Advertisement
ಈ ವೇಳೆ ಆರೋಪಿತ ಅಧಿಕಾರಿಗಳು ಶೇಕಡಾ ಪ್ರಮಾಣದಲ್ಲಿ ಅಕ್ರಮ ಆಸ್ತಿಗಳಿಕೆ ಮಾಡಿರು ವುದು ಕಂಡು ಬಂದಿದ್ದು, ತನಿಖೆ ನಡೆಯುತ್ತಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Related Articles
Advertisement
15 ಸೈಟ್‌ಗಳ ಮಾಲೀಕ ವಿಜಯಕುಮಾರಸ್ವಾಮಿ: ಬೀದರ್‌ನ ಬಸವ ಕಲ್ಯಾಣ ತಾಲೂಕು ನಾಡ ಕಚೇರಿ ಉಪ ತಹಶೀಲ್ದಾರ್ ವಿಜಯಕುಮಾರಸ್ವಾಮಿ ಬೀದರ್‌ನಗರದಲ್ಲಿ 1 ಮನೆ, ಬಸವಕಲ್ಯಾಣದಲ್ಲಿ 15 ಸೈಟ್‌ಗಳು, 1 ಸಾಯಿ ಸರ್ವಿಸ್ ಎಂಬ ಆಟೋ ಗ್ಯಾರೇಜ್, 2 ಕಾರು ಪತ್ತೆಯಾಗಿವೆ. ಹನುಮಂತಯ್ಯನ 25 ಎಕರೆ ಅಡಕೆ ತೋಟ: ಬಿಬಿಎಂಪಿ ಬೊಮ್ಮನಹಳ್ಳಿ ರಾಜ ಕಾಲುವೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಟಿ. ಹನುಮಂತಯ್ಯ ಬಳಿ ಹಿರಿಯೂರು ತಾಲೂಕಿನ ಬೋಚಾಪುರುದಲ್ಲಿ 24 ಎಕರೆ 23 ಗುಂಟೆ ಅಡಕೆ ಮತ್ತು ಬಾಳೆ ತೋಟ, 1 ಫಾರ್ಮ್ಹೌಸ್, 2 ಪೌಲ್ಟ್ರಿ ಫಾರ್ಮ್, ಹಿರಿಯೂರಿನಲ್ಲಿ 2 ಮನೆಗಳು, ಬೆಂಗಳೂರಿನಲ್ಲಿ 1 ಮನೆ, ಕಾರು, 1 ಬೈಕ್, ಚಿನ್ನಾಭರಣಗಳು ಹಾಗೂ ಕೋಟ್ಯಂತರ ರೂ. ಮೌಲ್ಯದ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ.
ವಾಣಿಜ್ಯ ಸಂಕೀರ್ಣ, ಸರ್ವೀಸ್ ಸ್ಟೇಷನ್‌ಗಳು: ನಿವೃತ್ತ ಡಿಸಿಎಫ್ ಐ.ಎಂ. ನಾಗರಾಜು ಹೊನ್ನಾಳಿಯಲ್ಲಿ 1 ಮನೆ, ಶಿವಮೊಗ್ಗದಲ್ಲಿ 1 ಮನೆ ಮತ್ತು ಮಳಿಗೆ, 4 ವಾಣಿಜ್ಯ ಸಂಕೀರ್ಣಗಳು, ಬೆಂಗಳೂರಿನ ಕಗ್ಗಲಿಪುರದಲ್ಲಿ 1 ಫ್ಲ್ಯಾಟ್, ಶಿವಮೊಗ್ಗದ ಅನುಪಿನಕಟ್ಟೆಯಲ್ಲಿ 1 ಫಾರ್ಮ್ ಹೌಸ್, 10 ಎಕರೆ ಅಡಿಕೆ ತೋಟ, ಸಾಗರ ರಸ್ತೆಯಲ್ಲಿ 1 ದುರ್ಗಾಂಭ ಸರ್ವಿಸ್ ಸ್ಟೇಷನ್, ಭದ್ರಾವತಿ ಚನ್ನಗಿರಿ ರಸ್ತೆಯಲ್ಲಿ 1 ಶ್ರೀದೇವಿ ಸರ್ವಿಸ್ ಸ್ಟೇಷನ್, ಶಿವಮೊಗ್ಗದಲ್ಲಿ 2 ಸೈಟ್, 1 ಫ್ಲ್ಯಾಟ್, ಮಂಡ್ಲಿ-ಕಲ್ಲೂರು ಕೈಗಾರಿಕಾ ಪ್ರದೇಶದಲ್ಲಿ 3 ಫ್ಲ್ಯಾಟ್, ಶ್ರೀರಾಂಪುರ ಗ್ರಾಮದಲ್ಲಿ 2 ಸೈಟ್, 4 ಕಾರು, 1 ಬೈಕ್ ಮತ್ತು 16 ಲಕ್ಷ ರೂ. ನಗದು ಮತ್ತು ಚಿನ್ನಾಭರಣ ಲಭ್ಯವಾಗಿವೆ.
ನೌಕರಿ ಜತೆಗೆ ರಿಯಲ್ ಎಸ್ಟೇಟ್ ವ್ಯವಹಾರ: ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ತಹಶೀಲ್ದಾರ್ ಎನ್.ಜೆ. ನಾಗರಾಜು ಶಿಕಾರಿಪುರದ ಚನ್ನಕೇಶವ ನಗರದಲ್ಲಿ 1 ಮನೆ, ನಿಂಬಾಪುರದಲ್ಲಿ 1 ಮನೆ, ಚನ್ನಗಿರಿಯಲ್ಲಿ ಕೃಷಿ ಜಮೀನು, 244 ಗ್ರಾಂ ಚಿನ್ನ, 533 ಗ್ರಾಂ ಬೆಳ್ಳಿ, 1 ಕಾರು, 1 ಬೈಕ್ ಹೊಂದಿದ್ದಾರೆ. ಅಧಿಕಾರಿ ಮತ್ತು ಕುಟುಂಬ ಸದಸ್ಯರ ಹೆಸರಿನಲ್ಲಿ ಸ್ಥಿರಾಸ್ತಿ ದಾಖಲೆ ಪತ್ರಗಳು ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಕೋಟ್ಯಂತರ ರೂ. ಹಣ ಹೂಡಿಕೆ ಮಾಡಿರುವ ಪತ್ರಗಳು ಪತ್ತೆಯಾಗಿವೆ.
14 ಎಕರೆ ಕೃಷಿ ಜಮೀನು: ಕೋಲಾರದ ಬಾಗೇಪಲ್ಲಿ ತಾಪಂ ಇಒ ವೆಂಕಟೇಶಪ್ಪ ಬಳಿ 14 ಎಕರೆ ಕೃಷಿ ಜಮೀನು, ಬಂಗಾರಪೇಟೆ ನಗರದಲ್ಲಿ 1 ನಿವೇಶನ, 1 ಮನೆ, ತಿಪ್ಪದೊಡ್ಡಹಳ್ಳಿಯಲ್ಲಿ 1 ಮನೆ, ಬಂಗಾರಪೇಟೆಯ ಎಸ್‌ಎನ್ ಸಿಟಿಯಲ್ಲಿ ನಿರ್ಮಾಣ ಹಂತದ 1 ಮನೆ, ಹಾರ್ಡ್‌ವೇರ್ ಶಾಪ್, ಗೋದಾಮು, 4 ಪೌಲ್ಟ್ರಿ ಶೆಡ್‌ಗಳು, 550 ಗ್ರಾಂ ಚಿನ್ನಾಭರಣಗಳು ಪತ್ತೆಯಾಗಿವೆ.