Advertisement
ಬಳಿಕ ಮಾಧ್ಯಮದವರ ಜತೆ ಮಾತನಾಡಿ, ಕುಂದಾಪುರ ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನಲು ಇಲ್ಲಿಗೆ ಬರುತ್ತಿರುವ ರೋಗಿಗಳ ಸಂಖ್ಯೆಯೇ ಉದಾಹರಣೆ. ಇಲ್ಲಿ ಉತ್ತಮ ವೈದ್ಯರಿದ್ದಾರೆ, ವ್ಯವಸ್ಥೆಯೂ ಇದೆ. ಒಂದಷ್ಟು ಕುಂದುಕೊರತೆಗಳು ಗಮನಕ್ಕೆ ಬಂದಿದ್ದರೂ ಅದನ್ನು ಮಾಧ್ಯಮದ ಮೂಲಕ ಜಾಹೀರು ಮಾಡುವುದಿಲ್ಲ. ಹಾಗೆ ಹೇಳಿದರೆ ಅದು ಆಸ್ಪತ್ರೆ ಚೆನ್ನಾಗಿಲ್ಲ ಎಂದು ಜನರಲ್ಲಿ ತಪ್ಪು ಭಾವನೆ ಮೂಡಿಸಿದಂತಾಗುತ್ತದೆ. ಲೋಪದೋಷಗಳನ್ನು ಸರಕಾರದ ಗಮನಕ್ಕೆ ತಂದು ಸರಿಪಡಿಸಲು ಸೂಚಿಸುತ್ತೇನೆ. ಸಾರ್ವಜನಿಕರು ಕೂಡ ಸ್ಪಷ್ಟ ವಿಳಾಸ, ಮಾಹಿತಿಯೊಂದಿಗೆ ದೂರು, ಲೋಪಗಳನ್ನು ತಿಳಿಸಬಹುದು ಎಂದರು.
ದೂರು ಕೊಡುವವರಲ್ಲಿ ಹಲವು ವಿಧದವರಿರುತ್ತಾರೆ. ಅನಾವಶ್ಯಕವಾಗಿ, ಅಧಿಕಾರಿಗಳಿಗೆ ತೊಂದರೆ ಕೊಡಲು, ಕಿರುಕುಳ, ಹಣಕ್ಕಾಗಿ, ಪ್ರಚಾರಕ್ಕಾಗಿ ಅರ್ಜಿ ಹಾಕುವ ವರ್ಗದವರಿದ್ದಾರೆ. ಹಾಗೆಯೇ ನೈಜ ಕಾಳಜಿಯಿಂದ ಅರ್ಜಿ ಹಾಕುವವರೂ ಇರುತ್ತಾರೆ. ನೈಜ ಅರ್ಜಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು, ಸುಳ್ಳು ಅರ್ಜಿ ಸಲ್ಲಿಸಿದರೆ ಅಂತಹವರಿಗೆ ದಂಡ ವಿಧಿಸಲಾಗುವುದು ಎಂದು ಲೋಕಾಯುಕ್ತ ಎಚ್ಚರಿಸಿದರು.