Advertisement

Lokasabha Session: ವಕ್ಫ್ ಕಾಯ್ದೆ ತಿದ್ದುಪಡಿಗೆ ವಿಪಕ್ಷಗಳಿಂದ ಆಕ್ಷೇಪ

01:07 AM Aug 06, 2024 | Team Udayavani |

ಹೊಸದಿಲ್ಲಿ: ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರ ಮುಂದಾಗಿದೆ ಎಂಬ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಈ ಕ್ರಮವನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದರೆ, ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

Advertisement

ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಸೋಮವಾರವೇ ಲೋಕಸಭೆಯಲ್ಲಿ ಮಂಡನೆಯಾಗಲಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾತನಾಡಿದ್ದ ಹಲವು ಬಿಜೆಪಿ ನಾಯಕರು, “ಮೋದಿ ಸರಕಾರವು ಪ್ರತಿಯೊಂದು ವಲಯದಲ್ಲೂ ಪಾರದರ್ಶಕತೆ ತರುವ ಉದ್ದೇಶದಿಂದ ಕೆಲಸ ಮಾಡುತ್ತಿದೆ. ಅಲ್ಲದೆ ಮುಸ್ಲಿಂ ಸಮುದಾಯದ ಆಗ್ರಹದ ಮೇರೆಗೆ ಈ ತಿದ್ದುಪ ಡಿ ಯನ್ನು ತರಲಾಗುತ್ತಿ ದೆ’ ಎಂದಿದ್ದಾರೆ.

ಇನ್ನೊಂದೆಡೆ, ಸಮಾಜದಲ್ಲಿ ವಿಭಜನೆ ತರುವ ಉದ್ದೇಶದಿಂದಲೇ ಬಿಜೆಪಿ ಇಂಥ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿರುವ ವಿಪಕ್ಷ ಗಳು, ಈ ವಿಧೇಯಕವನ್ನು ವಿರೋಧಿಸುವುದಾಗಿ ಘೋಷಿಸಿವೆ. ಎಸ್‌ಪಿ ನಾಯಕ ಅಖೀಲೇಶ್‌ ಮಾತನಾಡಿ, “ಬಿಜೆಪಿ ಮುಸ್ಲಿಮರ ಹಕ್ಕುಗಳನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದೆ ಎಂದಿದ್ದಾರೆ. ಶಿವ ಸೇನೆ ಉದ್ಧವ್‌ ಬಣ, ಸಿಪಿಎಂ, ಐಯು ಎಂಎಲ್‌, ಎಐಎಂಪಿಎಲ್‌ಬಿ ಕೂಡ ಇದಕ್ಕೆ ಧ್ವನಿಗೂಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next