Advertisement

ಜೈಪುರವೀಗ ಕ್ರೀಡಾ ಕಲಿಗಳ ಕಣ!

11:03 AM May 04, 2019 | Team Udayavani |

ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನದ ದಿನದಂದು ದೇಶದ ಗಮನ ರಾಜಸ್ಥಾನದ ಜೈಪುರ ಗ್ರಾಮಾಂತರ ಕ್ಷೇತ್ರದ ಮೇಲೆ ಇರಲಿದೆ. ಈ ಬಾರಿ ಇಬ್ಬರು ದಿಗ್ಗಜ ಕ್ರೀಡಾಪಟುಗಳು ಕಣದಲ್ಲಿದ್ದಾರೆ. ಬಿಜೆಪಿಯು ಕೇಂದ್ರ ಸಚಿವ, ಒಲಿಂಪಿಕ್‌ ವಿಜೇತ, 49 ವರ್ಷದ ರಾಜ್ಯವರ್ಧನ್‌ ರಾಥೋಡ್‌ರನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್‌ ಕಾಮನ್‌ವೆಲ್ತ್‌ ಗೋಲ್ಡ್‌ ಮೆಡಲಿಸ್ಟ್‌ ಮತ್ತು ಒಲಿಂಪಿಯನ್‌ 36 ವರ್ಷದ ಕೃಷ್ಣ ಪುನಿಯಾರನ್ನು ನಿಲ್ಲಿಸಿದೆ.

Advertisement

ಗೆದ್ದಿದ್ದರು ರಾಥೋಡ್‌: 2014ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರು ಕಾಂಗ್ರೆಸ್‌ನ ದಿಗ್ಗಜ ಸಿ.ಪಿ. ಜೋಷಿ ಅವರನ್ನು ಮೂರ ಲಕ್ಷಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ರಾಥೋಡ್‌ ಅವರ ಪ್ರಚಂಡ ಜಯವು ಅವರಿಗಿರುವ ಜನಪ್ರಿಯತೆಯನ್ನು ಎತ್ತಿ ತೋರಿಸಿತು. ತತ#ಲವಾಗಿ ಕೇಂದ್ರದಲ್ಲಿ ಸಚಿವ ಸ್ಥಾನವೂ ಅವರಿಗೆ ದಕ್ಕಿತು. 2009ರಲ್ಲಿ ಕಾಂಗ್ರೆಸ್‌ನ ಲಾಲ್‌ಚಂದ್‌ ಕಟಾರಿಯಾ ಅ ಬಿಜೆಪಿಯ ರಾವ್‌ ರಾಜೇಂದ್ರ ಸಿಂಗ್‌ರನ್ನು 52 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.

ಕೃಷ್ಣ ಪುನಿಯಾ ಖದರ್‌: ಕೃಷ್ಣ ಪುನಿಯಾ 2018ರ ವಿಧಾನಸಭಾ ಚುನಾವಣೆಯಲ್ಲಿ ಜೈಪುರ ಗ್ರಾಮಾಂತರ ಕ್ಷೇತ್ರದ ಸಾದುಲ್‌ಪುರದಿಂದ ಶಾಸಕಿ ಯಾಗಿ ಆಯ್ಕೆಯಾದವರು. ಆಗ ಕಾಂಗ್ರೆಸ್‌ ಜೈಪುರ ಗ್ರಾಮಾಂತರದ 8 ವಿಧಾನಸಭಾ ಕ್ಷೇತ್ರಗಳಲ್ಲಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತಾದ್ದರಿಂದ, ಲೋಕಸಭಾ ಚುನಾವಣೆಯಲ್ಲೂ ಜನರ ಒಲವು ತಮ್ಮ ಪಕ್ಷದತ್ತಲೇ ಇರಲಿದೆ ಎನ್ನುವ ಭರವಸೆಯಲ್ಲಿದೆ. ಕೃಷ್ಣ ಪುನಿಯಾ ನಿತ್ಯ ಏನಿಲ್ಲವೆಂದರೂ 20ಕ್ಕೂ ಹೆಚ್ಚು ಸಭೆಗಳನ್ನು ಮಾಡುತ್ತಾರೆ, ರೈತರ ಮಗಳೂ ಆಗಿರುವ ಆಕೆ, ಸ್ಥಳೀಯವಾಗಿಯೂ ತುಂಬಾ ಜನಪ್ರಿಯತೆ ಗಳಿಸಿದ್ದಾರೆ ಎನ್ನುವುದು ಕಾಂಗ್ರೆಸ್‌ನ ಮಾತು. ಈ ಮಾತನ್ನು ಅಲ್ಲಗಳೆಯುವುದಕ್ಕೂ ಸಾಧ್ಯವಿಲ್ಲ. ಜೈಪುರ ಗ್ರಾಮಾಂತರವು ರಾಜ್ಯವರ್ಧನ್‌ರನ್ನು ಎಷ್ಟು ಪ್ರೀತಿಸುತ್ತದೋ, ಕೃಷ್ಣ ಪುನಿಯಾರನ್ನೂ ಅಷ್ಟೇ ಪ್ರೀತಿಸುತ್ತದೆ. ಇಬ್ಬರೂ ಅಭಿವೃದ್ಧಿ ಪರ ರಾಜಕಾರಣಿಗಳು, ಪರಿಶ್ರಮಿಗಳು, ಯುವಕ- ಯುವತಿಯರಿಗೆ ಇಬ್ಬರೂ ಮಾದರಿಯೇ.

