Advertisement

ಬಂಟ್ವಾಳಕ್ಕೆ ಲೋಕಾಯುಕ್ತ ಸಿ.ವಿಶ್ವನಾಥ ಶೆಟ್ಟಿ ಭೇಟಿ

05:23 PM Jul 20, 2019 | keerthan |

ಬಂಟ್ವಾಳ: ಬಂಟ್ವಾಳ ದ ಎರಡು ಹಾಸ್ಟೆಲ್ ಗಳು ಸುಧಾರಣೆ ಅಗಬೇಕಾಗಿದೆ. ನಾನಾ ನೀಡಿದ ಈ ಸೂಚನೆಯನ್ನು ಪಾಲಿಸಿ ಒಂದು ತಿಂಗಳ ಒಳಗೆ ಸರಿ ಮಾಡಿದರೆ ಉತ್ತಮ ಎಂದು ಲೋಕಾಯುಕ್ತ ಸಿ.ವಿಶ್ವನಾಥ ಶೆಟ್ಟಿ ಅವರು ಹೇಳಿದರು.

Advertisement

ಅವರು ಬಂಟ್ವಾಳ ಕ್ಕೆ ಅಗಮಿಸಿ ವಿವಿಧ ಸರಕಾರಿ ಇಲಾಖೆಗಳಿಗೆ ಅಗಮಿಸಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮ ವರ ಜೊತೆ ಮಾತನಾಡಿದರು.

ನಾನು ಬರುತ್ತೇನೆಂದು ತಿಳಿದು ವಸತಿ ಶಾಲೆಯನ್ನು ಶುಚಿತ್ವ ಮಾಡಿ ಇಟ್ಟಿದ್ದೀರಾ ಎಂದು  ನಿವೃತ್ತ ನ್ಯಾಯಮೂರ್ತಿ ಲೋಕಾಯುಕ್ತ ಸಿ.ವಿಶ್ವನಾಥ ಶೆಟ್ಟಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅವರು ಬಂಟ್ವಾಳ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಿಗೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಕಟ್ಟಡದ ಗುಣಮಟ್ಟದ ಬಗ್ಗೆ ವಿವರಣೆ ಕೇಳಿದ ಸಂದರ್ಭ ಅಲ್ಲಿನ ಅಧಿಕಾರಿಗಳು ನೀಡಿದ ಉತ್ತರವೊಂದಕ್ಕೆ ಗರಂ ಅದ ಲೋಕಾಯುಕ್ತರು ಗೋಡೆಗಳಲ್ಲಿ ಪಾಚಿ ಹಿಡಿದಿದೆ, ಕಟ್ಟಡದ ಲ್ಲಿ ಬಿರುಕು ಬಿಟ್ಟು ನೀರು ಸೋರಿಕೆಯಾಗುತ್ತಿದೆ, ನಾನು ಬರುತ್ತೇನೆಂದು ಕೇವಲ ನೆಲ ವನ್ನು ನೀರು ಶುಚಿ ಮಾಡಲಾದರೆ ಶುಚಿತ್ವವಾಗುವುದೇ ಎಂದು ಅವರು ಕೇಳಿದರು.

ಕೈಕಂಬ ದ ಮೊಡಂಕಾಪು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಕ್ಕೆ ಬೇಟಿ ನೀಡಿ ಅಲ್ಲಿನ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಬಗ್ಗೆ ಮಾಹಿತಿ ಪಡೆದುಕೊಂಡರು. ಹಳೆಯ ಕಟ್ಟಡವಾಗಿದ್ದರಿಂದ ಈ ಕಟ್ಟಡಕ್ಕೆ ಸುಣ್ಣ ಬಣ್ಷ ಬಳಿಯುವಂತೆಯೂ ತಿಳಿಸಿದರು. ಜಿಲ್ಲೆಯ ಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚು ಇದ್ದು ಇಲ್ಲಿನ ವಠಾರ ಶುಚಿತ್ವ ಕಾಪಾಡಲು ಮತ್ತು ಸೊಳ್ಳೆ ಉತ್ಪತ್ತಿ ಯಾಗದಂತೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಯೂ ತಿಳಿಸಿದರು.
ಅಲ್ಲಿನ ವಿದ್ಯಾರ್ಥಿ ಗಳು ಇಲಾಖೆಯ ವತಿಯಿಂದ ಪ್ರವಾಸದ ಅವಕಾಶ ಮಾಡಿಕೊಡುವಂತೆ ಲೋಕಾಯುಕ್ತರಲ್ಲಿ ಕೇಳಿಕೊಂಡಾಗ ಈ ಬಗ್ಗೆ ಅಧಿಕಾರಿ ಗಳಿಗೆ ತಿಳಿಸುವುದಾಗಿ ಹೇಳಿದರು.

