Advertisement

Lok Sabha; 3 ಪ್ರಮುಖ ಮಸೂದೆಗಳ ಅಂಗೀಕಾರ; ತ್ವರಿತ ನ್ಯಾಯದತ್ತ ಗಮನ ಎಂದ ಶಾ

09:05 PM Dec 20, 2023 | Team Udayavani |

ಹೊಸದಿಲ್ಲಿ: ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸುವ ಮೂರು ಪ್ರಮುಖ ಮಸೂದೆಗಳನ್ನು(IPC, CrPC, Evidence Act) ಲೋಕಸಭೆ ಬುಧವಾರ ಅಂಗೀಕರಿಸಿದ್ದು, ‘ಶಿಕ್ಷೆಯನ್ನು ನೀಡುವುದಕ್ಕಿಂತ ಮೊದಲು ತ್ವರಿತ ನ್ಯಾಯವನ್ನು ನೀಡುವತ್ತ ಗಮನಹರಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ.

Advertisement

ಮೂರು ಮಸೂದೆಗಳಾದ ಭಾರತೀಯ ನ್ಯಾಯ (ಎರಡನೇ) ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತೆ 2023 ಮತ್ತು ಭಾರತೀಯ ಸಾಕ್ಷಿ (ಎರಡನೇ) 2023 ಮಸೂದೆಗಳು ಭಯೋತ್ಪಾದನೆ, ಅಪರಾಧಗಳು ಮತ್ತು ದೇಶದ್ರೋಹದ ಸ್ಪಷ್ಟ ವ್ಯಾಖ್ಯಾನವನ್ನು ಹೊಂದಿವೆ ಎಂದು ಶಾ ಹೇಳಿದರು.

“ವಸಾಹತುಶಾಹಿ ಆಳ್ವಿಕೆಯ ಎಲ್ಲಾ ಚಿಹ್ನೆಗಳನ್ನು ತೆಗೆದುಹಾಕಲಾಗುವುದು ಮತ್ತು ಸಂಪೂರ್ಣ ಭಾರತೀಯ ಕಾನೂನು ಸಂಹಿತೆಯನ್ನು ಜಾರಿಗೆ ತರಲಾಗುವುದು” ಎಂದು ಶಾ ಹೇಳಿದರು.

‘ವೈಯಕ್ತಿಕವಾಗಿ ಎಲ್ಲವನ್ನೂ ವಿವರವಾಗಿ ಪರಿಶೀಲಿಸಿದ್ದು, 158 ಸಭೆಗಳನ್ನು ನಡೆಸಿ, ಹೊಸ ಕ್ರಿಮಿನಲ್ ಕಾನೂನುಗಳ ಪೂರ್ಣ ವಿರಾಮವನ್ನು ನಾನು ಪ್ರತಿ ಅಲ್ಪವಿರಾಮವನ್ನು ಕೂಡ ನೋಡಿದ್ದೇನೆ”, ಅವು ಸಂವಿಧಾನದ ಮನೋಭಾವಕ್ಕೆ ಅನುಗುಣವಾಗಿವೆ ಎಂದು ಹೇಳಿದರು.

ಜನರಿಗೆ ನ್ಯಾಯ ನೀಡುವಲ್ಲಿ ತಂತ್ರಜ್ಞಾನದ ಬಳಕೆಯನ್ನು ಮಸೂದೆಗಳು ಉತ್ತೇಜಿಸುತ್ತವೆ ಬಿಲ್‌ಗಳಲ್ಲಿ ಗುಂಪು ಹತ್ಯೆ(ಮಾಬ್-ಲಿಂಚಿಂಗ್) ಅನ್ನು ಅಪರಾಧ ಎಂದು ಸೇರಿಸಲಾಗಿದೆ ಎಂದು ಶಾ ಹೇಳಿದರು.

Advertisement

1860 ರ ಭಾರತೀಯ ದಂಡ ಸಂಹಿತೆ, 1973 ರ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಮತ್ತು 1872 ರ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಬದಲಿಸುವ ಮಸೂದೆಗಳ ಮೇಲಿನ ಚರ್ಚೆ ಮಂಗಳವಾರ ಪ್ರಾರಂಭವಾಗಿತ್ತು.

ಲೋಕಸಭೆಯಿಂದ 97 ಸಂಸದರನ್ನು ಅಮಾನತುಗೊಳಿಸಿದ ಕಾರಣದಿಂದ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಇತರ ವಿಪಕ್ಷಗಳ ಸದಸ್ಯರು ಸದನದಲ್ಲಿ ಚರ್ಚೆಯ ಸಮಯದಲ್ಲಿ ಹಾಜರಾಗಿರಲಿಲ್ಲ. ಅನೇಕ ವಿಪಕ್ಷಗಳು ಐಪಿಸಿ, ಸಿಆರ್‌ಪಿಸಿ ಮತ್ತು ಎವಿಡೆನ್ಸ್ ಆಕ್ಟ್ ಅನ್ನು ಬದಲಿಸಲು ಪ್ರಯತ್ನಿಸುವ ಮಸೂದೆಗಳನ್ನು ಟೀಕಿಸಿದ್ದು, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಬಿಜು ಜನತಾ ದಳ ಮತ್ತು ಬಿಎಸ್ ಪಿ ಸಂಸದರು ಸೇರಿದಂತೆ ಬೆರಳೆಣಿಕೆಯಷ್ಟು ಎನ್‌ಡಿಎಯೇತರ ಸದಸ್ಯರು ಸದನದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next