Advertisement

Lok Sabha Elections; ರಾಷ್ಟ್ರೀಯ ಪಕ್ಷಗಳು ಚುರುಕು

11:08 PM Feb 10, 2024 | Team Udayavani |

ಉಡುಪಿ/ ಮಂಗಳೂರು: ಲೋಕಸಭೆ ಚುನಾವಣೆ ಎಪ್ರಿಲ್‌-ಮೇಯಲ್ಲಿ ನಡೆಯುವ ಸಾಧ್ಯತೆಗಳಿದ್ದು, ಕರಾವಳಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಚುರುಕಾಗಿದ್ದಾರೆ.

Advertisement

ಬಿಜೆಪಿ ಹಾಗೂ ಕಾಂಗ್ರೆಸ್‌ ಸರಣಿ ಸಭೆ ನಡೆಸುತ್ತಿವೆ. ರಾಜ್ಯ ಮಟ್ಟ ದಲ್ಲಿ ಕೈಗೊಳ್ಳುತ್ತಿರುವ ನಿರ್ಣಯಗಳನ್ನು ಇಲ್ಲಿಯೂ ಅನುಷ್ಠಾನಿಸಲಾಗುತ್ತಿದೆ.

ಜಿಲ್ಲಾಧಿಕಾರಿ ಕಚೇರಿ ಸಹಿತ ಜಿಲ್ಲೆಯ ವಿವಿಧೆಡೆ ಡಿಸೆಂಬರ್‌ನಿಂದಲೇ ಇವಿಎಂ ಪ್ರಾತ್ಯಕ್ಷಿಕೆ ನಡೆಯುತ್ತಿದೆ. ಚುನಾವಣೆ ಅಧಿಕೃತ ಘೋಷಣೆಯಾದ ಬಳಿಕ ಬೂತ್‌ಗಳ ಸಿದ್ಧತೆ, ಚೆಕ್‌ಪೋಸ್ಟ್‌ಗಳು, ಚುನಾವಣ ವೀಕ್ಷಕರ ನೇಮಕ, ನಾಮಿನೇಷನ್‌ ಪ್ರಕ್ರಿಯೆ, ಜಾಗೃತಿ ಮತ್ತಿತರ ಪ್ರಕ್ರಿಯೆಗಳು ನಡೆಯಲಿವೆ. ಉಭಯ ರಾಷ್ಟ್ರೀಯ ಪಕ್ಷಗಳ ಕೇಂದ್ರ ನಾಯಕರು ಈಗಾಗಲೇ ವಿವಿಧ ಹಂತದಲ್ಲಿ ಸಭೆ ನಡೆಸುತ್ತಿದ್ದಾರೆ. ಬಿಜೆಪಿಯು ಈಗಾಗಲೇ ರಾಜ್ಯ ಉಸ್ತು ವಾರಿ ಗಳನ್ನು ನೇಮಕ ಮಾಡಿದೆ.

ನಾಯಕರ ದೌಡು
ಬಿಜೆಪಿ ಹಾಗೂ ಕಾಂಗ್ರೆಸ್‌ನ ಮುಖಂಡರು ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸುತ್ತಿದ್ದಾರೆ. ಈ ಹಿಂದಿನ ಫ‌ಲಿತಾಂಶಗಳನ್ನು ಅವಲೋಕಿಸಿ ಕೊಂಡು ಹೆಚ್ಚುವರಿ ಮತ ಗಳಿಸುವುದು ಹಾಗೂ ಕಡಿಮೆ ಮತದಾನ ಆದಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಕಾರ್ಯಯೋಜನೆ ಸಿದ್ಧಪಡಿಸ ಲಾಗುತ್ತಿದೆ. ಉಭಯ ಪಕ್ಷಗಳ ರಾಷ್ಟ್ರೀಯ ನಾಯಕರೂ ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆ ಇದೆ.

ವಿವಿಧ ಕಾರ್ಯಕ್ರಮ
ಮತದಾರರನ್ನು ಅದರಲ್ಲಿ ಮುಖ್ಯವಾಗಿ ಯುವ ಮತದಾರರು, ಹಿರಿಯರು ಸಹಿತ ಹೊರ ದೇಶದಲ್ಲಿರುವ ಮತದಾರ ರನ್ನು ಸೆಳೆಯಲು ನಾನಾ ತಂತ್ರಗಾರಿಕೆ ಹೆಣೆಯಲಾಗುತ್ತಿದೆ.

Advertisement

ಮತದಾರರ ಸಂಖ್ಯೆ ಹೆಚ್ಚಳ
2019ರಲ್ಲಿ ಉಡುಪಿ -ಚಿಕ್ಕ ಮಗಳೂರು ಕ್ಷೇತ್ರದಲ್ಲಿ 15,13,116 ರಷ್ಟಿದ್ದ ಮತದಾರರ ಸಂಖ್ಯೆ ಈಗ 15,65,339ಕ್ಕೆ ಏರಿದೆ. 2019ರಲ್ಲಿ 30,845 ಮಂದಿ ಯುವ ಮತದಾರರು ನೋಂದಣಿ ಮಾಡಿಸಿಕೊಂಡಿದ್ದು, ಈ ಬಾರಿ ಇದುವರೆಗೆ 28,149 ಮಂದಿ ನೋಂದಾಯಿಸಿಕೊಂಡಿದ್ದಾರೆ.

ಚುನಾವಣೆಗೆ 10 ದಿನ ಇರುವವರೆಗೂ ನೋಂದಣಿ ಪ್ರಕ್ರಿಯೆ ನಡೆಯ ಲಿರುವ ಕಾರಣ ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ. ದ.ಕ. ಜಿಲ್ಲೆಯಲ್ಲೂ ಹೊಸ ಮತದಾರರ ಸಂಖ್ಯೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next