ಹಾವೇರಿ: ರಾಜ್ಯದ ವಿವಿಧ ಭಾಗಗಳಲ್ಲಿ ಮಂಗಳವಾರ (ನ.12ರಂದು) ಲೋಕಾಯುಕ್ತ ರೇಡ್ ಮಾಡಿದೆ. ದಾವಣಗೆರೆ, ಬೆಳಗಾವಿ, ಬೀದರ್ ಸೇರಿದಂತೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಭ್ರಷ್ಟರ ಜಾಡು ಹಿಡಿದು ದಾಳಿ ಮಾಡಿದೆ.
ಹಾವೇರಿ ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಉಪವಿಭಾಗದ ಎಇ ಕಾಶೀನಾಥ್ ಭಜಂತ್ರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ರೇಡ್ ಮಾಡಿದ್ದಾರೆ.
ಹಿರೇಕೇರೂರಿನಲ್ಲಿರುವ ಕಚೇರಿಯಲ್ಲಿ ಕಾಶೀನಾಥ್ ಕೆಲಸ ಮಾಡುತ್ತಿದ್ದಾರೆ. ಹಾವೇರಿ ನಗರದಲ್ಲಿರುವ ಕಾಂತೇಶ್ ಭಜಂತ್ರಿ 2 ಮನೆಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿದೆ.
ಅಧಿಕಾರಿಗಳು ಬರುತ್ತಿದ್ದಂತೆ ಕಾಶೀನಾಥ್ ಮನೆಯಲ್ಲಿ ಹೈಡ್ರಾಮಾ ಶುರುವಾಗಿದೆ.9 ಲಕ್ಷ ರೂಪಾಯಿ ಹಣ ಗಂಟು ಕಟ್ಟಿ ಕಿಟಕಿ ಮೂಲಕ ಹೊರಗೆ ಬೀಸಾಡಲು ಕಾಶಿನಾಥ್ ಯತ್ನಿಸಿದ್ದಾರೆ. ಇನ್ನು 2 ಲಕ್ಷ ರೂಪಾಯಿ ಕ್ಯಾಶ್ ಬೆಡ್ ನಲ್ಲಿ ಸುತ್ತಿ ಇಟ್ಟಿದ್ದರು ಎನ್ನಲಾಗಿದೆ.
ಲೋಕಾಯುಕ್ತ ಪೊಲೀಸರು ಕಾಶೀನಾಥ್ ಭಜಂತ್ರಿ ನಿವಾಸದಲ್ಲಿರುವ ಕಡತಗಳು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.