ಮಂಗಳೂರು: ಬೆಂಗಳೂರಿನ ವಿಕಾಸಸೌಧದ ದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಭೂ ವಿಜ್ಞಾನಿ ಎ.ಎಂ. ನಿರಂಜನ್ ಅವರ ಮಂಗಳೂರಿನ ಪಂಪ್‌ವೆಲ್‌ನ ಮನೆ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ 10.66 ಲಕ್ಷ ರೂ. ನಗದು, 500 ಗ್ರಾಂ ಚಿನ್ನಾಭರಣ, 2 ಕೆ.ಜಿ. ಬೆಳ್ಳಿ ಪತ್ತೆಯಾಗಿದೆ.
Advertisement
ಪತ್ನಿಯ ಹೆಸರಿನಲ್ಲಿ ಲಕ್ಷಾಂತರ ರೂ. ಮೌಲ್ಯದ 10ಕ್ಕೂ ಅಧಿಕ ಜೀವ ವಿಮಾ ಪಾಲಿಸಿ, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ, ಕೊಡಗಿನ ಸೋಮವಾರಪೇಟೆ, ಮೈಸೂರಿನ ಪಿರಿಯಾಪಟ್ಟಣ ಜಮೀನು ಖರೀದಿಸಿರುವ ಬಗ್ಗೆಯೂ ದಾಖಲೆಗಳು ಲಭಿಸಿವೆ ಎಂದು ಲೋಕಾಯುಕ್ತ ಇಲಾಖೆಯ ಮೂಲಗಳು ತಿಳಿಸಿವೆ.