Advertisement

ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಲೋಕಾಯುಕ್ತ ಎಸ್‌ಪಿ ಭೇಟಿ

03:55 PM Nov 20, 2017 | |

ಬೆಳ್ತಂಗಡಿ: ಸರಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ಚಿಕಿತ್ಸೆ ದೊರೆಯುತ್ತಿದೆಯೇ ಎಂದು ಲೋಕಾಯುಕ್ತ ಎಸ್‌ಪಿ ರಶ್ಮಿ ಅವರು ಶನಿವಾರ ಇಲ್ಲಿನ ಸರಕಾರಿ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

Advertisement

ಆಸ್ಪತ್ರೆಯ ಶವಾಗಾರ , ಅಡುಗೆ ಕೋಣೆ ಸ್ವತ್ಛತೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಡಯಾಲಿಸಿಸ್‌ ಕೇಂದ್ರಕ್ಕೆ 40 ಜನ ನೋಂದಾಯಿಸಿದ್ದರೂ ವಾರದಲ್ಲಿ 16 ಜನರಿಗಷ್ಟೇ ಮಾಡಲು ಸಾಧ್ಯವಾಗುತ್ತಿದ್ದು ಈ ಬಗ್ಗೆ ಬದಲಿ ವ್ಯವಸ್ಥೆಗೆ ಮುತುವರ್ಜಿ ವಹಿಸಿ ಎಂದು ಆಡಳಿತ ವೈದ್ಯಾಧಿಕಾರಿ ಡಾ| ಗೌತಮ್‌ ಅವರಿಗೆ ಹೇಳಿದರು.

ಬಳಿಕ ಮಾಧ್ಯಮದ ಜತೆ ಮಾತನಾಡಿದ ಎಸ್ಪಿ ಅವರು, ಆಸ್ಪತ್ರೆ, ಅಂಗನವಾಡಿ ಹಾಗೂ ಎಸ್‌ಸಿಎಸ್‌ಟಿ ಹಾಸ್ಟೆಲ್‌ಗಳಿಗೆ ನಿರಂತರ ಭೇಟಿ ನೀಡುತ್ತಿದ್ದು ಸರಕಾರದ ಸೌಲಭ್ಯ ಸರಿಯಾಗಿ ವಿತರಣೆಯಾಗುತ್ತಿದ್ದೆಯೇ ಎಂದು ಪರಿಶೀಲಿಸುತ್ತಿದ್ದೇವೆ. ಅಧಿಕಾರಿಗಳು ಪ್ರತಿ ತಿಂಗಳು ಎಲ್ಲ  ತಾಲೂಕಿನಲ್ಲಿ ಅಹವಾಲು ಸ್ವೀಕಾರ ನಡೆಸುತ್ತಿದ್ದಾರೆ. ಸರಕಾರದ ಅಕ್ಕಿ, ಬೇಳೆ ಇತ್ಯಾದಿಗಳನ್ನು ಅಕ್ರಮ ದಾಸ್ತಾನಿಟ್ಟರೆ ಸಾರ್ವಜನಿಕರು ಮಾಹಿತಿ ನೀಡಬಹುದು ಎಂದರು. ಲೋಕಾಯುಕ್ತ ಇನ್ಸ್‌ಪೆಕ್ಟರ್‌ ವಿವೇಕಾನಂದ, ಸಿಬಂದಿ ಹರಿಶ್ಚಂದ್ರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next