Advertisement

Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ

09:11 AM Mar 27, 2024 | Team Udayavani |

ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆಡೆ ಭ್ರಷ್ಟರ ಬೇಟೆಗಿಳಿದಿದ್ದಾರೆ.

Advertisement

ರಾಮನಗರ: ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಂಚನಾಯ್ಕನಹಳ್ಳಿ ಗ್ರಾಪಂ ಪಿಡಿಒ ಯತೀಶ್ ರನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮ ಆಸ್ತಿಗಳಿಸಿದ ದೂರಿನ ಹಿನ್ನೆಲೆ ಪಿಡಿಒಗೆ ಸೇರಿದ ಮನೆ, ಕಚೇರಿ ಮೇಲೆ ದಾಳಿ ಮಾಡಲಾಗಿದೆ.

ಮೈಸೂರು, ಚನ್ನಪಟ್ಟಣದಲ್ಲಿ ಮನೆಗಳನ್ನ ಹೊಂದಿದ್ದು, ಒಟ್ಟು ಏಳು ಕಡೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.ಬಿಡದಿಯ ಬಾಡಿಗೆ ಮನೆ ಈಗಲ್ಟನ್ ರೆಸಾರ್ಟ್ ನಲ್ಲಿ ಯತೀಶ್ ನನ್ನ ವಶಕ್ಕೆ ಪಡೆಯಲಾಗಿದೆ.

ಮೈನಾಯಕನಹಳ್ಳಿ ಪಿಡಿಒ ಮೇಲೂ ದಾಳಿ
ಚನ್ನಪಟ್ಟಣ ತಾಲೂಕಿನ ಮೈನಾಯಕನಹಳ್ಳಿ ಗ್ರಾಮ ಪಂಚಾಯತ್ ಪಿಡಿಒ ಶಿಭಾ ನಿಖಾತ್ ಮನೆ ಮೇಲೂ‌ ದಾಳಿ ನಡೆಸಲಾಗಿದೆ.

Advertisement

ಚನ್ನಪಟ್ಟಣದಲ್ಲಿ ಮನೆ ಹೊಂದಿರೋ ಶೀಭಾ ಮನೆ ಮೇಲೆ ದಾಳಿ‌ ಮಾಡಿರುವ ಅಧಿಕಾರಿಗಳು ಯತೀಶ್ ಹಾಗೂ ಶಿಭಾ ನಿಖಾತ್ ಒಂದೇ ಬ್ಯಾಚ್ ಪಿಡಿಒಗಳಾಗಿದ್ದಾರೆ. ಇಬ್ಬರ ಮೇಲೂ ಅಕ್ರಮ ಆಸ್ತಿ ಗಳಿಕೆ ದೂರು ಕೇಳಿ ಬಂದಿತ್ತು.

ಯತೀಶ್ 20 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ..

ಕಾರವಾರದಲ್ಲೂ ಕಾರ್ಯಾಚರಣೆ

ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ (ಎಇಇ) ಪ್ರಕಾಶ್ ರೇವಣಕರ್ ಮನೆ, ಕಚೇರಿ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಐಶ್ವರ್ಯ ರೆಸಿಡೆನ್ಸಿ, ಪ್ರಕಾಶ್ ರೇವಣಕರ್ ಮನೆ, ನಗರಾಭಿವೃದ್ಧಿ ಪ್ರಾಧಿಕಾದ ಕಚೇರಿಯಲ್ಲಿ ದಾಖಲೆಗಳ ಹಾಗೂ ಅಕ್ರಮ ಸಂಪತ್ತಿನ ತಪಾಸಣೆ ನಡೆಯುತ್ತಿದೆ. ಅಪಾರ ಪ್ರಮಾಣದ ಬಂಗಾರ, ಹಣ, ವಿವಿದೆಡೆ ಆಸ್ತಿ ಮಾಡಿರುವ ದಾಖಲೆಗಳು ಸಿಗುವ ಸಂಭವವಿದೆ. ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ. ಕಾರವಾರ ಲೋಕಾಯುಕ್ತ ಎಸ್ಪಿ ಹಾಗೂ ಪಕ್ಕದ ಜಿಲ್ಲೆಯ ಎಸ್ಪಿ ದಾಳಿಯ ನೇತೃತ್ವ ವಹಿಸಿದ್ದಾರೆ.

ಬೀದರ್ ನಲ್ಲಿ ಕಾರ್ಯಾಚರಣೆ
ಬೀದರ್ ಕಾರಂಜಾ ವಿಭಾಗದ ಇಇ ಶಿವಕುಮಾರ ಸ್ವಾಮಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್ ನೀಡಿದ್ದಾರೆ. ಅಕ್ರಮ ಅಸ್ತಿ ಗಳಿಕೆ ಆರೋಪ ಹಿನ್ನಲೆ ಲೋಕಾಯುಕ್ತ ಡಿವೈಎಸ್.ಪಿ ಓಲೇಕಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಬೀದರ್ ಅಗ್ರಿಕಲ್ಚರ್ ಕಾಲೋನಿಯ ಮನೆ, ನಾಗೂರ (ಬಿ) ಗ್ರಾಮದ ಮನೆ,ಭಾಲ್ಕಿಯಲ್ಲಿರುವ ಕಾರಂಜಾ ಕಚೇರಿ, ಕಲ್ಬುರ್ಗಿ ಪಟ್ಣಣದ ಮನೆಯಲ್ಲಿ ಅಧಿಕಾರಿಗಳಿಂದ ಶೋಧ ನಡೆಸಲಾಗುತ್ತಿದೆ.

ಮಹತ್ವದ ದಾಖಲೆ ವಶಪಡಿಸಿ ಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ KRIDL EE ಸದಾಶಿವಯ್ಯ ಅವರ ಚಿಕ್ಕಬಳ್ಳಾಪುರ ಕಚೇರಿ, ಆಸ್ತಿ ಪಾಸ್ತಿ ಮೇಲೆ ದಾಳಿ ನಡೆಸಲಾಗಿದೆ.

ಯಲಹಂಕ ಬಾಡಿಗೆ ಮನೆ, ಮೈಸೂರಿನ ರಾಮಕೃಷ್ಣ ನಗರದ ಮನೆ, ಬಗಾದಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮನೆ, ಟಿ.ನರಸೀಪುರದ ಒಕ್ಕಲಿಗೆರೆ ಮನೆ ಸೇರಿದಂತೆ ಆಸ್ತಿಗಳ ಮೇಲೆ ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ಡಾ.ರಾಮ್ ಅರಸಿದ್ದಿ ಮತ್ತು ಡಿವೈಎಸ್ಪಿ ವಿರೇಂದ್ರ ಕುಮಾರ್,ಮೋಹನ್ ಶಿವಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next