Advertisement

ಸಂಸದರು ಕೇವಲ ದಿಲ್ಲಿಯಲ್ಲಿ ಇರುವುದಲ್ಲ, ಹಳ್ಳಿಗೂ ಬರಬೇಕು: ಸತೀಶ್ ಜಾರಕಿಹೊಳಿ

02:12 PM Mar 29, 2021 | Team Udayavani |

ಬೆಳಗಾವಿ: ಲೋಕಸಭಾ ಸದಸ್ಯರು ಕೇವಲ ದೆಹಲಿಯಲ್ಲಿ ಇರುವುದಲ್ಲ. ಹಳ್ಳಿಗಳಲ್ಲೂ ಇರಬೇಕು. ಬೆಳಗಾವಿ ಲೋಕಸಭಾ ಕ್ಷೇತ್ರದ ಜನರು ಒಂದು ಅವಕಾಶ ಕೊಟ್ಟರೆ ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ಅಭಿವೃದ್ದಿ ಕೆಲಸ ಮಾಡಲಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದರು.

Advertisement

ಇದನ್ನೂ ಓದಿ: ಬೆಳಗಾವಿ ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಸತೀಶ ಜಾರಕಿಹೊಳಿ

ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ದಿಂದ ಸೋಮವಾರ ನಾಮಪತ್ರ ಸಲ್ಲಿಸಿದ ಬಳಿಕ‌ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈಗಾಗಲೇ ಇಪ್ಪತ್ತು ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯ, ಶಾಸಕನಾಗಿ, ಮಂತ್ರಿಯಾಗಿ ಹಲವಾರು ಕೆಲಸಗಳನ್ನು ಮಾಡಿದ್ದೇನೆ. ಜನ ಬೆಂಬಲ ಕೊಡುತ್ತಾರೆ. ಕೆಲಸ ಮಾಡಲು ಮತ್ತೆ ಆಶೀರ್ವಾದ ಮಾಡಲಿದ್ದಾರೆ ಎಂಬ ನಂಬಿಕೆ ಇದೆ ಎಂದರು.

ಇದನ್ನೂ ಓದಿ:ನಮಗ್ಯಾವ ಒತ್ತಡವಿಲ್ಲ, ಡಿಕೆಶಿಯವರೇ ಇದನ್ನೆಲ್ಲಾ ಮಾಡುತ್ತಿದ್ದಾರೆ: ಸಿಡಿಲೇಡಿ ಪೋಷಕರ ಹೇಳಿಕೆ

ಹಸಿರು ಶಾಲು ಹೊದ್ದು ನಾಮಪತ್ರ ಸಲ್ಲಿಕೆ ಮಾಡಿದ ವಿಚಾರ ಪ್ರಸ್ತಾಪಿಸಿದ ಅವರು ಕೃಷಿ ಮಸೂದೆಗಳ ವಿರುದ್ಧ ರೈತರು ಪ್ರತಿಭಟನೆ ಮಾಡುತ್ತಿದ್ದಾರೆಂದು ಹಸಿರು ಶಾಲು ಹಾಕಿಲ್ಲ.  ಕಿಸಾನ್ ಘಟಕ ಸಂಘಟನೆಯವರು ನಮ್ಮೊಂದಿಗೆ ಇದ್ದಾರೆ. ಅವರೇ ಶಾಲು ಹಾಕಿ ನಾಮಪತ್ರ ಸಲ್ಲಿಸುವಂತೆ ತಿಳಿಸಿದರು. ಹೀಗಾಗಿ, ಶಾಲು ಹೊದ್ದು ನಾಮಪತ್ರ ಸಲ್ಲಿಸಿದ್ದೇನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next