ರಾಮನಗರ: ಗುರುವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಕನಕಪುರದಲ್ಲಿರುವ ಬಿಬಿಎಂಪಿ ಅಧಿಕಾರಿ ನಟರಾಜ್ ಅವರ ಮನೆ ಹಾಗೂ ಫಾರಂ ಹೌಸ್‌ಗೆ ದಾಳಿ ನಡೆಸಿದ್ದಾರೆ.
ಅಪಾರ ಪ್ರಮಾಣದ ಅಕ್ರಮಆಸ್ತಿ ಸಂಪಾದನೆ ಆರೋಪ ಹಿನ್ನೆಲೆಯಲ್ಲಿ ರಾಮನಗರ ಲೋಕಾಯುಕ್ತ ಎಸ್ಪಿ ನೇತೃತ್ವದ ತಂಡ ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮದಲ್ಲಿರುವ ಮನೆ ಜೊತೆಗೆ ಫಾರಂ ಹೌಸ್ ಮೇಲೂ ದಾಳಿ ಮಾಡಿದ್ದಾರೆ.
ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅಧಿಕಾರಿ ನಾಪತ್ತೆಯಾಗಿದ್ದು ಮನೆಯಲ್ಲಿ ಇತರ ಸದಸ್ಯರು ಇದ್ದ ಪರಿಣಾಮ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಅತ್ತ ಬಿಬಿಎಂಪಿ ಅಧಿಕಾರಿ ನಟರಾಜ್ ಫಾರಂ ಹೌಸ್‌ಗೆ ಬೀಗ ಹಾಕಲಾಗಿದ್ದು ದಾಳಿ ಮಾಡಲು ಬಂದ ಅಧಿಕಾರಿಗಳು ಫಾರಂ ಹೌಸ್ ಕಾಯುತ್ತ ಕುಳಿತ್ತಿದ್ದಾರೆ ಎನ್ನಲಾಗಿದೆ. ಮನೆ ಬೀಗವಿಲ್ಲದೇ ತೋಟದಲ್ಲಿರುವ ಬೆಲೆ ಬಾಳುವ ಮರಗಳ ಸಂಖ್ಯೆಯನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.
ನಟರಾಜ್ ಅವರು ಕನಕಪುರದ ಶಿವನಹಳ್ಳಿ ಗ್ರಾಮದಲ್ಲಿ ಭವ್ಯ ಬಂಗಲೆ ಹೊಂದಿದ್ದು ಗ್ರಾಮದಲ್ಲೇ 7.5 ಎಕರೆ ತೆಂಗಿನತೋಟ, ಅಡಿಕೆ ತೋಟ ಹೊಂದಿದ್ದಾರೆ ಎನ್ನಲಾಗಿದೆ ದಾಳಿ ನಟರಾಜ್ ನಾಪತ್ತೆಯಾಗಿದ್ದು ಕೆಲಸಕ್ಕಿದ್ದ ಕಾರ್ಮಿಕರಿಂದ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೆ ಮನೆಯಲ್ಲಿದ್ದ ದಾಖಲೆ ಪತ್ರಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ.
ಇದನ್ನೂ ಓದಿ: Bajrang Dal: ಪಕ್ಷ ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧಿಸಲ್ಲ, ಆದರೆ… :ದಿಗ್ವಿಜಯ್ ಸಿಂಗ್