ತಿಪಟೂರು: ಸರ್ಕಾರಿ ಇಲಾಖೆಗಳಲ್ಲಿ ಸಾರ್ವಜನಿ ಕರ ಕೆಲಸ ಕಾರ್ಯಗಳಿಗೆ ಲಂಚ ಕೇಳುತ್ತಿದ್ದರೆ, ವಿನಾ ಕಾರಣ ವಿಳಂಬ ಮಾಡುತ್ತಿದ್ದರೆ, ಸುಮ್ಮನೆ ಅಲೆ ದಾಡಿಸುತ್ತಿದ್ದರೆ, ಹೆದರಿಸುವ ಮೂಲಕ ತೊಂದರೆ ನೀಡುತ್ತಿದ್ದರೆ ಲೋಕಾಯುಕ್ತಕ್ಕೆ ಸ್ಪಷ್ಟ ದೂರು ನೀಡುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡಲು, ಜನಸ್ನೇಹಿ ಆಡಳಿತ ಸಿಗಲು ನಮಗೆ ನೆರವು ನೀಡಬೇಕೆಂದು ಕರ್ನಾಟಕ ಲೋಕಾಯುಕ್ತ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಪಿ.ಆರ್. ರವೀಶ್ ಸಲಹೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರ್ನಾಟಕ ಲೋಕಾಯುಕ್ತ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಪಿ.ಆರ್.ರವೀಶ್, ಪೊಲೀಸ್ ನಿರೀಕ್ಷಕ ರಾಮರೆಡ್ಡಿ ತಮ್ಮ ಇಲಾಖೆಯ ಮೂಲಕ ಹಮ್ಮಿಕೊಂಡಿದ್ದ ಸಾರ್ವಜನಿಕ ದೂರುಗಳ ಸಭೆ ಯಲ್ಲಿ ಅವರು ಮಾತನಾಡಿದರು. ಕಠಿಣ ಕ್ರಮ: ಲೋಕಾಯುಕ್ತ ಠಾಣೆ ಪ್ರಾರಂಭ ವಾದ ನಂತರ ಹಮ್ಮಿಕೊಂಡಿರುವ ಮೊದಲ ಸಭೆ ಇದಾಗಿದೆ. ಇತ್ತೀಚೆಗೆ ಸರ್ಕಾರಿ ಕಚೇರಿಗಳಲ್ಲಿ ಜನ ರಿಗೆ ಸಕಾಲಕ್ಕೆ ಅವರ ಕೆಲಸ ಕಾರ್ಯ ಮಾಡಿಕೊಡಲು ಲಂಚ, ಮತ್ತಿತರೆ ಬೇಡಿಕೆಗಳಿಂದ ವಿನಾಕಾರಣ ತೊಂದರೆ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸಾರ್ವಜನಿಕರಿಗೆ ತೊಂದರೆ ನೀಡು ವಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಅಂಜಿಕೆ ಇಲ್ಲದೇ ದೂರು ನೀಡಿ: ದೂರು ನೀಡು ವವರು ಸಹ ಯಾವುದೇ ಅಂಜಿಕೆ, ಹೆದರಿಕೆ ಇಲ್ಲದೆ ಧೈರ್ಯವಾಗಿ ದೂರು ನೀಡಿ. ದೂರು ನೀಡಿದರೆ ಎಲ್ಲಿ ನಮ್ಮ ಕೆಲಸಗಳು ಅರ್ಧಕ್ಕೆ ನಿಂತು ಬಿಡುತ್ತವೋ ಎಂಬ ಭಯ ಬಿಟ್ಟು ಭ್ರಷ್ಟಾಚಾರ ನಿರ್ಮೂಲನೆಗೆ ನಮ್ಮ ಜತೆ ಕೈಜೋಡಿಸುವ ಮೂಲಕ ತಮ್ಮ ಕೆಲಸಕಾರ್ಯಗಳೂ ಸಹ ವಿಳಂಬವಾಗದಂತೆ ನೋಡಿಕೊಳ್ಳಬೇಕೆಂದು ದೂರು ನೀಡಲು ಬಂದಿದ್ದ ದೂರುದಾರರು ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿದರು. ಇಂದಿನ ಸಭೆಯಲ್ಲಿ ನೊಂದ ಸಾರ್ವಜನಿಕರಿಂದ ಒಟ್ಟು 14 ದೂರು ಸ್ವೀಕರಿಸಿ, ಇದರಲ್ಲಿ ಒಂದು ನಗರಸಭೆಗೆ ಸಂಬಂಧಿಸಿದ ಹಾಗೂ ಬೆಸ್ಕಾಂಗೆ ಸಂಬಂಧಿಸಿ ಒಂದು ದೂರು ಸೇರಿ 2 ದೂರುಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲು ಸಂಬಂಧಿಸಿದ ಅಧಿ ಕಾರಿಗಳನ್ನು ಕರೆಯಿಸಿ ಇತ್ಯರ್ಥಕ್ಕೆ ಪ್ರಯತ್ನಿಸಿದರು.
