Advertisement

ಅಂಟಾರ್ಟಿಕ್‌ ವಿಧೇಯಕ ಲೋಕಸಭೆಯಲ್ಲಿ ಪಾಸ್‌: ಗಲಾಟೆಯಿಂದ ಎರಡೂ ಸದನಗಳ ಕಲಾಪ ಮುಂದೂಡಿಕೆ

01:35 AM Jul 23, 2022 | Team Udayavani |

ಹೊಸದಿಲ್ಲಿ: ಬೆಲೆಯೇರಿಕೆ, ಜಿಎಸ್‌ಟಿ ಹೆಚ್ಚಳ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳ ಗದ್ದಲ ಮುಂದುವರಿದಿರುವಂತೆಯೇ ಲೋಕಸಭೆಯಲ್ಲಿ ಶುಕ್ರವಾರ ಭಾರತೀಯ ಅಂಟಾರ್ಟಿಕ್‌ ವಿಧೇಯಕ, 2022 ಅಂಗೀಕಾರಗೊಂಡಿದೆ.

Advertisement

ವಿಧೇಯಕ ಅಂಗೀಕೃತಗೊಂಡ ಬೆನ್ನಲ್ಲೇ ಸದನದ ಕಲಾಪವನ್ನು ಸೋಮವಾರದವರೆಗೆ ಮುಂದೂಡಿಕೆ ಮಾಡಲಾಗಿದೆ.

ರಾಜ್ಯಸಭೆಯಲ್ಲೂ ವಿಪಕ್ಷಗಳ ಗದ್ದಲ ಮುಂದುವರಿದ ಕಾರಣ, ಕಲಾಪ ಮುಂದೂಡಲ್ಪಟ್ಟಿದೆ.

ಅಂಟಾರ್ಟಿಕ್‌ ವಲಯದಲ್ಲಿ ಭಾರತವು ನಿರ್ಮಿಸಿರುವ ಸಂಶೋಧನಾ ಕೇಂದ್ರಗಳಿಗೆ ದೇಶೀಯ ಕಾನೂನು ಅನ್ವಯವಾಗುವಂತೆ ಮಾಡುವುದು ಈ ವಿಧೇಯಕದ ಉದ್ದೇಶ. ಸದ್ಯ ಅಂಟಾರ್ಟಿಕಾದಲ್ಲಿ ಭಾರತವು ಮೈತ್ರಿ ಮತ್ತು ಭಾರತಿ ಎಂಬ ಎರಡು ಸಕ್ರಿಯ ಸಂಶೋಧನಾ ಕೇಂದ್ರಗಳನ್ನು ಹೊಂದಿದೆ. ಅಲ್ಲಿ ವಿಜ್ಞಾನಿಗಳು ವಿವಿಧ ಸಂಶೋಧನೆಯಲ್ಲಿ ತೊಡಗಿದ್ದಾರೆ. ಅಂಟಾರ್ಟಿಕ್‌ ಖಂಡದ ಪರಿಸರದ ಸಂರಕ್ಷಣೆ ಮತ್ತು ಸಂಶೋಧನಾ ಕಾರ್ಯದ ಕ್ಷೇಮಾಭಿವೃದ್ಧಿಗಾಗಿ ನಿಧಿಯೊಂದನ್ನು ಸ್ಥಾಪಿಸುವ ಪ್ರಸ್ತಾವವೂ ವಿಧೇಯಕದಲ್ಲಿದೆ.

