ಆಲೂರು : ಕಳಪೆ ಕಾಮಗಾರಿ ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಯುಕ್ತ ಮುಖ್ಯ ಇಂಜಿನಿಯರ್ ಎಂ.ಇ.ಪ್ರಸಾದ್ ಹಾಗೂ ತನಿಖಾಧಿಕಾರಿ ಜೆ.ಡಿ.ಗುರುಪ್ರಸಾದ್ ನೇತೃತ್ವದಲ್ಲಿ ಆಲೂರು ತಾಲ್ಲೂಕಿನ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಲ್ಗೆರೆ ಗ್ರಾಮದ ರಸ್ತೆ ಕಾಮಗಾರಿ ವಿಕ್ಷೀಸಿದರು.
ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಲ್ಗೆರೆ ಗ್ರಾಮದ ಮುಖ್ಯ ರಸ್ತೆಗೆ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಅವರು ಗ್ರಾಮದ ಒತ್ತಾಸೆಯ ಮೇರೆಗೆ ಮಲ್ನಾಡ್ ಅಭಿವೃದ್ಧಿ ನಿಗಮದ ವತಿಯಿಂದ 5 ಲಕ್ಷ ಹಣ ಮಂಜೂರು ಮಾಡಿದ್ದರು ಅದರೆ ಹಣ ಮಾಡುವ ಉದ್ದೇಶದಿಂದ ಇಂಜಿನಿಯರ್ ಮಂಜುನಾಥ್ ಹಾಗೂ ಗುತ್ತಿಗೆದಾರರ ವಿಜಯ್ ಕುಮಾರ್ 13 ಚೀಲ ಸಿಮೆಂಟ್ ಹಾಕುವುದರ ಬದಲಿಗೆ 6 ಚೀಲ ಹಾಗೂ ಎಂ.ಸ್ಯಾಂಡ್ ಬದಲಿಗೆ ಜಲ್ಲಿ ಪೌಡರ್ ಹಾಕಿ ಕಳಪೆ ಕಾಮಗಾರಿ ಮಾಡಿದ್ದರಿಂದ ಕಾಂಕ್ರೀಟ್ ಮಾಡಿದ 3 ತಿಂಗಳೊಳಗೆ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿದ್ದು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದ್ದರು.
ಉದಯವಾಣಿ ಪತ್ರಿಕೆ ರಸ್ತೆ ಬಗ್ಗೆ ಸವಿಸ್ತಾರವಾದ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಮುಖ್ಯ ಇಂಜಿನಿಯರ್ ಎಂ.ಇ.ಪ್ರಸಾದ್ ಹಾಗೂ ಲೋಕಾಯುಕ್ತ ತನಿಖಾಧಿಕಾರಿ ಜೆ.ಡಿ.ಗುರುಪ್ರಸಾದ್ ನೇತೃತ್ವದಲ್ಲಿ ಆರ್ ಡಿಪಿಆರ್ ಇಂಜಿನಿಯರ್ ರವರ ಸಮ್ಮುಖದಲ್ಲಿ ಇಂದು ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ಪರಿಶೀಲನೆ ನಡೆಸಿದರು.
ಗ್ರಾಮದ ರಸ್ತೆ ಸಂಪೂರ್ಣವಾಗಿ ಹಾಳಾಗಿ ತಿರುಗಾಡಲು ದುಸ್ತರವಾಗಿತ್ತು ಈ ಹಿನ್ನೆಲೆಯಲ್ಲಿ ಶಾಸಕರು ಹಾಗೂ ಜೆಡಿಎಸ್ ಅಧ್ಯಕ್ಷ ಮಂಜೇಗೌಡ ಅವರ ಕೈ ಕಾಲು ಕಟ್ಟಿ ಅನುದಾನ ಹಾಕಿಸಿ ಕೊಳ್ಳಲಾಗಿತ್ತು ಅದರೆ ಗುತ್ತಿಗೆದಾರರ ಹಣ ಮಾಡುವ ಉದ್ದೇಶದಿಂದ ರಸ್ತೆ ಕಳಪೆ ಕಾಮಗಾರಿ ಮಾಡಿ ಬೇಸಿಗೆಯಲ್ಲಿ ರಸ್ತೆಯ ದೂಳು ಮನೆ ಸೇರುತ್ತಿದೆ ಜೀವನ ನಡೆಸುವುದೇ ಕಷ್ಟವಾಗಿದೆ ಲೋಕಾಯುಕ್ತರ ಮಂದೆ ಜನ ಅಳಲು ತೋಡಿಕೊಂಡರು.
ಆರ್ ಡಿಪಿಆರ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಕೀದ್ ಜಾವೀದ್ ಮಾತನಾಡಿ, ರಸ್ತೆ ಕಾಮಗಾರಿ ಮಾಡುವ ಸಂದರ್ಭದಲ್ಲಿ ಮಳೆ ಬಂದಿದ್ದರಿಂದ ಕಾಮಗಾರಿ ಸ್ವಲ್ಪ ಮಟ್ಟಿಗೆ ಹಾಳಾಗಿದೆ. ಪುನಃ ರಸ್ತೆಗೆ 3 ಹಿಂಚು ಕಾಂಕ್ರೀಟ್ ಹಾಕಿಸಲಾಗುವುದು ಎಂದು ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಕೀದ್ ಜಾವೀದ್,ಹಿರಿಯ ಇಂಜಿನಿಯರ್ ವೆಂಕಟೇಶ್ ಪ್ರಸಾದ್,ಕೀರ್ತಿ, ಇತರರು ಇದ್ದರು.
ಅಧಿಕಾರಿಗಳು ಹಾಗೂ ಗುತ್ತಿಗೆದಾರರ ದುರಾಸೆಯಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು 6 ತಿಂಗಳಿಂದ ರಸ್ತೆ ದೂಳಿನಿಂದ ಗ್ರಾಮಸ್ಥರು ಪಡಬಾರದ ವನವಾಸ ಅನುಭವಿಸಿದ್ದೇವೆ ರಸ್ತೆಗೆ 3 ಇಂಚು ಕಾಂಕ್ರಿಟ್ರೀಕರಣ ಮಾಡಬೇಕು
ಶಣ್ಮುಖಪ್ಪ ಗ್ರಾಮಸ್ಥರು