Advertisement

Lok Sabha Elections ಚಿತ್ರದುರ್ಗದಿಂದಲೇ ಮತ್ತೆ ಸ್ಪರ್ಧೆ: ನಾರಾಯಣಸ್ವಾಮಿ

07:43 PM Nov 04, 2023 | Team Udayavani |

ಚಿತ್ರದುರ್ಗ: ಮುಂಬರುವ ಲೋಕಸಭೆ ಚುನಾವಣೆಗೆ ಚಿತ್ರದುರ್ಗ ಕ್ಷೇತ್ರದಿಂದಲೇ ಕಣಕ್ಕಿಳಿಯುತ್ತೇನೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

Advertisement

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸ್ಥಳೀಯರಿಗೆ ಟಿಕೆಟ್‌ ನೀಡಬೇಕು ಎನ್ನುವ ಕೂಗಿಗೆ ನನ್ನ ವಿರೋಧವಿಲ್ಲ. ಈ ಅಭಿಪ್ರಾಯವನ್ನು ಗೌರವಿಸುತ್ತೇನೆ. ಇದು ಮತದಾರರ ಪ್ರಜ್ಞಾವಂತಿಕೆಯನ್ನು ತೋರಿಸುತ್ತದೆ. ಸ್ಥಳೀಯರಿಗೆ ಪಕ್ಷ ಅವಕಾಶ ನೀಡಿದರೆ ಬೆಂಬಲ ನೀಡುತ್ತೇನೆ ಎಂದರು.

ಕೋಲಾರದಲ್ಲಿ ಸ್ಪರ್ಧೆ ಮಾಡುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪಕ್ಷವೇ ಹೇಳಿದರೂ ಕೋಲಾರಕ್ಕೆ ಹೋಗುವುದಿಲ್ಲ. 2019ರ ಲೋಕಸಭೆ ಚುನಾವಣೆಗೆ ಚಿತ್ರದುರ್ಗಕ್ಕೆ ಬಂದಾಗ ಅನೇಕರು ನನ್ನ ಮುಖವನ್ನೇ ನೋಡಿರಲಿಲ್ಲ. ಆದರೂ ಈ ಕ್ಷೇತ್ರದ ಜನತೆ ಮತ ನೀಡಿ ಗೆಲ್ಲಿಸಿದ್ದಾರೆ. ಅವರ ವಿಶ್ವಾಸ ಉಳಿಸಿಕೊಳ್ಳುವುದಷ್ಟೇ ಮುಖ್ಯ ಎಂದರು.

ಇಂದು ಚುನಾವಣೆ, ಅಧಿಕಾರ ಎನ್ನುವುದು ಹಣ ಮಾಡುವ ವ್ಯವಸ್ಥೆಯಾಗುತ್ತಿದೆ. ಗೆದ್ದವರಿಗೆ ರಾಜನ ಮನಃಸ್ಥಿತಿ ಬರುತ್ತಿರುವುದು ವಿಪರ್ಯಾಸ. ಇವತ್ತಿಗೂ ಮತದಾರರು ಸೌಲಭ್ಯಗಳಿಗಾಗಿ ಅಂಗಲಾಚುವ ಪರಿಸ್ಥಿತಿಯಿದೆ. ರಾಜಕಾರಣಿಗಳು ಎಲ್ಲವನ್ನೂ ಲಾಭದ ದೃಷ್ಟಿಯಿಂದಲೇ ನೋಡುತ್ತಿದ್ದಾರೆ. ಇದನ್ನೆಲ್ಲಾ ನೋಡಿ ರಾಜಕಾರಣದ ಬಗ್ಗೆ ಬೇಸರ ಮೂಡಿದೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವವರು ಚುನಾವಣೆಗೆ ಬರಬೇಕು. ವ್ಯವಹಾರಕ್ಕಾಗಿ ರಾಜಕಾರಣ, ಚುನಾವಣೆ ಹಾಗೂ ಅಧಿಕಾರ ಬಳಸಿಕೊಳ್ಳುವುದು ಒಳ್ಳೆಯದಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next