Advertisement
ರಾಮನಗರ ಲೋಕಾಯುಕ್ತ ಡಿವೈಎಸ್ಪಿ ಗೌತಮ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಬೆಂಬಲಿತನ ಬೇನಾಮಿ ಆಸ್ತಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ ಬೆಂಗಳೂರು ದಕ್ಷಿಣ ತಾಲೂಕು ಚನ್ನೇನಳ್ಳಿ ಗ್ರಾಮ ಪಂಚಾಯತಿ ಸದಸ್ಯ ಸುರೇಶ್ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು ಅದಾದ ಬಳಿಕ ಸ್ನೇಹಿತ ರಮೇಶ್ ಮನೆಯ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ..
ಅಷ್ಟು ಮಾತ್ರವಲ್ಲದೆ ರಾಮನಗರದ ಹಲವೆಡೆ ಲೋಕಾಯುಕ್ತ ದಾಳಿ ನಡೆದಿದ್ದು ಬೆಂಗಳೂರಿಗೆ ಸಂಬಂಧಿಸಿದ ಅಧಿಕಾರಿಗಳ ಫಾರ್ಮ್ ಹೌಸ್, ರೆಸಿಡೆನ್ಶಿಯಲ್ ಗಳ ಮೇಲೆ ಲೋಕಾ ದಾಳಿ.ಬೆಂಗಳೂರಿನ ಆನೇಕಲ್ ನಲ್ಲಿ ಡೆವಲಪ್ಮೆಂಟ್ ಎಂಜಿನಿಯರ್ ಆಗಿರೋ ಮಂಜೇಶ್ ಎಂಬುವವರ ಫಾರ್ಮ್ ಹೌಸ್ ಮೇಲೂ ದಾಳಿ. ಸಾತನೂರಿನಲ್ಲಿ ಫಾರ್ಮ್ ಹೌಸ್ ಹೊಂದಿರೋ ಡೆವಲಪ್ಮೆಂಟ್ ಎಂಜಿನಿಯರ್ ಮಂಜೇಶ್.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಜೆಸ್ಕಾ ಜನರಲ್ ಮ್ಯಾನೇಜರ್ ನಾಗರಾಜ್ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ
ಪಟ್ಟಣದ ಬಾಪೂಜಿ ನಗರದ ಬಸವೇಶ್ವರ ದೇಗುಲ ಹಿಂಭಾಗದಲ್ಲಿರೋ ಮನೆಯಲ್ಲಿ ಪರಿಶೀಲನೆ. ಜೆಸ್ಕಾಂ ಮ್ಯಾನೇಜರ್ ಪತ್ನಿ ಕರೆದುಕೊಂದು ಶಿಕ್ಷಣ ಸಂಸ್ಥೆಗೆ ತೆರಳಿರೋ ಅಧಿಕಾರಿಗಳು. ನಾಗರಾಜ್ ಪತ್ನಿ ಸಮ್ಮುಖದಲ್ಲಿ Bed ಕಾಲೇಜಿನಲ್ಲಿ ಪರಿಶೀಲನೆ. ನಾಗರಾಜ್ ಗೆ ಸಂಬಂಧಿಸಿದ ಬಿಎಡ್ ಕಾಲೇಜ್, Fed ಕಾಲೇಜು, ಐಟಿಐ ಕಾಲೇಜು. ಪಿಯು ಕಾಲೇಜ್ ಸೇರಿ ನಾಲ್ಕು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನ ಹೊಂದಿರೋ ನಾಗರಾಜ್. ಕೂಡ್ಲಿಗಿ ತಾಲೂಕಿನಲ್ಲಿಯೇ ಎರಡು ಪೆಟ್ರೋಲ್ ಬಂಕ್ ಹೊಂದಿರೋ ನಾಗರಾಜ್. ಗುಡೇಕೋಟೆ ಹೋಬಳಿಯಲ್ಲಿ ಒಂದು ಪೆಟ್ರೋಲ್ ಬಂಕ್. ಕೂಡ್ಲಿಗಿಯಿಂದ 6km ದೂರದ ವಿರೂಪಾಪೂರ ಗ್ರಾಮದ ಬಳಿ ಒಂದು ಬಂಕ್ ಹೊಂದಿರೋ ನಾಗರಾಜ್. ಪರಿಶೀಲನೆ ಮುಂದುವರೆಸಿರೋ ಲೋಕಾಯುಕ್ತ ಅಧಿಕಾರಿಗಳು.
Related Articles
Advertisement
ಕೋಲಾರ ಜಿಲ್ಲೆಯ ಲ್ಯಾಂಡ್ ಆರ್ಮಿ ಇಂಜಿನಿಯರ್ ಸೈಯದ್ ಮುನೀರ್ ಅಹಮದ್ ರವರ ಸಂಬಂಧಿ ಪಟ್ಟಣದ ಮೊಯಿದ್ದೀನ್ ಖಾನ್ ರವರ ಮನೆ ಮೇಲು ಸಹ ಲೋಕಾಯುಕ್ತ ದಾಳಿ ನಡೆಸಿದ್ದಾರೆ.
ಮಂಗಳವಾರ ಬೆಳ್ಳಂಬೆಳಗ್ಗೆ ಕೋಲಾರ ಜಿಲ್ಲೆಯ ಲ್ಯಾಂಡ್ ಆರ್ಮಿ ಎ. ಇ. ಇ ಸೈಯದ್ ಮುನೀರ್ ಅಹಮದ್ ರವರ ಮನೆ ಮತ್ತು ಅವರಿಗೆ ಸಂಬಂಧಿಸಿದ ಜಾಗಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು, ಅವರ ಸಂಬಂಧಿ ಗುಡಿಬಂಡೆ ಪಟ್ಟಣ ದ ಬಾಪೂಜಿನಗರದ ನಿವಾಸಿ ಮೊಯಿದ್ದೀನ್ ಖಾನ್ ಮನೆ ಮೇಲೆ ಸಹ ದಾಳಿ ನಡೆಸಿದ್ದು, ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Maldives Row: ಮಾಲ್ಡೀವ್ಸ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಸಿದ್ಧತೆ