ಬಾಗಲಕೋಟೆ: ವಿಚ್ಛೇದನ ಕೊಡಿಸಿ ಎಂದು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದ 3 ಜೋಡಿಗಳು ಒಂದಾದ ಅಪರೂಪದ ಘಟನೆ ಲೋಕ ಅದಾಲತ್ ನಲ್ಲಿ ನಡೆಯಿತು.ಬಾಗಲಕೋಟೆ ನಗರದ 64 ವರ್ಷದ ಚಂದ್ರಕಾಂತ ಹಾಗೂ 55 ವರ್ಷದ ಶಾಂತಾ, ಬಾಗಲಕೋಟೆ ತಾಲೂಕಿನ ಅಂಕಲಗಿ ಗ್ರಾಮದ ಪುಂಡಲೀಕ ಹಾಗೂ ಮೀನಾಕ್ಷಿ, ಮೂಗನೂರ ಗ್ರಾಮದ ಶಿವಶಂಕರ ಹಾಗೂ ಸಂಗೀತಾ ಒಂದಾದ ದಂಪತಿಗಳು.
ಬಾಗಲಕೋಟೆ ಜಿಲ್ಲಾ ನ್ಯಾಯಾಲಯದ ಅಧೀನದಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿದಂಪತಿಗಳು ಒಂದಾಗಿದ್ದಾರೆ.ಅದಾಲತ್‌ನಲ್ಲಿ 9818 ಪ್ರಕರಣಗಳಪೈಕಿ 6453 ಪ್ರಕರಣಗಳನ್ನು ರಾಜೀಸಂಧಾನದ ಮೂಲಕಇತ್ಯರ್ಥಪಡಿಸಲಾಯಿತು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾàಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕಲ್ಪನಾಕುಲಕರ್ಣಿ ಅವರ ಮಾರ್ಗದರ್ಶನದಲ್ಲಿಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿರಾಷ್ಟ್ರೀಯ ಲೋಕ ಅದಾಲತ್ ಶಿಬಿರ ನಡೆಸಲಾಯಿತು.
ಲೋಕ ಅದಾಲತ್ ಶಿಬಿರದಲ್ಲಿ ಒಟ್ಟು 9818 ಪ್ರಕರಣಗಳಲ್ಲಿ 684 ವಾಜ್ಯ ಪೂರ್ವ ಪ್ರಕರಣಗಳು ಮತ್ತು 9134 ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಂದ ಪ್ರಕರಣಗಳನ್ನು ತೆಗೆದುಕೊಳ್ಳಲಾಗಿತ್ತು. ಈ ಪೈಕಿ 478 ವಾಜ್ಯ ಪೂರ್ವ ಹಾಗೂ5975 ನ್ಯಾಯಾಲಯದಲ್ಲಿವಿಚಾರಣೆಗಾಗಿ ತೆಗೆದುಕೊಳ್ಳಲಾದ ಪ್ರಕರಣಗಳು ಸೇರಿ ಒಟ್ಟು 6453ಪ್ರಕರಣ ಇತ್ಯರ್ಥ ಪಡಿಸಿ ರಾಜೀಸಂಧಾನ ಮಾಡಿಸಲಾಯಿತು. ಈಎಲ್ಲ ಪ್ರಕರಣಗಳಿಗೆ ಅಂದಾಜು39.92 ಕೋಟಿ ರೂ.ಗಳಿಗೆ ರಾಜಿ ಮಾಡಿಸಲಾಯಿತು.
ಬಾಗಲಕೋಟೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿವಿಧ ನ್ಯಾಯಾಲಯದಲ್ಲಿ ವಿಚಾರಣೆಗಾಗಿಬಾಕಿ ಇರುವ ಒಟ್ಟು 3223 ಪ್ರಕರಣಗಳ ಪೈಕಿ 2339 ಪ್ರಕರಣಗಳು ಇತ್ಯರ್ಥವಾದರೆ, ಬೀಳಗಿ ಕೋರ್ಟ್ ನಲ್ಲಿ 419 ಪ್ರಕರಣಗಳ ಪೈಕಿ 314, ಮುಧೋಳ ಕೋರ್ಟ್‌ನಲ್ಲಿ 547 ಪ್ರಕರಣಗಳ ಪೈಕಿ 360, ಬನಹಟ್ಟಿ ಕೋರ್ಟ್‌ನಲ್ಲಿ 981 ಪ್ರಕರಣಗಳ ಪೈಕಿ 695, ಹುನಗುಂದ ಕೋರ್ಟನಲ್ಲಿ 878 ಪ್ರಕರಣಗಳ ಪೈಕಿ 373, ಜಮಖಂಡಿ ಕೋರ್ಟ್‌ನಲ್ಲಿ 2178 ಪ್ರಕರಣಗಳ ಪೈಕಿ 1478 ಹಾಗೂಬಾದಾಮಿ ಕೋರ್ಟ್‌ನಲ್ಲಿ 786 ಪ್ರಕರಣಗಳ ಪೈಕಿ 416 ಪ್ರಕರಣಗಳನ್ನುರಾಜೀ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು.
ಲೋಕ ಅದಾಲತ್ ಶಿಬಿರದಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ ಸಿ.ಬಿ,ಪ್ರಧಾನ ಕೌಟುಂಬಿಕ ನ್ಯಾಯಾಲಯದನ್ಯಾಯಾಧಿಧೀಶರಾದ ಶೀಲಾ ಎನ್.,ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಪ್ರಕಾಶ ವಿ., ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, 1ನೇ ಹೆಚ್ಚುವರಿಹಿರಿಯ ದಿವಾಣಿ ನ್ಯಾಯಾಧಿಧೀಶಎಂ.ಎ.ಎಚ್.ಮೊಗಲಾನಿ, 2ನೇಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಆರ್.ಎಲ್.ಹೊನೊಲೆ, ಪ್ರಧಾನದಿವಾಣಿ ನ್ಯಾಯಾಧಿಧೀಶ ನಾಗರಾಜ ಎಸ್, ಜಿಲ್ಲಾ ನ್ಯಾಯಾಲಯದ ಆಡಳಿತ ಸಹಾಯಕ ಎಂ.ಎಚ್. ಕಡಕೋಳ ಸೇರಿದಂತೆ ಕಕ್ಷಿದಾರರು, ವಕೀಲರು ಇದ್ದರು. ವಕೀಲರಾದಪಿ.ಬಿ.ಮೊಹರೀರ್, ಎಂ.ಎಸ್.ಹೊಸಮನಿ, ರಾಜೇಶ ಮುಗಜಿ ಸಂಧಾನಕಾರರಾಗಿ ಭಾಗವಹಿಸಿದ್ದರು.