ಮೋದಿ ನೇತೃತ್ವದ ಸಭೆ: ಸಂಸತ್‌ ಕಲಾಪಗಳು ವ್ಯರ್ಥವಾಗಿರುವಂತೆಯೇ ಪ್ರಧಾನಿ ಮೋದಿ ಅವರು ಶುಕ್ರವಾರ ತಮ್ಮ ಸಂಪು ಟದ ಪ್ರಮುಖ ಸಚಿವರೊಂದಿಗೆ ಸಭೆ ಯೊಂದನ್ನು ನಡೆಸಿದ್ದಾರೆ. ಅದರಲ್ಲಿ ಸಂಸತ್‌ನಲ್ಲಿ ಸರಕಾರದ ಕಾರ್ಯತಂತ್ರದ ಕುರಿತು ಚರ್ಚಿಸಲಾಗಿದೆ. ಸಭೆಯಲ್ಲಿ ಸಚಿವರಾದ ರಾಜನಾಥ್‌ ಸಿಂಗ್‌, ಅಮಿತ್‌ ಶಾ, ಪ್ರಹ್ಲಾದ್‌ ಜೋಷಿ, ಅನುರಾಗ್‌ ಠಾಕೂರ್‌, ಪಿಯೂಷ್‌ ಗೋಯಲ್‌, ರಿಜಿಜು ಭಾಗಿಯಾಗಿದ್ದರು.

Advertisement

ವಿಪಕ್ಷಗಳಿಂದ ಪ್ರತಿಭಟನೆ: ಅತ್ಯಗತ್ಯ ವಸ್ತುಗಳ ಜಿಎಸ್‌ಟಿ ಹೆಚ್ಚಳವನ್ನು ಸರಕಾರ ವಾಪಸ್‌ ಪಡೆಯಬೇಕೆಂದು ಆಗ್ರಹಿಸಿ ಶುಕ್ರವಾರ ವಿವಿಧ ವಿಪಕ್ಷಗಳ ನಾಯ ಕರು ಸಂಸತ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್‌, ಎನ್‌ಸಿಪಿ, ಸಿಪಿಐ, ಸಿಪಿಎಂ, ಶಿವ ಸೇನೆ, ಡಿಎಂಕೆ, ಆರ್‌ಎಸ್‌ಪಿ ಸೇರಿದಂತೆ ಹಲವು ಪಕ್ಷಗಳು ಸಂಸತ್‌ ಭವನದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿ, ಘೋಷಣೆ ಕೂಗಿದ್ದಾರೆ.

ರಾಜ್ಯಸಭೆಯಲ್ಲಿ ಬೆಳಗ್ಗೆ ಕಲಾಪ ಶುರುವಾದ ಅನಂತರ ವಿಪಕ್ಷಗಳು ಗದ್ದಲ ಆರಂಭಿಸಿದವು. ಅದರ ಪರಿಣಾಮ, ಮಧ್ಯಾಹ್ನ ಊಟದ ಬಿಡುವಿಗೂ ಮುನ್ನ ಎರಡು ಬಾರಿ ಕಲಾಪವನ್ನು ಮುಂದೂಡಲಾ ಯಿತು. ವಿಪಕ್ಷಗಳ ತೀವ್ರ ಗದ್ದಲದ ನಡುವೆಯೂ ರಾಜ್ಯಸಭೆಯ ಡೆಪ್ಯುಟಿ ಸ್ಪೀಕರ್‌ ಹರಿವಂಶ್‌ ನಾರಾಯಣ್‌ ಸಿಂಗ್‌, ದಿನದ ಪ್ರಶ್ನೋತ್ತರ ಅವಧಿಯನ್ನು ಪೂರ್ಣ ಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪಿಯೂಶ್‌ ಗೋಯೆಲ್‌, ಬೆಲೆಯೇರಿಕೆ ವಿಚಾರದ ಬಗ್ಗೆ ಚರ್ಚೆಗೆ ಸಿದ್ಧವಿ ರುವುದಾಗಿ ಹೇಳಿದರು. ಆದರೆ, ವಿಪಕ್ಷ ಗಳು ಇದನ್ನು ಒಪ್ಪಲಿಲ್ಲ. ಬದಲಿಗೆ, ವಿಪಕ್ಷಗಳು ಕೂಡಲೇ ಜಿಎಸ್‌ಟಿ ಆದೇಶ ವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದವು.

 

Advertisement

Udayavani is now on Telegram. Click here to join our channel and stay updated with the latest news.

Next