Advertisement

ಸರಕಾರಿ ಆಸ್ಪತ್ರೆಯ ಬಗ್ಗೆ ಮೆಚ್ಚುಗೆ: ಬಂಟ್ವಾಳ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಪ್ರತಿ ಘಟಕ ಗಳ ವೀಕ್ಷಣೆ ನಡೆಸಿ ತಾಲೂಕು ಆರೋಗ್ಯ ಅಧಿಕಾರಿ ದೀಪಾ ಪ್ರಭು ಅವರಿಂದ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿನ ವೈದ್ಯಾಧಿಕಾರಿಗಳು ಸರಿಯಾಗಿ ಶುಶ್ರೂಷೆ ಮಾಡುವುರಿಂದ ಈ ಅಸ್ಪತ್ತೆಯಲ್ಲಿ ರೋಗಿಗಳು ಕ್ಯೂ ನಿಂತಿದ್ದಾರೆ ಎಂದು ಇಲ್ಲಿನ ಸರಕಾರಿ ಅಸ್ಪತ್ರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸರಕಾರಿ ಆಸ್ಪತ್ರೆ ಯಲ್ಲಿ ಅರಿವಳಿಕೆ ತಜ್ಞ
ವೈದ್ಯಾಧಿಕಾರಿಗಳ ಕೊರತೆ ಇರುವ ಬಗ್ಗೆ ದೂರಿಗೆ ಈ ವೈದ್ಯಾಧಿಕಾರಿಯ ನೇಮಕವಾಗುವವರೆಗೆ ಹೊರಗುತ್ತಿಗೆಯಲ್ಲಿ ವೈದ್ಯರನ್ನು ನೇಮಕ ಮಾಡುವಂತೆ ತಿಳಿಸಿದರು.

ಸರಕಾರಿ ಆಸ್ಪತ್ರೆ ಯಲ್ಲಿ ವೈದ್ಯರು ಮತ್ತು ನರ್ಸ್ ಗಳ ಬಗ್ಗೆ ಕೊರತೆಯಿರುವ ಬಗ್ಗೆ ವೈದ್ಯಾಧಿಕಾರಿ ನೀಡಿದ ಮಾಹಿತಿಯಂತೆ ಈ ಬಗ್ಗೆ ಹೆಚ್ಚುವರಿ ಡಾಕ್ಟರ್ ಗಳನ್ನು ನೇಮಿಸುವಂತೆ ಸರಕಾರಕ್ಕೆ ಪತ್ರ ಬರೆಯುವಂತೆ ಸಲಹೆ ನೀಡಿದರು.
ಸರ್ಜರಿ ಹಾಗೂ ಇನ್ನಿತರ ಸೇವೆಗಳಿಗೆ ಅಗತ್ಯ ವಿದ್ದಲ್ಲಿ ಹತ್ತಿರ ದ ಖಾಸಗಿ ಆಸ್ಪತ್ರೆ ಯ ವೈದ್ಯರುಗಳನ್ನು ಸಂಪರ್ಕಿಸುವಂತೆ ತಿಳಿಸಿದರು.

ಸರಕಾರಿ ಆಸ್ಪತ್ರೆ ಯ ಡಿ.ಗ್ರೂಪ್ ನೌಕರರಿಗೆ ಮಾಸಿಕ ವೇತನ ಸರಿಯಾಗಿ ಬರುತ್ತಿಲ್ಲ ಎಂಬ ದೂರು ಲೋಕಾಯುಕ್ತರಿಲ್ಲಿ ತಮ್ಮ ಅಳಲನ್ಮು ತೋಡಿ ಕೊಂಡಾಗ ವೇತನ ವಿಳಂಬದ ಬಗ್ಗೆ ಅಧಿಕಾರಿಗಳಿಂದ . ಮಾಹಿತಿ ಪಡೆದು ಕೊಂಡು ವೇತನ ನೀಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಎಸ್.ಪಿ.ಕೆ.ಎನ್ ಮಾದಯ್ಯ, ಲೋಕಾಯುಕ್ತ ಇನ್ಸ್ ಪೆಕ್ಟರ್ ಭಾರತಿ, ಬಂಟ್ವಾಳ ಎ.ಎಸ್.ಪಿ.ಸೈದುಲು ಅಡಾವತ್, ಬಂಟ್ವಾಳ ನಗರ ಠಾಣೆಯ ಪೋಲೀಸ್ ಇನ್ಸ್ ಪೆಕ್ಟರ್ ಚಂದ್ರಶೇಖರ್, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ತಾಲೂಕು ವೈದ್ಯಾಧಿಕಾರಿ ಡಾ. ದೀಪಾ ಪ್ರಭು, ತಾಲೂಕು ಸಾರ್ವಜನಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಸದಾಶಿವ ಶಾನುಬೋಗ, ಹಿಂದುಳಿದ ವರ್ಗದ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್ ಸಮಜ ಕಲ್ಯಾಧಿಕಾರಿ ಮೋಹನ್ ಕುಮಾರ್ ಮತ್ತಿರರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next