Advertisement
ರಾಜ್ಯದ ಮೊದಲ ಹಂತದಲ್ಲಿ ಮತದಾನ ನಡೆದ ದಕ್ಷಿಣ ಕರ್ನಾಟಕ, ಮಲೆನಾಡು, ಕರಾವಳಿ ಪ್ರದೇಶದಲ್ಲಿ ಮತ ಪ್ರಚಾರ ನಡೆಸಿದ್ದ ಮೋದಿ ಯವರು ಈಗ 2ನೇ ಹಂತದ ಚುನಾ ವಣೆಗಾಗಿ ಉತ್ತರದಲ್ಲಿ ಮತ ಬೇಟೆಗೆ ಮುಂದಾಗಿದ್ದಾರೆ.
Related Articles
Advertisement
ದಾವಣಗೆರೆಯಿಂದ ಕಲ್ಯಾಣ ಕರ್ನಾಟಕದ ವಿಜಯನಗರ ಜಿಲ್ಲೆಯ ಹೊಸಪೇಟೆಗೆ ತೆರಳಲಿದ್ದು, ಪ್ರಚಾರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳ್ಳಾರಿ, ಕೊಪ್ಪಳ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ನಾಳೆ ಬಾಗಲಕೋಟೆಯಲ್ಲಿ: ಎ. 29ರಂದು ಮೋದಿಯವರು ಕಿತ್ತೂರು ಕರ್ನಾಟಕದ ಬಾಗಲಕೋಟೆಗೆ ತೆರಳಲಿದ್ದು, ಪ್ರಚಾರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಧಾನಿಯವರು ಯಾವುದೇ ಕ್ಷೇತ್ರದಲ್ಲಿ ಮತಪ್ರಚಾರ ನಡೆಸಿದರೂ ಸುತ್ತಮುತ್ತಲ ಮೂರ್‍ನಾಲ್ಕು ಕ್ಷೇತ್ರಗಳ ಮೇಲೆ ಪ್ರಭಾವ ಬೀರಲಿದ್ದು, ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಆಶಾಭಾವ ಬಿಜೆಪಿ ಅಭ್ಯರ್ಥಿಗಳದ್ದಾಗಿದೆ.ಪ್ರಧಾನಿಯವರ ಆಗಮನ ಸಹಜವಾಗಿಯೇ ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿದೆ. ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯವರು ವಾಸ್ತವ್ಯ ಹೂಡಿರುವುದು ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಪುಳಕಿತಗೊಳಿಸುವಂತೆ ಮಾಡಿದೆ. ಪ್ರಧಾನಿಯವರ ಸ್ವಾಗತಕ್ಕೆ ಶಿರಸಿ, ದಾವಣಗೆರೆ, ಹೊಸಪೇಟೆ ಹಾಗೂ ಬಾಗಲಕೋಟೆ ಸಜ್ಜಾಗಿವೆ. ಇಂದು ಎಲ್ಲೆಲ್ಲಿ ಪ್ರಧಾನಿ ರ್ಯಾಲಿ?
-ಬೆಳಗ್ಗೆ 10: ಬೆಳಗಾವಿ-ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿಗಳ ಪರ ಬೆಳಗಾವಿ ಯಲ್ಲಿ ಪ್ರಚಾರ.
-ಮಧ್ಯಾಹ್ನ 12: ಧಾರವಾಡ- ಉತ್ತರಕನ್ನಡ ಕ್ಷೇತ್ರದ ಅಭ್ಯರ್ಥಿಗಳ ಪರ ಶಿರಸಿಯಲ್ಲಿ ಪ್ರಚಾರ
-ಅಪರಾಹ್ನ 2: ದಾವಣಗೆರೆ-ಹಾವೇರಿ ಕ್ಷೇತ್ರದ ಅಭ್ಯರ್ಥಿಗಳ ಪರ ದಾವಣಗೆರೆ ಯಲ್ಲಿ ಪ್ರಚಾರ
-ಸಂಜೆ 4: ಬಳ್ಳಾರಿ-ಕೊಪ್ಪಳ ಅಭ್ಯರ್ಥಿ ಗಳ ಪರ ಹೊಸಪೇಟೆಯಲ್ಲಿ ಪ್ರಚಾರ ಎ. 29ರ ಮೋದಿ ಕಾರ್ಯಕ್ರಮ
-ಬೆಳಗ್ಗೆ 10: ಬಾಗಲಕೋಟೆ-ವಿಜಯ ಪುರ ಕ್ಷೇತ್ರದ ಅಭ್ಯರ್ಥಿ ಗಳ ಪರವಾಗಿ ಬಾಗಲಕೋಟೆಯಲ್ಲಿ ಪ್ರಚಾರ