Advertisement

12ಕ್ಕೆ ಚಾ.ನಗರದಲ್ಲಿ  ಲೋಕಾ ಅದಾಲತ್‌

02:38 PM Mar 07, 2022 | Team Udayavani |

ಚಾಮರಾಜನಗರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಮಾ.12ರಂದು ಜಿಲ್ಲೆಯಾದ್ಯಂತ ಮೆಗಾ ಲೋಕ್‌ ಅದಾಲತ್‌ಆಯೋಜಿಸಲಾಗಿದ್ದು, ಅದಾಲತ್‌ನಲ್ಲಿ ರಾಜಿಯಾಗಬಹುದಾದ 5 ಸಾವಿರ ಪ್ರಕರಣಗಳ ಇತ್ಯರ್ಥಕ್ಕೆ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಜಿಲ್ಲಾ ಸೆಷೆನ್ಸ್‌ ನ್ಯಾಯಾಧೀಶರಾದ ಬಿ.ಎಸ್‌. ಭಾರತಿ ಹೇಳಿದರು.

Advertisement

ನಗರದ ಜಿಲ್ಲಾ ನ್ಯಾಯಾಲಯದಆವರಣದಲ್ಲಿರುವ ವ್ಯಾಜ್ಯ ಪೂರ್ವ ಕೇಂದ್ರದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾನೂನುಸೇವಾ ಪ್ರಾಧಿಕಾರದ ನಿರ್ದೇಶನದನ್ವಯ ಮಾ.12ರಂದು ರಾಜ್ಯಾದ್ಯಂತ ಬೃಹತ್‌ ಲೋಕ್‌ ಅದಾಲತ್‌ ನಡೆಯುತ್ತಿದೆ. ಇದರ ಅಂಗವಾಗಿ ಜಿಲ್ಲೆಯಲ್ಲಿಯೂ ಲೋಕ್‌ ಅದಾಲತ್‌ ಏರ್ಪಡಿಸಲಾಗಿದೆ ಎಂದರು.

ಸಂಧಾನಕಾರರ ನೇಮಕ: ಅಂದು ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಯಳಂದೂರು ತಾಲೂಕು ನ್ಯಾಯಾ ಲಯಗಳಲ್ಲಿಯೂ ಸಹಬೈಟಕ್‌ಗಳನ್ನು ಏರ್ಪಡಿಸಿ ಸಂಧಾನಕಾರರನ್ನು ನೇಮಿಸುವ ಮೂಲಕ ಅದಾಲತ್‌ನ್ನು ಯಶಸ್ವಿಯಾಗಿ ನಡೆಸಬೇಕಾಗಿದೆ ಎಂದರು.

ಎಲ್ಲರ ಸಹಕಾರ ಅಗತ್ಯ: ಕಳೆದ ಸಾಲಿನಲ್ಲಿ ನಾಲ್ಕು ಅದಾಲತ್‌ಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು. ಪ್ರಸ್ತುತ ವರ್ಷದ ಮೊದಲ ಲೋಕ್‌ ಅದಾಲತ್‌ ಇದಾಗಿದೆ. ಲೋಕ್‌ ಅದಾಲತ್‌ನಲ್ಲಿ ವಕೀಲರು, ಕಕ್ಷಿದಾರರು ಸಂಧಾನಕಾರರು ನೀಡುವ ಸಲಹೆಗಳನ್ನುಆಲಿಸಿ, ಒಪ್ಪಿಗೆಯಾಗಿ ಸದರಿ ಸಲಹೆಗಳನ್ನು ಪಾಲಿಸಿದಲ್ಲಿ ಉಭಯ ಪಕ್ಷಗಾರರು ಪರಸ್ಪರ ಒಪ್ಪಿ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಅದಾಲತ್‌ಗೆ ವಕೀಲರು, ಕಕ್ಷಿದಾರರು, ವಿಮಾ ಕಂಪನಿಗಳು, ಪೊಲೀಸರು, ವಿವಿಧ ಇಲಾಖೆಗಳು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು.

