸ್ವತಂತ್ರರಾಗಿ ಕಣಕ್ಕೆ ಇಳಿದಿದ್ದಾರೆ. ಆರ್‌ಜೆಡಿ ವರಿಷ್ಠರ ವಿರುದ್ಧ ಮಾತನಾಡಿದ್ದಕ್ಕಾಗಿ ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡಲಾಗಿದೆ ಮತ್ತು ಟಿಕೆಟ್ ನೀಡಲಾಗಿಲ್ಲ. ದಿನೇಶ್ಚಂದ್ರ ಯಾದವ್ ಜೆಡಿಯು ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಬಿಜೆಪಿ ಜತೆಗೆ ನಿತೀಶ್ ಕುಮಾರ್ ಮೈತ್ರಿ ಮಾಡಿಕೊಂಡಿದ್ದರಿಂದ ಶರದ್ ಯಾದವ್ ಪ್ರತ್ಯೇಕ ರಾಜಕೀಯ ಸಂಘಟನೆಯನ್ನು ರಚಿಸಿಕೊಂಡಿದ್ದಾರೆ. ನಂತರ ಅದನ್ನು ಆರ್‌ಜೆಡಿಯಲ್ಲಿ ವಿಲೀನಗೊಳಿಸಲಿದ್ದಾರೆ.
ಈ ಕ್ಷೇತ್ರದಲ್ಲಿ ಯಾದವ ಸಮುದಾಯದವರೇ ಹೆಚ್ಚಿನ ಸಂಖ್ಯೆ ಯಲ್ಲಿದ್ದಾರೆ. ಹೀಗಾಗಿ ಯಾವುದೇ ರಾಜಕೀಯ ಪಕ್ಷವಿದ್ದರೂ, ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕಾಗಿದ್ದರೆ ಈ ಅಂಶವನ್ನು ಪ್ರಧಾನವಾಗಿ ಗಮನಿಸಬೇಕಾಗುತ್ತದೆ. ಹೀಗಾಗಿ ಈ ಕ್ಷೇತ್ರದಲ್ಲಿ ಯಾದವತ್ರಯರ ನಡುವೆ ಖಾಡಾ ಖಾಡಿ ಹೋರಾಟ ನಡೆಯ ಲಿದೆ. ಕಾಂಗ್ರೆಸ್ ಈ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿದೆ. 1991 ಮತ್ತು 1996ರಲ್ಲಿ ಆ ಪಕ್ಷ ಇಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.
2014ರ ಚುನಾವಣೆ
ಪಪ್ಪು ಯಾದವ್ (ಆರ್‌ಜೆಡಿ): 3,68, 937
ಶರದ್ ಯಾದವ್ (ಜೆಡಿಯು): 3,12, 728