Advertisement
ಮಸೂದೆ ಮಂಡನೆಯಾದಾಗ ನಡೆದ ಚರ್ಚೆಯ ವೇಳೆ, ಕಾಂಗ್ರೆಸ್‌ನ ಮನೀಶ್ ತಿವಾರಿಯವರು, ನದಿ ವ್ಯಾಜ್ಯಗಳ ತೀರ್ಮಾನದಲ್ಲಿ ಸಂಬಂಧಪಟ್ಟ ರಾಜ್ಯಗಳ ಸಲಹೆಗಳನ್ನು ಕೇಳುವಂಥ ಅಂಶವು ಈ ಮಸೂದೆಯಲ್ಲಿ ಉಲ್ಲೇಖೀಸಲಾಗಿಲ್ಲ. ಇದು ಸಂವಿಧಾನಕ್ಕೆ ವಿರೋಧವಾದದ್ದು ಎಂದು ಆಕ್ಷೇಪಿಸಿದರು. ಅಲ್ಲದೆ, ಜಲವಿವಾದ ನ್ಯಾಯಾಧೀಕರಣದ ಸದಸ್ಯರ ಆಯ್ಕೆ ಸಮಿತಿಯಲ್ಲಿ ರಾಜ್ಯಸಭೆಯ ವಿಪಕ್ಷ ನಾಯಕರು ಅಥವಾ ಲೋಕಸಭೆಯ ವಿಪಕ್ಷ ನಾಯಕರಿಗೆ ಅವಕಾಶ ಕಲ್ಪಿಸಬೇಕಿತ್ತು ಎಂದು ಆಗ್ರಹಿಸಿದರು. ಕರ್ನಾಟಕ, ತಮಿಳುನಾಡು ಸಂಸದರು ಕಾವೇರಿ ವಿವಾದ ಕುರಿತಂತೆ ಪರಸ್ಪರ ವಾಗ್ವಾದ ನಡೆಸಿದರು. ಆಗ, ಮಧ್ಯಪ್ರವೇಶಿಸಿದ ಸ್ಪೀಕರ್ ಓಂ ಬಿರ್ಲಾ, ‘ಇದು ನಿಮ್ಮ ರಾಜ್ಯಗಳ ವಿಧಾನಸಭೆಯಲ್ಲ’ ಎಂದು ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
Advertisement
ನದಿ ವಿವಾದ ವಿಧೇಯಕಕ್ಕೆ ‘ಲೋಕ’ಸಮ್ಮತಿ
01:00 AM Aug 01, 2019 | mahesh |
Advertisement
Udayavani is now on Telegram. Click here to join our channel and stay updated with the latest news.