Advertisement

Lok Sabha Elections:ನನ್ನ ಪರವಾಗಿ ಯಾರ ಹೆಸರನ್ನೂ ಶಿಫಾರಸು ಮಾಡೊಲ್ಲ: ಶ್ರೀನಿವಾಸ ಪ್ರಸಾದ್

08:52 PM Oct 03, 2023 | Team Udayavani |

ಚಾಮರಾಜನಗರ: ಮುಂದಿನ ಲೋಕಸಭಾ ಚುನಾವಣೆಗೆ ನನ್ನ ಪರವಾಗಿ ನಮ್ಮ ಮನೆಯವರದಾಗಲೀ ಅಥವಾ ಬೇರೆ ಯಾರ ಹೆಸರನ್ನೂ ಶಿಫಾರಸು ಮಾಡುವುದಿಲ್ಲ. ಯಾವ ಪಕ್ಷದ ಪರವಾಗಿಯೂ ಪ್ರಚಾರ ಮಾಡುವುದಿಲ್ಲ ಎಂದು ಬಿಜೆಪಿ ಸಂಸದ ವಿ. ಶ್ರೀನಿವಾಸಪ್ರಸಾದ್ ಹೇಳಿದರು.

Advertisement

ನಗರದಲ್ಲಿ ಜೆಎಸ್‌ಎಸ್ ಸಂಸ್ಥೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಶ್ನೆಗೆ ಉತ್ತರಿಸಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾರನ್ನೂ ಶಿಫಾರಸು ಮಾಡುವುದಿಲ್ಲ. ಮಾ. 17 ರಂದು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ. ಬಿಜೆಪಿಯಿಂದ ಮಾತ್ರವಲ್ಲ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ. ನಮ್ಮ ಮನೆಯವರನ್ನಾಗಲೀ ಮತ್ತೊಬ್ಬರನ್ನಾಗಲೀ ಪ್ರಸ್ತಾಪ ಮಾಡಲ್ಲ. ಯಾವ ಪಕ್ಷದ ಪರವಾಗಿಯೂ ಪ್ರಚಾರ ಮಾಡಲ್ಲ. 16 ಚುನಾವಣೆ ನೋಡಿದ್ದೇನೆ. 50 ವರ್ಷ ಸತತವಾಗಿ ರಾಜಕೀಯ ಜೀವನದಲ್ಲಿದ್ದೇನೆ. ಇಷ್ಟು ಸಾಕು ನನಗೆ ತೃಪ್ತಿ ಇದೆ ಎಂದು ಹೇಳಿದರು.

ಹೊಸದಾಗಿ ನಡೆಯುತ್ತಿದೆಯೇ? ಯಾವುದೇ ಸರ್ಕಾರ ಬಂದರೂ ಎಲ್ಲಾದರೂ ಒಂದು ಕಡೆ ಅಹಿತಕರ ಘಟನೆ ನಡೆದೇ ನಡೆಯುತ್ತದೆ. ಅದೇ ರೀತಿ ಶಿವಮೊಗ್ಗದಲ್ಲಿ ನಡೆದಿದೆ.

ಎಷ್ಟೇ ಎಚ್ಚರಿಕೆ ವಹಿಸಿದರೂ ಒಂದೊಂದು ಕಡೆ ಅಹಿತಕರ ಘಟನೆ ನಡೆಯುತ್ತದೆ. ಅದನ್ನು ನಿಯಂತ್ರಿಸುವುದು ಸರ್ಕಾರದ ಕೆಲಸ ಎಂದು ಹೇಳಿದರು.

ಮೈತ್ರಿಗೆ ಬೊಬ್ಬೆ ಹಾಕೋದು ಬೇಡ. ಇಂಡಿಯಾದಲ್ಲಿ 30 ರಾಜಕೀಯ ಪಕ್ಷಗಳು ಒಂದಾಗಿವೆ. ಅವು ಕಾಂಗ್ರೆಸ್ ಅನ್ನು ಬಹಳ ದ್ವೇಷಿಸುವ ಪಕ್ಷಗಳು. ಅವರು ಒಂದಾಗಬಹುದು ಜೆಡಿಎಸ್ ಮತ್ತು ಬಿಜೆಪಿ ಒಂದಾಗಲಿ ಬಿಡಿ ಎಂದರು.

Advertisement

ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂಬ ಯತ್ನಾಳ್ ಹೇಳಿಕೆಯ ಪ್ರಶ್ನೆಗೆ ಉತ್ತರಿಸಿ, ಮಾರ್ಚ್ 17ಕ್ಕೆ ನಾನು ಚುನಾವಣೆಗೆ ಸ್ಪರ್ಧಿಸಲು ಆರಂಭಿಸಿ 50 ವರ್ಷ ಆಯಿತು. ಅಂದು ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡುತ್ತೇನೆ. ಈಗ ರಾಜಕೀಯದ ಲವಲೇಶವನ್ನೂ ಮಾತಾಡುವುದಿಲ್ಲ. ಜನಾದೇಶ ಮುಖ್ಯ. ಅದೆಲ್ಲ ಊಹಾಪೋಹದ ಮಾತು. ಅದಕ್ಕೆ ನಾನೇನು ಹೇಳಲಿ? ಯಾರು ಏನು ಬೇಕಾದರೂ ಹೇಳಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next