Advertisement

Lok Sabha Elections; ರಾಜ್ಯದಲ್ಲಿ ಮೋದಿಯವರ 10 ಕಾರ್ಯಕ್ರಮ

11:53 PM Mar 15, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರಾಜ್ಯದಲ್ಲಿ 10ಕ್ಕೂ ಹೆಚ್ಚು ಸಭೆ-ಸಮಾವೇಶ ನಡೆಸುವ ಸಾಧ್ಯತೆ ಇದೆ.

Advertisement

ಚುನಾವಣೆ ನಿರ್ವಹಣೆ ಸಮಿತಿ ಸಂಚಾಲಕ ವಿ.ಸುನಿಲ್‌ ಕುಮಾರ್‌ ನೇತೃತ್ವದಲ್ಲಿ ಜರಗಿದ ಸಭೆಯಲ್ಲಿ ಈ ವಿಷಯ ಪ್ರಸ್ತಾವವಾಗಿದ್ದು, ಲೋಕಸಭೆ ಚುನಾವಣೆ ನಿರ್ವಹಣೆಗಾಗಿ 41 ವಿಭಾಗಗಳಿಂದ ಕೂಡಿದ ಪ್ರತ್ಯೇಕ “ವಾರ್‌ ರೂಂ’ ಪ್ರಾರಂಭಿಸಲು ತೀರ್ಮಾನಿಸಲಾಗಿದೆ.

ಶುಕ್ರವಾರ ದಿನವಿಡೀ ಪಕ್ಷದ ಕಚೇರಿಯಲ್ಲಿ ಈ ಸಭೆ ನಡೆದಿದ್ದು, ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಕೂಡ ಆಗಮಿಸಿ ಬಂಡಾಯ ಶಮನಕ್ಕೆ ಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

10 ಸಭೆ-ಸಮಾವೇಶ
ಚುನಾವಣೆ ನಿರ್ವಹಣೆ ಉದ್ದೇಶದಿಂದ ವಾರ್‌ ರೂಂನಲ್ಲಿ ಒಟ್ಟು 151 ಪ್ರಮುಖರನ್ನು ನೇಮಕ ಮಾಡಲು ನಿರ್ಧರಿಸಲಾಗಿದ್ದು, ಫ‌ಲಾನುಭವಿಗಳ ಸಭೆ, ಜಾತಿ ಸಮಾವೇಶಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಸಹಿತ ಎಲ್ಲ ಸಮುದಾಯಗಳನ್ನು ತಲುಪಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ.

Advertisement

ಪ್ರಧಾನಿ 10 ಸಭೆ-ಸಮಾವೇಶದಲ್ಲಿ ಭಾಗಿಯಾಗಬಹುದೆಂದು ನಿರೀಕ್ಷಿಸಲಾಗಿದೆ. ಜತೆಗೆ ಅಮಿತ್‌ ಶಾ, ನಡ್ಡಾ, ರಾಜನಾಥ್‌ ಸಿಂಗ್‌ ಮುಂತಾದ ಪ್ರಮುಖರು ರಾಜ್ಯ ಪ್ರವಾಸ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next