ಲೋಕ್‌ ಅದಾಲತ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಹೊರತುಪಡಿಸಿಇತರೆ ಯಾವುದೇ ಬಗೆಯ ಸಿವಿಲ್‌ಪ್ರಕರಣಗಳು, ದಾಂಪತ್ಯಕ್ಕೆ ಸಂಬಂಧಿಸಿದಹಕ್ಕುಗಳ ಪುನರ್‌ಸ್ಥಾಪನೆ, ಜೀವನಾಂಶ, ಮಕ್ಕಳ ಸಂರಕ್ಷಣೆಯ ಎಲ್ಲಾ ಪ್ರಕರಣಗಳು,ವಾಹನ ಅಪಘಾತ, ಕೈಗಾರಿಕಾ ವಿವಾದ ಸೇರಿದಂತೆ ಇತರೆ ಎಲ್ಲಾ ಸ್ವರೂಪದ ಪ್ರಕರಣಗಳನ್ನು ಅದರಲ್ಲೂ ರಾಜೀ ಯೋಗ್ಯಕ್ರಿಮಿನಲ್‌ ಪ್ರಕರಣಗಳು, ವಿಶೇಷಕಾನೂನಿನಿಂದ ಶಿಕ್ಷಿಸಲ್ಪಟ್ಟ ಅಪರಾಧಗಳಾದ ಚೆಕ್ಕುಗಳ ಅಮಾನ್ಯ, ಕಾರ್ಮಿಕ, ವಿದ್ಯುಚ್ಚಕ್ತಿಕಳುವಿಗೆ ಸಂಬಂಧಿಸಿದ ಪ್ರಕರಣಗಳು, ಅಕ್ರಮ ಕಲ್ಲು, ಮರಳು ಸಾಗಾಣಿಕೆ, ಇತರೆಯಾವುದೇ ಅಪರಾಧಿಕ ಸ್ವರೂಪದರಾಜಿಯೋಗ್ಯ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ ಎಂದರು.

Advertisement

ಲೋಕ್‌ ಅದಾಲತ್‌ನಿಂದ ವ್ಯಾಜ್ಯ ಶೀಘ್ರವಾಗಿ ಇತ್ಯರ್ಥ: ಲೋಕ್‌ ಅದಾಲತ್‌ ನಿಂದ ಸಾಕಷ್ಟು ಅನುಕೂಲಗಳಿವೆ.ವ್ಯಾಜ್ಯಗಳನ್ನು ಶೀಘ್ರವಾಗಿ ಇತ್ಯರ್ಥಮಾಡಿಕೊಳ್ಳಬಹುದು. ಅದಾಲತ್‌ನಲ್ಲಿ ಪ್ರಕರಣಗಳು ಇತ್ಯರ್ಥವಾದರೆ, ಪಕ್ಷಾಗಾರರುಸಂದಾಯ ಮಾಡಿದ ಸಂಪೂರ್ಣನ್ಯಾಯಾಲಯದ ಶುಲ್ಕವನ್ನು ಪಾವತಿಸಿದಪಕ್ಷಗಾರರಿಗೆ ಹಿಂತಿರುಗಿಸ ಲಾಗುವುದು. ಅದಾಲತ್‌ ನಲ್ಲಿ ಪಕ್ಷಗಾರರು ಮುಕ್ತವಾಗಿಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಇದರಿಂದ ಸಮಯ, ಹಣ ಉಳಿತಾಯವಾಗಲಿದೆ. ಕುಟುಂಬದಅಭಿವೃದ್ದಿ ಹಾಗೂ ಮಕ್ಕಳ ವಿದ್ಯಾಭ್ಯಾಸದ ಬಗ್ಗೆಗಮನಹರಿಸಿ ಸಾಮರಸ್ಯದ ಜೀವನ ಸಾಧ್ಯವಾಗಲಿದೆ ಎಂದು ತಿಳಿಸಿದರು.

ಪೂರ್ವಭಾವಿಯಾಗಿ ಚರ್ಚಿಸಲಾಗಿದೆ: ಲೋಕ್‌ ಅದಾಲತ್‌ನಲ್ಲಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಲುವಾಗಿ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಈಗಾಗಲೇ ವಿಮಾ ಕಂಪನಿಗಳು, ಬ್ಯಾಂಕು,ಭೂ ಸ್ವಾಧೀನಾಧಿಕಾರಿಗಳು, ಗಣಿ ಮತ್ತುಭೂವಿಜ್ಞಾನ ಇಲಾಖೆ, ಪೊಲೀಸ್‌ ಸೇರಿದಂತೆವಿವಿಧ ವಿಭಾಗದ ನ್ಯಾಯಾಧೀಶರು ಹಾಗೂವಕೀಲರೊಂದಿಗೆ ಪೂರ್ವಭಾವಿಯಾಗಿಚರ್ಚಿಸಿದೆ. ರಾಜೀಯೋಗ್ಯ ಪ್ರಕರಣಗಳನ್ನುಗುರುತಿಸಿ ಉಭಯ ಪಕ್ಷಗಾರರನ್ನು ಒಂದೆಡೆಕಲೆಹಾಕಿ ಸಮಾಲೋಚಿಸುವ ಮೂಲಕಪ್ರಕರಣಗಳ ಇತ್ಯರ್ಥಕ್ಕೆ ಲೋಕ್‌ ಅದಾಲತ್‌ಉತ್ತಮ ವೇದಿಕೆಯಾಗಬೇಕು ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಕಾರ್ಯದರ್ಶಿ ಎಂ.ಶ್ರೀಧರ್‌, ಜಿಲ್ಲಾ ವಕೀಲರಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌, ಕಾರ್ಯದರ್ಶಿ ಎನ್‌. ಕೆ.ವಿರೂಪಾಕ್ಷ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next