Advertisement

ಎಸ್‌ಟಿಗೆ ತಳವಾರ, ಸಿದ್ದಿ , ಪರಿವಾರ ಸೇರ್ಪಡೆ

09:13 AM Feb 13, 2020 | mahesh |

ಹೊಸದಿಲ್ಲಿ: ಧಾರವಾಡ, ಉತ್ತರ ಕನ್ನಡ ಜಿಲ್ಲೆ, ಬೆಳಗಾವಿಯ ಸಿದ್ಧಿ, ಪರಿವಾರ ಮತ್ತು ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಗಳಿಗೆ ಸೇರಿಸುವ ಮಸೂದೆಗೆ ಮಂಗಳವಾರ ಸಂಸತ್‌ನ ಅನುಮೋದನೆ ಸಿಕ್ಕಿದೆ.

Advertisement

ಇದಕ್ಕೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ (ಪರಿಶಿಷ್ಟ ಪಂಗಡ) ಮಸೂದೆ 2019 ಅನ್ನು ಲೋಕಸಭೆಯಲ್ಲಿ ಧ್ವನಿ ಮತದಿಂದ ಅಂಗೀಕರಿಸಲಾಗಿದೆ. ರಾಜ್ಯ ಸಭೆಯಲ್ಲಿ ಈ ಮಸೂದೆಗೆ ಈ ಹಿಂದೆಯೇ ಅನುಮೋದನೆ ನೀಡ ಲಾಗಿತ್ತು. ಈ ಬಗ್ಗೆ ಮಾತನಾಡಿದ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್‌ ಮುಂಡಾ, ಇದು ಒಂದು ರಾಜ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ತಿದ್ದುಪಡಿಯಲ್ಲ. ಇತರ ರಾಜ್ಯಗಳಿಂದ ಪರಿಶಿಷ್ಟ ಪಂಗಡ ವ್ಯಾಪ್ತಿಗೆ ಸೇರ್ಪಡೆ ಗೊಳಿಸಬೇಕಾಗಿರುವ ಜಾತಿ ಗಳನ್ನು ಸೇರಿಸಲೂ ಅವಕಾಶ ಇದೆ ಎಂದಿದ್ದಾರೆ.

ಶಿವಸೇನೆಯ ಅರವಿಂದ ಸಾವಂತ್‌ ಮತ್ತು ಎನ್‌ಸಿಪಿಯ ಸುಪ್ರಿಯಾ ಸುಳೆ ಮಹಾರಾಷ್ಟ್ರದಲ್ಲಿನ ಧಂಗಾರ್‌ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸ ಬೇಕೆಂದು ಒತ್ತಾಯಿಸಿದ್ದಾರೆ. ತಮಿಳುನಾಡಿನ ಸಂಸದರೂ ಕೂಡ ಇದೇ ಮಾದರಿಯ ಬೇಡಿಕೆ ಮುಂದಿಟ್ಟರು. ಇದೇ ವೇಳೆ ಮರಾಠಿ ಭಾಷಿಕರಿಗೆ ಬೆಳಗಾವಿಯಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದು ಶಿವಸೇನೆಯ ಅರವಿಂದ ಸಾವಂತ್‌ ದೂರಿದರು. ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಆಕ್ಷೇಪ ವ್ಯಕ್ತಪಡಿಸಿ, ಬೆಳಗಾವಿ ಗಡಿ ವಿಚಾರ ಇನ್ನೂ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ಹೀಗಾಗಿ ಅದರ ಪ್ರಸ್ತಾವ ಬೇಡ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next