ಹೊಸದಿಲ್ಲಿ: ಲೋಕಸಭೆಯಲ್ಲಿ ಶುಕ್ರವಾರ ಒಂದೇ ದಿನ ಅತ್ಯುತ್ತಮ ರೀತಿಯಲ್ಲಿ ಚರ್ಚೆ ನಡೆದು ಶೇ. 204 ಉತ್ಪಾದಕತೆ ದಾಖಲಾಗಿದೆ!
ನ. 29ರಂದು ಆರಂಭವಾಗಿದ್ದ ಸಂಸತ್ ಅಧಿವೇಶನದಲ್ಲಿ ಗುರುವಾರದ ವರೆಗೆ ಲೋಕಸಭೆಯಲ್ಲಿ ಕೋಲಾಹಲದ ವಾತಾವರಣವಿತ್ತು.
ಆದರೆ ದೇಶದಲ್ಲಿ ಕೊರೊನಾ ಸಮಸ್ಯೆ ಬಗ್ಗೆ 11 ಗಂಟೆ 3 ನಿಮಿಷಗಳ ಕಾಲ ಸಮಗ್ರ ಚರ್ಚೆ ನಡೆಸಿತು. ಲೋಕಸಭೆಯ ಒಟ್ಟು 96 ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಹೀಗಾಗಿ ಒಂದೇ ದಿನ ಶೇ. 204ರಷ್ಟು ಉತ್ಪಾದಕತೆ (ಉತ್ತಮ ರೀತಿಯಲ್ಲಿ ಚರ್ಚೆ ನಡೆದ ಅವಧಿ)ಯಾಗಿದೆ. ಬುಧವಾರ ಕೆಳಮನೆಯಲ್ಲಿ ತಂತ್ರಜ್ಞಾನ ನೆರವಿನಿಂದ ಸಂತಾನೋತ್ಪತ್ತಿ ಮಸೂದೆ ಬಗ್ಗೆ ಚರ್ಚೆ ನಡೆದಿತ್ತು. ಆ ದಿನ ಶೇ. 117ರಷ್ಟು ಉತ್ಪಾದಕತೆ ದಾಖಲಾಗಿತ್ತು.
ಇದನ್ನೂ ಓದಿ:ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆ
ಅಧಿವೇಶನ ಆರಂಭವಾದ ಬಳಿಕ ಇದುವರೆಗೆ ಶೇ. 83ರಷ್ಟು ಉತ್ಪಾದಕತೆ ದಾಖಲಾಗಿದೆ. ಮೊದಲ 2 ದಿನಗಳಲ್ಲಿ (ನ. 29, ನ.30) ಶೇ. 6.7ರಷ್ಟು ಸಾಧನೆ ಮಾಡಿತ್ತು.