Advertisement

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

01:19 AM May 06, 2024 | Team Udayavani |

ಮಂಗಳೂರು/ಉಡುಪಿ: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಉತ್ತರ ಕರ್ನಾಟಕದ ವಿವಿಧ ಕ್ಷೇತ್ರಗಳು ಸೇರಿದಂತೆ ಒಟ್ಟು 14 ಕ್ಷೇತ್ರಗಳಿಗೆ ಈ ಬಾರಿ ಚುನಾವಣೆ ನಡೆಯುತ್ತಿದ್ದು, ಮಂಗಳೂರು ಹಾಗೂ ಉಡುಪಿ ನಗರ ಮತ್ತು ಆಸುಪಾಸಿನಲ್ಲಿರುವ ವಾಸವಾಗಿರುವ ಕಾರ್ಮಿಕರು, ಉದ್ಯೋಗಿಗಳು ರವಿವಾರ ರಾತ್ರಿಯೇ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದರು.

Advertisement

ಕೆಎಸ್ಸಾರ್ಟಿಸಿ ಬಸ್‌ ತಂಗುದಾಣದಲ್ಲಿ ಜನಜಾತ್ರೆಯೇ ಕಂಡು ಬಂದಿತ್ತು. ಮಕ್ಕಳಿಗೂ ರಜೆ ಇರುವುದರಿಂದ ಕುಟುಂಬ ಸಮೇತ ಊರಿಗೆ ತೆರಳುವ ಸಾಕಷ್ಟು ಮಂದಿ ಕಂಡು ಬಂದರು. ಒಂದು ವಾರ ಊರಿನಲ್ಲಿ ಬರುತ್ತೇವೆ ಎಂದು ಹಲವರು “ಉದಯವಾಣಿ’ಗೆ ತಿಳಿಸಿದರು. ವಿವಿಧ ಪಕ್ಷಗಳ ಕಾರ್ಯಕರ್ತರೇ ಬಸ್ಸಿಗೆ ದುಡ್ಡು ಕೊಟ್ಟು ಕರೆಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳೂ ನಿಲ್ದಾಣದಲ್ಲಿ ಕೇಳಿ ಬಂತು.

ನಿಲ್ದಾಣದ ಟಿಕೆಟ್‌ ಕೌಂಟರ್‌, ವಿಚಾರಣ ಕೌಂಟರ್‌ಗಳಲ್ಲಿ ದಟ್ಟಣೆಯಿತ್ತು. ಉತ್ತರ ಕರ್ನಾಟಕ ಭಾಗಕ್ಕೆ ತೆರಳುವ ಎಲ್ಲ ಬಸ್ ಗಳಲ್ಲಿ ಸೀಟುಗಳು ಭರ್ತಿಯಾಗಿದ್ದವು. ಇನ್ನಷ್ಟು ಮಂದಿ ಸೋಮವಾರ ತೆರಳುವ ನಿರೀಕ್ಷೆಯಿದೆ.

ಕಟ್ಟಡ ನಿರ್ಮಾಣ, ತ್ಯಾಜ್ಯ ವಿಲೇವಾರಿ, ಮನೆ ಕೆಲಸ, ಕೂಲಿ, ಮೀನುಗಾರಿಕೆ, ಕಾರ್ಖಾನೆಗಳು ಸೇರಿದಂತೆ ವಿವಿಧ ಕೆಲಸಗಳಲ್ಲಿ ಉತ್ತರ ಕರ್ನಾಟಕ ಭಾಗದ ಮಂದಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಗರ ಮತ್ತು ಮತ್ತು ಹೊರವಲಯದಲ್ಲಿ ಸಾವಿರಾರು ಮಂದಿ ಇಂತಹ ಕಾರ್ಮಿಕರಿದ್ದು, ಊರಿಗೆ ತೆರಳುವುದರಿಂದ ಕೆಲವು ಕೆಲಸಗಳಿಗೆ ಕಾರ್ಮಿಕರ ಕೊರತೆಯಾಗಲಿದೆ.

ತಾಜ್ಯ ವಿಲೇವಾರಿಯಲ್ಲಿ
ವ್ಯತ್ಯಯ ಸಾಧ್ಯತೆ
ಮಂಗಳೂರು ಹಾಗೂ ಉಡುಪಿ ನಗರ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯಲ್ಲಿ ತುಸು ವ್ಯತ್ಯಯವಾಗುವ ಸಾಧ್ಯತೆಯಿದೆ. ತ್ಯಾಜ್ಯ ವಿಲೇವಾರಿ ಕೆಲಸದಲ್ಲಿ ಡ್ರೈವರ್, ಲೋಡರ್, ಹೆಲ್ಪರ್ ಸೇರಿದಂತೆ ಸಾಕಷ್ಟು ಮಂದಿ ಹೊರ ಜಿಲ್ಲೆಯಲ್ಲಿ ಇದ್ದಾರೆ. ಕೆಲವರು ಇಲ್ಲೇ ನೆಲೆಸಿ ಮತದಾರರ ಚೀಟಿಯನ್ನು ಹೊಂದಿದ್ದಾರೆ. ಆದರೆ ಬಹಳಷ್ಟು ಮಂದಿ ಉತ್ತರ ಕರ್ನಾಟಕ ಭಾಗದವರಾಗಿದ್ದು, ಅವರೀಗ ಊರಿಗೆ ತೆರಳಿರುವುದರಿಂದ ವಾಪಾಸು ಬರುವವರೆಗೆ ಸಮಸ್ಯೆಯಾಗುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next