Advertisement
ದ.ಕ. ಜಿಲ್ಲೆಯಲ್ಲಿ ಒಟ್ಟು 11,160 ಪ್ರಕರಣಗಳ ಪೈಕಿ 5,235 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. 308 ಅಪಘಾತ ಪ್ರಕರಣಗಳಲ್ಲಿ 6,55,80,559 ರೂ. ಪರಿಹಾರ ಘೋಷಿಸಲಾಯಿತು. 132 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. 985 ಮಂದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂಧಾನದಲ್ಲಿ ಪಾಲ್ಗೊಂಡಿದ್ದರು.
Related Articles
Advertisement
ಉಡುಪಿ: ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ನ್ಯಾಯಾಲಯಗಳಲ್ಲಿ ನಡೆದ ಮೆಗಾ ಲೋಕ್ ಅದಾಲತ್‌ನಲ್ಲಿ 3,244 ಪ್ರಕರಣಗಳನ್ನು (ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ – 54, ಚೆಕ್ ಅಮಾನ್ಯ ಪ್ರಕರಣ-134, ಬ್ಯಾಂಕ್ / ಹಣ ವಸೂಲಾತಿ ಪ್ರಕರಣ – 22, ಎಂ.ವಿ.ಸಿ. ಪ್ರಕರಣ-155, ಕಾರ್ಮಿಕ ವಿವಾದ-2 ಎಂಎಂಆರ್‌ಡಿ ಆ್ಯಕ್ಟ್ ಪ್ರಕರಣ-21, ವೈವಾಹಿಕ ಪ್ರಕರಣ-3, ಭೂಸ್ವಾಧೀನ ಪ್ರಕರಣ-1, ಸಿವಿಲ್ ಪ್ರಕರಣ-158, ಇತರ ಕ್ರಿಮಿನಲ್ ಪ್ರಕರಣ-2,515 ಹಾಗೂ ವ್ಯಾಜ್ಯ ಪೂರ್ವ ದಾವೆ-179) ರಾಜಿ ಮುಖಾಂತರ ಇತ್ಯರ್ಥಪಡಿಸಿ 8,11,35,240 ರೂ. ಪರಿಹಾರ ಮೊತ್ತವನ್ನು ಘೋಷಿಸಲಾಯಿತು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.