Advertisement

ಸಿಎಂ, ಸಚಿವರು-ಶಾಸಕರ ವಿರುದ್ಧ ಲೋಕಾಕ್ಕೆ ದೂರು

11:32 AM May 05, 2017 | Team Udayavani |

ಬೆಂಗಳೂರು: ಪೊಲೀಸ್‌ ಅಧಿಕಾರಿಗಳ ವರ್ಗಾವಣೆಯಲ್ಲಿ ಅಧಿಕಾರ ದುರ್ಬಳಕೆ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ 27 ಮಾಜಿ ಹಾಗೂ ಹಾಲಿ ಸಚಿವರ ವಿರುದ್ಧ ಲೋಕಾಯುಕ್ತದಲ್ಲಿ ಗುರುವಾರ ದೂರು ದಾಖಲಾಗಿದೆ.

Advertisement

2014-15ನೇ ಸಾಲಿನ ಪೊಲೀಸ್‌ ಅಧಿಕಾರಿಗಳ ವರ್ಗಾವಣೆಯಲ್ಲಿ ಸಿಎಂ ಸೇರಿದಂತೆ ಎಲ್ಲ ಸಚಿವರು ಅಧಿಕಾರ ದುರ್ಬಳಕೆ ಮಾಡಿಕೊಂಡು,ತಮಗೆ ಹತ್ತಿರವಾಗಿರುವ ಅಧಿಕಾರಿಗಳನ್ನು ಆಯಕಟ್ಟಿನ ಜಾಗಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಶಿಫಾರಸು ಪತ್ರಗಳನ್ನು ನೀಡಿದ್ದಾರೆ. ಅಲ್ಲದೆ ವರ್ಗಾವಣೆ ವಿಚಾರದಲ್ಲಿ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡಬಾರದೆಂಬ ಸುಪ್ರೀಂಕೋರ್ಟ್‌ ನಿರ್ದೇಶನವನ್ನೂ ಉಲ್ಲಂ ಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸೇರಿ ಸಚಿವರ ಹಸ್ತಕ್ಷೇಪದ ವಿರುದಟಛಿ ಸಮಗ್ರ ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಕೋರಿ ಪೊಲೀಸ್‌ ಮಹಾಸಂಘದ ಅಧ್ಯಕ್ಷ ವಿ.ಶಶಿಧರ್‌ ದೂರು ನೀಡಿದ್ದಾರೆ.

ಈ ಮೊದಲು ದೂರುದಾರ ಶಶಿಧರ್‌, ಸಿಎಂ ಹಾಗೂ ಸಚಿವರ ವಿರುದಟಛಿ ಅಧಿಕಾರ ದುರ್ಬಳಕೆ ಸಂಬಂಧ ಕಳೆದ ವರ್ಷ ಎಸಿಬಿಗೆ ದೂರು ನೀಡಿದ್ದರು.

ಈ ದೂರು ತಿರಸ್ಕರಿಸಿದ್ದ ಎಸಿಬಿ ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಮಜಾಯಿಷಿ ನೀಡಿತ್ತು. ಈ ಕ್ರಮ ಪ್ರಶ್ನಿಸಿ ಶಶಿಧರ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಈ ಕುರಿತು ಲೋಕಾಯುಕ್ತರಿಗೆ
ದೂರು ನೀಡುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಶಶಿಧರ್‌ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ.

ಯಾರ ವಿರುದ್ಧ ದೂರು?
ಸಿಎಂ ಸಿದ್ದರಾಮಯ್ಯ, ಸಚಿವರಾದ ಎಚ್‌.ಸಿ . ಮಹದೇವಪ್ಪ, ಕೆ.ಜೆ.ಜಾರ್ಜ್‌, ಯು.ಟಿ.ಖಾದರ್‌, ಡಿ.ಕೆ.ಶಿವಕುಮಾರ್‌, ಆರ್‌.ವಿ.ದೇಶಪಾಂಡೆ, ಎಚ್‌. ಆಂಜನೇಯ, ರಾಮಲಿಂಗಾರೆಡ್ಡಿ, ರಮಾನಾಥ್‌ ರೈ, ಎಂ.ಬಿ.ಪಾಟೀಲ್‌, ಉಮಾಶ್ರೀ, ಶರಣಪ್ರಕಾಶ್‌
ಪಾಟೀಲ…, ಎಚ್‌.ಕೆ ಪಾಟೀಲ್‌, ಮಾಜಿ ಸಚಿವರಾದ ದಿನೇಶ್‌ ಗುಂಡೂರಾವ್‌, ಕಿಮ್ಮನೆ ರತ್ನಾಕರ, ಶ್ರೀನಿವಾಸ್‌ ಪ್ರಸಾದ್‌, ಶಾಮನೂರು ಶಿವಶಂಕರಪ್ಪ, ಪಿ.ಟಿ.ಪರಮೇಶ್ವರ ನಾಯಕ್‌, ಬಾಬೂರಾವ್‌ ಚಿಂಚನಸೂರ, ವಿನಯ್‌ ಕುಮಾರ್‌ ಸೊರಕೆ, ಅಂಬರೀಶ್‌, ಖಮರುಲ್‌ ಇಸ್ಲಾಂ, ಅಭಯ್‌ ಚಂದ್ರ ಜೈನ್‌ ಸೇರಿದಂತೆ 27 ಮಂದಿ ವಿರುದ್ಧ ದೂರು ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next