Advertisement

25ರಂದು ಲೋಕ್‌ ಅದಾಲತ್‌: ನ್ಯಾಯಾಧೀಶ ಎಂ.ಆಕರ್ಷ್‌

03:54 PM Jun 04, 2022 | Team Udayavani |

ಯಳಂದೂರು: ಯಳಂದೂರಿನ ಸಿವಿಲ್‌ ನ್ಯಾಯಾಲಯದಲ್ಲಿ ಜೂ.25ಕ್ಕೆ ಕರ್ನಾಟಕ ಉಚ್ಚನ್ಯಾಯಾಲಯ ಹಾಗೂ ಕರ್ನಾಟಕ ಸ್ಟೇಟ್‌ ಲೀಗಲ್‌ ಸರ್ವೀಸ್‌ ಅಥಾರಿಟಿ ಆದೇಶದನ್ವಯ ಲೋಕ್‌ ಅದಾಲತ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿವಿಲ್‌ ನ್ಯಾಯಾಧೀಶ ಎಂ.ಆಕರ್ಷ್‌ ಮಾಹಿತಿ ನೀಡಿದರು.

Advertisement

ಈ ಬಗ್ಗೆಶುಕ್ರವಾರ ನ್ಯಾಯಾಲಯದ ಆವರಣದ ಕಚೇರಿಯಲ್ಲಿ ನಡೆದಸಭೆಯಲ್ಲಿ ಮಾತನಾಡಿ, ಲೋಕ್‌ ಅದಾಲತ್‌ ಎಂದರೆ ಜನತಾ ನ್ಯಾಯಾಲ ಯವಾಗಿದೆ. ಇದರಲ್ಲಿಇಬ್ಬರೂ ಕಕ್ಷಿದಾರರನ್ನು ಕೂರಿಸಿ ವಕೀಲರುಹಾಗೂ ನ್ಯಾಯಾಧೀಶರು ಭಾಗವಹಿಸಿ ರಾಜೀಸಂಧಾನದ ಮೂಲಕ ನ್ಯಾಯ ಬಗೆಹರಿಸಲು ಅವಕಾಶವಿದೆ. ಇದರಿಂದ ಸಂಬಂಧ ಗಳು ಗಟ್ಟಿಯಾಗುತ್ತದೆ.

ಇಲ್ಲಿ ಸೋಲು ಎಂಬುದೇ ಇರುವುದಿಲ್ಲ. ಇಬ್ಬರಿಗೂ ಗೆಲುವು ಲಭಿಸುತ್ತದೆ, ತ್ವರಿತವಾಗಿ ನ್ಯಾಯ ಸಿಗುವುದರಿಂದ ಸಮಯದ ಉಳಿತಾಯವಾಗುತ್ತದೆ. ಹಾಗಾಗಿ ಕೋರ್ಟಿನಲ್ಲಿ ವ್ಯಾಜ್ಯ ಹಾಕಿರುವವರುವರು ಇದರಲಾಭವನ್ನು ಪಡೆದು ಕೊಳ್ಳಬೇಕು ಎಂದರು.

ಸಿವಿಲ್‌ ಪ್ರಕರಣಗಳಲ್ಲಿ ವಿವಾಹ ವಿಚ್ಛೇದನ ಹಾಗೂ ಅಡಾಪ್ಡೇಷನ್‌ ಹೊರತು ಪಡಿಸಿ, ಚೆಕ್‌ಬೌನ್ಸ್‌, ಮಾನನಷ್ಟ, ಬೈಗುಳ, ಜೀವ ಬೆದರಿಕೆ, ಮಾರಕ ವಲ್ಲದ ಹೊಡೆದಾಟ, ಕಳ್ಳತನ, ಮೋಸದಂತಹ ಎಲ್ಲಾ ಪ್ರಕರಣಗಳನ್ನೂ ಬಗೆಹರಿಸಬಹುದಾಗಿದೆ. ಅಲ್ಲದೆ ಕೆಲವು ಕ್ರಿಮಿನಲ್‌ ಮೊಕದ್ದಮೆಗಳನ್ನು ಬಗೆಹರಿಸಿಕೊಳ್ಳಲು ಇದರಿಂದ ಸಾಧ್ಯವಾಗಲಿದ್ದು ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಬೇಕು. ನಮ್ಮ ನ್ಯಾಯಾಲಯದಲ್ಲಿ ಚೆಕ್‌ಬೌನ್ಸ್‌ನ 182ಕ್ಕಿಂತಲೂ ಹೆಚ್ಚಿನ ಪ್ರಕರಣ ಗಳಿದ್ದು ಇದನ್ನು ಬಗೆಹರಿಸಿಕೊಳ್ಳಲು ಸುವರ್ಣ ಅವಕಾಶವಿದ್ದು ಇದರ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜೂ.10 ರಂದು ಇದಕ್ಕೆ ಪೂರ್ವ ಸಿದ್ಧತೆ ನಡೆಯಲಿದ್ದು, ತೆರೆದ ನ್ಯಾಯಾಲಯದಲ್ಲೇ ನ್ಯಾಯಾಧೀಶರುವಕೀಲರೊಂದಿಗೆ ಕೆಳಕ್ಕೆ ಕುಳಿತುಕೊಂಡು ಲೋಕ್‌ ಅದಾಲತ್‌ ನಡೆಸುತ್ತಾರೆ ಅಂದು ಮಧ್ಯಾಹ್ನ 3 ಗಂಟೆಯಿಂದ ಇದು ಆರಂಭಗೊಳ್ಳಲಿದೆ. ಅಲ್ಲದೆ ಜೂ.25 ರತನಕ ಪ್ರತಿದಿನವೂ ಕೋರ್ಟಿನ ಸಮಯ ಮುಗಿದ ಮೇಲೆ ಇದಕ್ಕೆ ಅವಕಾಶವಿದ್ದು ಸಯಮ ಹೊಂದಿಸಿ ಪ್ರಕರಣ ತೀರ್ಮಾನ ಮಾಡಿಕೊಳ್ಳುವವರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next