Advertisement

ಲೋಕಸಭೆ ಚುನಾವಣೆ ಮತಗಟ್ಟೆ  ಶಾಲೆಗಳಿಗೆ ಸೌಲಭ್ಯ ಭಾಗ್ಯ!

01:00 AM Mar 22, 2019 | Team Udayavani |

ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತಗಟ್ಟೆಗಳಾಗಿ ಘೋಷಿಸಿರುವ 19,953 ಸರಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲು 34.18 ಕೋ.ರೂ.ಗಳನ್ನು ಸರಕಾರ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಬಿಡುಗಡೆ ಮಾಡಿದೆ. 

Advertisement

ವಿವಿಧ ರೀತಿಯ ಮೂಲ ಸೌಕರ್ಯಗಳಿಂದ ನಲುಗುತ್ತಿರುವ ಗ್ರಾಮಾಂತರ ಭಾಗದ ಸರಕಾರಿ ಶಾಲೆಗಳು ಚುನಾವಣೆಯ ನೆಪದಲ್ಲಿ ಸ್ವಲ್ಪ ಮಟ್ಟಿಗೆ ಮೇಲ್ದಜೆì ಗೇರಲಿವೆ. ಮತದಾನದ ದಿನ ಮತದಾರರಿಗೆ ಹಾಗೂ ಚುನಾವಣಾ ಸಿಬಂದಿಗೆ  ಸಮಸ್ಯೆ ಹಾಗೂ ಕೊರತೆ ಎದುರಾಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಮೂಲ ಸೌಲಭ್ಯ ಒದಗಿಸಲು ಸರಕಾರ ಸೂಚಿಸಿದೆ.

ಮತದಾರರಿಗೆ ಸಹಾಯವಾಗುವ ನೆಲೆಯಲ್ಲಿ ರ್‍ಯಾಂಪ್‌ ವ್ಯವಸ್ಥೆ ಮಾಡ ಬೇಕಿದೆ. ಈಗ ಇರುವ ರ್‍ಯಾಂಪ್‌ಗ್ಳನ್ನು ಸುಸ್ಥಿತಿಯಲ್ಲಿಡಬೇಕಾಗಿದೆ. ಶೌಚಾಲಯ ವ್ಯವಸ್ಥೆ ಕಡ್ಡಾಯ. ಕೆಲವು ಶಾಲೆಯಲ್ಲಿ ವಿದ್ಯುತ್‌ ಸಮಸ್ಯೆ ಇದ್ದು, ಸರಿಪಡಿಸಲು ಕ್ರಮ ಕೈಗೊಳ್ಳಬೇಕಿದೆ ಮತ್ತು ಪ್ಲಗ್‌ ಪಾಯಿಂಟ್‌ಗಳನ್ನು ಸುಸ್ಥಿತಿಯಲ್ಲಿಡ ಬೇಕಾಗಿದೆ. ಸದ್ಯ ರಾಜ್ಯದಲ್ಲಿ ಬೇಸಗೆ ಬೇಗೆ ಇದೆ. ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡ ಬೇಕಾಗಿದೆ. ಇವಿಷ್ಟು ತುರ್ತು ಮತ್ತು ಆವಶ್ಯಕವಾಗಿದ್ದು, ಜೋಡಿಸಿಕೊಳ್ಳಲು ಸರಕಾರವು ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.

ಮತಗಟ್ಟೆಗಳನ್ನು ಸಜ್ಜುಗೊಳಿಸಬೇಕಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಂದ ಬೇಡಿಕೆ ಪಟ್ಟಿಯನ್ನು ಪಡೆದು ಕ್ರೋಡೀ ಕರಿಸಿ ಜಿಲ್ಲಾವಾರು ಮತಗಟ್ಟೆಯಾಗಿ ಆಯ್ಕೆಯಾಗಿರುವ 19,953 ಸರಕಾರಿ ಶಾಲೆಗಳಿಗೆ 3,418.74 ಲಕ್ಷ ರೂ. ಅನುದಾನ ಬೇಡಿಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರಂತೆ ಸರಕಾರ ಹಣ ಬಿಡುಗಡೆ ಮಾಡಿದೆ. 

ಉಳಿದ ಮತಗಟ್ಟೆಗಳ ಜವಾಬ್ದಾರಿ ಗ್ರಾಮ ಪಂಚಾಯತ್‌ಗೆ
ಉಳಿದ ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಮತಗಟ್ಟೆ ಗಳಲ್ಲಿ ಮೂಲ ಸೌಕರ್ಯ ಗಳನ್ನು ಒದಗಿಸುವ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯತ್‌ಗಳಿಗೆ ನೀಡಲಾಗಿದೆ. 

Advertisement

ಸರಕಾರಿ ಶಾಲೆಗಳಲ್ಲಿ ಚುನಾವಣೆ ದಿನಾಂಕಕ್ಕೆ ಒಂದು ವಾರದ ಮುಂಚಿತವಾಗಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಪಾಸಣೆ ನಡೆಸಿ ಮೂಲ ಸೌಕರ್ಯಗಳು ಸುಸಜ್ಜಿತವಾಗಿ ಇರುವುದನ್ನು ಖಚಿತಪಡಿಸಬೇಕು. ಒಂದು ವೇಳೆ ಮತದಾನ ದಿನ ಮತಗಟ್ಟೆಯಾಗಿರುವ ಸರಕಾರಿ ಶಾಲೆಗಳಲ್ಲಿ ಸೌಕರ್ಯದ ಕೊರತೆ ಕಂಡುಬಂದಲ್ಲಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. 

ಆಯಾ ವ್ಯಾಪ್ತಿಯ  ಗ್ರಾ.ಪಂ.ಗೆ ಸೂಚನೆ
ಚುನಾವಣೆಯ ಹಿನ್ನೆಲೆಯಲ್ಲಿ ಮತಗಟ್ಟೆಯಾಗಿರುವ ಸರಕಾರಿ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ದ.ಕ. ಜಿಲ್ಲೆಗೆ ಒಟ್ಟು 63.44 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಉಳಿದ ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಆಯಾ ವ್ಯಾಪ್ತಿಯ ಗ್ರಾ.ಪಂ.ಗೆ ನಿರ್ದೇಶನ ನೀಡಲಾಗಿದೆ.
– ಶಶಿಕಾಂತ ಸೆಂಥಿಲ್‌, ಜಿಲ್ಲಾಧಿಕಾರಿ ದ.ಕ.

ಕರಾವಳಿಗೆ 1.12 ಕೋ.ರೂ.
ದ.ಕ. ಜಿಲ್ಲೆಯಲ್ಲಿ  ಮತಗಟ್ಟೆಗಳಾಗಿ ಘೋಷಿಸಿರುವ 273 ಸರಕಾರಿ ಶಾಲೆಗಳಿಗೆ 63.44 ಲಕ್ಷ ರೂ. ಮತ್ತು ಉಡುಪಿ ಜಿಲ್ಲೆಯ 307 ಸರಕಾರಿ ಶಾಲೆಗಳಿಗೆ 48.91 ಲಕ್ಷ ಅನುದಾನ ಬಿಡುಗಡೆಯಾಗಿದೆ. ಕರಾವಳಿಯ 580 ಮತಗಟ್ಟೆ ಸರಕಾರಿ ಶಾಲೆಗಳಿಗೆ ಒಟ್ಟು 1.12 ಕೋ.ರೂ. ಅನುದಾನ ಲಭ್ಯವಾದಂತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next