ಅಕ್ರಮವಾಗಿ ಬಾಡಿಗೆ ನೀಡಿದ್ದಾರೆ: ಬಳುವ ನೇರಲು ಗ್ರಾಮ ಪಂಚಾಯಿತಿಯಲ್ಲಿ ಗ್ರಾಪಂ ವತಿ ಯಿಂದ ನಿರ್ಮಿಸಿರುವ ಅಂಗಡಿಗಳನ್ನು ಸದಸ್ಯರು ಗಳಿಗೆ ಪಂಚಾಯಿತಿ ಅಧಿಕಾರಿಗಳು ಶಾಮೀಲಾಗಿ ಬಹಿರಂಗ ಹರಾಜು ಹಾಕದೇ ಕಡಿಮೆ ಬಾಡಿಗೆಗೆ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಅಕ್ರಮ ವಾಗಿ ಬಾಡಿಗೆ ನೀಡಿ ಪಂಚಾಯಿತಿಗೆ ಆರ್ಥಿಕ ವಾಹನದ ವಿರುದ್ಧ ದೂರು ನೀಡಿದರೆ ಪೊಲೀಸರು ದೂರು ಸ್ವೀಕರಿಸದೆ ನಮಗೆ ಗಲಾಟೆ ಮಾಡಿ ದೂರು ದಾಖಲಿಸಿಲ್ಲ ಎಂದು ಕಾಂಗ್ರೆಸ್ ಯುವ ಮುಖಂಡ ಕಲ್ಲೇಗೌಡನಪಾಳ್ಯದ ಶರತ್ ನಗರ ಠಾಣೆ ಪೊಲೀಸರ ವಿರುದ್ಧ ದೂರು ನೀಡಿದರು.
ಗಲಾಟೆ ಮಾಡಿದ ಅಧಿಕಾರಿಗಳಿಗೆ ಲೋಕಾಯುಕ್ತ ದಿಂದ ನೋಟಿಸ್ ನೀಡುವುದಲ್ಲದೆ, ಕೂಡಲೇ ದೂರು ದಾಖಲಿಸಬೇಕೆಂದು ಆದೇಶಿಸಲಾಯಿತು. ತಾಲೂಕಿನ ಬೆಳಗರಹಳ್ಳಿಯಲ್ಲಿ ದನದ ಕೊಟ್ಟಿಗೆ ನಿರ್ಮಿಸಲು ಗ್ರಾಪಂನಿಂದ ಅನುಮತಿ ಕೊಡು ವಂತೆ ಷಡಕ್ಷರಿ ಎನ್ನುವರು ದೂರು ನೀಡಿದರು. ಹಾಲ್ಕುರಿಕೆ ಕೊಡಿಗೆಹಳ್ಳಿಯಲ್ಲಿ ಜಮೀನಿಗೆ ವಿದ್ಯುತ್ ಪರಿವರ್ತಕ ಅಳವಡಿಸಿಕೊಟ್ಟಿಲ್ಲ ಎಂದು ಕೆಪಿಟಿಸಿಎಲ್ ವಿರುದ್ಧ ಮಹೇಶ್ ದೂರು ನೀಡಿದರು.
ನಿವೇಶನ ಮಾರಾಟ ಆರೋಪ : ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನರಸಭೆಯ ಕನ್ಸರ್ವೆನ್ಸಿ ಮಾಡಿದ್ದಾರೆಂದು ತರಕಾರಿ ನಾಗರಾಜು ದೂರು ನೀಡಿದರು. ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಗಮನಕ್ಕೆ ತರದೇ ನಗರಸಭಾ ಸದಸ್ಯರೊಂದಿಗೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸಹೋದರನ್ನೊಬ್ಬ ನಿವೇಶನ ಮಾರಾಟ ಮಾಡಿದ್ದಾನೆಂದು ಹಳೆಪಾಳ್ಯ ರೂಪಶ್ರೀ ಎಂಬುವವರು ನಗರಸಭಾ ಸದಸ್ಯ ಹಾಗೂ ಅಧಿಕಾರಿಗಳ ವಿರುದ್ಧ ದೂರು ನೀಡಿದರು.