ಶಿವಮೊಗ್ಗ: ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಇಬ್ಬರು ಸರಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು ಅಪಾರ ಪ್ರಮಾಣದ ನಗ, ನಗದು, ಹಣ ಪತ್ತೆ ಹಚ್ಚಿದ್ದಾರೆ.
ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರಶಾಂತ್ ಅವರಿಗೆ ಸೇರಿದ ಶಿವಮೊಗ್ಗದ ಮನೆ, ಕಚೇರಿ, ಶೆಟ್ಟಿಹಳ್ಳಿಯಲ್ಲಿರುವ ಫಾರ್ಮ್ ಹೌಸ್ ಸೇರಿ 5 ಕಡೆ ತಪಾಸಣೆ ನಡೆಸಿದ್ದು ಈ ವೇಳೆ 25 ಲಕ್ಷ ನಗದು, 3.5 ಕೆ.ಜಿ ಬಂಗಾರ, 24 ಕೆ.ಜಿ ಬೆಳ್ಳಿ, 50 ಬಾಟಲ್ ವಿದೇಶಿ ಮದ್ಯ, 150ರಿಂದ 200 ಜತೆ ಶೂಗಳು, 1 ಕೋಟಿ ರೂ. ಮೊತ್ತದ ಬ್ಯಾಂಕ್ ಡಿಪಾಸಿಟ್, ಮ್ಯೂಚುವಲ್ ಫಂಡ್, ಬೆಂಗಳೂರಿನಲ್ಲಿ ಎರಡು ನಿವೇಶನ, ಶೆಟ್ಟಿಹಳ್ಳಿಯಲ್ಲಿ 4.5 ಎಕರೆ ಹಾಗೂ 1.5 ಎಕರೆ ಕೃಷಿ ಭೂಮಿ ಪತ್ತೆಯಾಗಿದೆ.
ಜಿಲ್ಲಾ ಪಂಚಾಯಿತಿ ಜ್ಯೂನಿಯರ್ ಇಂಜಿನಿಯರ್ ಶಂಕರ್ ನಾಯ್ಕ ಅವರ ಶಿಕಾರಿಪುರದ ಮನೆ, ಕಚೇರಿ ಮೇಲೆ ದಾಳಿ ನಡೆಸಿ 390 ಗ್ರಾಂ ಬಂಗಾರ, 3 ಕೆ.ಜಿ ಬೆಳ್ಳಿ, 1 ಲಕ್ಷ ನಗದು, 12 ಎಕರೆ ಕೃಷಿ ಭೂಮಿ, 60ರಿಂದ 70 ಲಕ್ಷ ಮೌಲ್ಯದ ವಾಹನಗಳು ಪತ್ತೆ ಮಾಡಿದ್ದಾರೆ.
ಬೆಳಗ್ಗೆ 6ಗಂಟೆಗೆ ಶಾಕ್ ನೀಡಿದ ಅಧಿಕಾರಿಗಳು ರಾತ್ರಿ 9 ಗಂಟೆಯಾದರೂ ಪರಿಶೀಲನೆ ಮುಂದುವರೆಸಿದ್ದರು. ಇನ್ನಷ್ಟು ಅಕ್ರಮ ಆಸ್ತಿ ಪತ್ತೆಯಾಗುವ ನಿರೀಕ್ಷೆ ಇದೆ. ಲೋಕಾಯುಕ್ತ ಎಸ್‌ಪಿ ವಾಸುದೇವ್ ನೇತೃತ್ವದಲ್ಲಿ 3 ಮಂದಿ ಡಿವೈಎಸ್‌ಪಿ, 10 ಇನ್ಸ್ಪೆಕ್ಟರ್, 52 ಮಂದಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: Shocking ಮೃತ ಉರಗತಜ್ಞ ನರೇಶ್ ಮನೆಯಲ್ಲಿ ವಿಷಕಾರಿ ಹಾವುಗಳ ರಾಶಿ!