ಕೃಷ್ಣ ಪುನಿಯಾ ಬಲಿಷ್ಠ ಹೆಣ್ಣುಮಗಳಾಗಿಯೂ ಗುರುತಿಸಿ ಕೊಂಡವರು. 2017ರಲ್ಲಿ ಅವರು ರಾಜಸ್ಥಾನದ ರಾಜ್‌ಗಢ್‌ನಲ್ಲಿ ಮೂರು ಹೆಣ್ಣು ಮಕ್ಕಳನ್ನು ಪುಂಡರಿಂದ ಪಾರು ಮಾಡಿದ್ದರು. ಹುಡುಗಿಯರನ್ನು ಛೇಡಿಸುತ್ತಿದ್ದ ಹುಡುಗರನ್ನು ಕಾಲ್ಕಿàಳುವಂತೆ ಮಾಡಿದ್ದಲ್ಲದೇ, ಅವರನ್ನು ಬೆನ್ನಟ್ಟಿ ಒಬ್ಬನನ್ನು ಹಿಡಿಯಲೂ ಈಕೆ ಸಫ‌ಲರಾಗಿದ್ದರು. ಅಂದಿನಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ, ಯುವಕರಿಗೆ ಕೃಷ್ಣ ಪುನಿಯಾ ಅಂದರೆ ಬಲು ಗೌರವ. ಇಲ್ಲಿ ಉಲ್ಲೇಖಾರ್ಹ ಸಂಗತಿಯೆಂದರೆ, ಈ ಬಾರಿ ಕೃಷ್ಣ ಪುನಿಯಾರ ಪರವಾಗಿ ಅವರ ಪತಿ ವೀರೇಂದ್ರ ಪುನಿಯಾ ಭರ್ಜರಿ ಪ್ರಚಾರ ನಡೆಸಿದ್ದಾರೆ. ವೀರೇಂದ್ರ ಪುನಿಯಾ ಕೂಡ ಅಂತಾರಾಷ್ಟ್ರೀಯ ಕ್ರೀಡಾ ಪಟುವಾಗಿದ್ದವರು, ಅವರು ದ್ರೋಣಾಚಾರ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಕಾಂಗ್ರೆಸ್‌ನ ಜಾತಿ ಲೆಕ್ಕಾಚಾರ : ಈ ಎಲ್ಲಾ ಅಂಶಗಳ ಹೊರತಾಗಿಯೂ ಕಾಂಗ್ರೆಸ್‌ ಪಕ್ಷ ಜಾತಿ ಲೆಕ್ಕಾಚಾರವನ್ನೂ ಹಾಕಿಕೊಂಡಿದೆ. ಕೃಷ್ಣ ಪುನಿಯಾ ಜಾಟ್‌ ಜಾತಿಗೆ ಸೇರಿದವರು. ಜೈಪುರ ಗ್ರಾಮಾಂತರದಲ್ಲಿ ಜಾಟರ ಸಂಖ್ಯೆ 23 ಪ್ರತಿಶತದಷ್ಟಿದೆ. ಇನ್ನೊಂದೆಡೆ ರಾಥೋಡ್‌ ಅವರು ರಜಪೂತ ಸಮುದಾಯಕ್ಕೆ ಸೇರಿದವರು. ಈ ಭಾಗದಲ್ಲಿ ರಜಪೂತರು ಕೇವಲ 10 ಪ್ರತಿಶತದಷ್ಟಿದ್ದಾರೆ. ಹೀಗಾಗಿ ಈ ಬಾರಿ ಪುನಿಯಾ ಜಯಭೇರಿ ಬಾರಿಸುತ್ತಾರೆ ಎನ್ನುವ ಭರವಸೆ ಕಾಂಗ್ರೆಸ್‌ನದ್ದು. ಆದರೆ ರಾಜ್ಯವರ್ಧನ್‌ರ ಸಂಘಟನಾ ಶಕ್ತಿ ಈಗ ಮತ್ತಷ್ಟು ಬಲಗೊಂಡಿದ್ದು, ಅವರ ಜನಪ್ರಿಯತೆ ಹಿಂದಿಗಿಂತಲೂ ಹೆಚ್ಚಾಗಿದೆ, ಹೀಗಾಗಿ ಜನರು ಜಾತಿ ನೋಡದೇ ಮತ ಹಾಕುತ್ತಾರೆ ಎನ್ನುವುದು ಬಿಜೆಪಿಯ ನಂಬುಗೆ.

Advertisement

ಮೇ 6ಕ್ಕೆ ಮತದಾನ: ಶಾರ್ಪ್‌ ಶೂಟರ್‌ ರಾಥೋಡ್‌ ಮತ್ತು ಡಿಸ್ಕಸ್‌ ಥ್ರೋ ಚಾಂಪಿಯನ್‌ ಕೃಷ್ಣಪುನಿಯಾ ನಡುವಿನ ಸ್ಪರ್ಧೆ ಪ್ರಬಲವಾಗಿಯೇ ಇರಲಿದೆ. ಈ ಕ್ಷೇತ್ರ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿಯೂ ಬದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next