ರಾಯಚೂರು: ಸರಿಸುಮಾರು ಒಂದು ವರ್ಷದಿಂದ ಖಾಲಿಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾಜಿ ಎಂಎಲ್‌ಸಿ ಬಸವರಾಜ್ ಪಾಟೀಲ್ ಇಟಗಿ ನೇಮಕವಾಗಿದೆ. ಐದು ದಶಕಗಳ ಬಳಿಕ ಲಿಂಗಾಯತರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಪ್ರಬಲ ಸಮುದಾಯದ ಮತಬೇಟೆಗೆ ಮುಂದಾದಂತಿದೆ.
Advertisement
ಕಳೆದ ವಿಧಾನಸಭೆ ಚುನಾವಣೆ ವೇಳೆ ಜಿಲ್ಲಾಧ್ಯಕ್ಷರಾಗಿದ್ದ ಬಿ.ವಿ. ನಾಯಕ ರಾಜೀನಾಮೆ ನೀಡಿದ್ದರು. ಆದರೆ, ಪಕ್ಷದ ನಾಯಕರು ಚುನಾವಣೆ ಗುಂಗಿನಲ್ಲಿದ್ದ ಕಾರಣ ಜಿಲ್ಲಾಧ್ಯಕ್ಷರ ನೇಮಕಕ್ಕೆ ಉತ್ಸಾಹ ತೋರಲಿಲ್ಲ. ಚುನಾವಣೆ ಬಳಿಕ ನೇಮಕ ಮಾಡಲಾಗುವುದು ಎಂದೇ ಹೇಳಲಾಗಿತ್ತು. ಇದೇ ಕಾರಣಕ್ಕೆ ಅನೇಕ ನಾಯಕರು ತಮಗೇ ಅವಕಾಶ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಕಾದು ಕುಳಿತಿದ್ದರು.
Related Articles
Advertisement
ಇನ್ನೂ ಕೆಲವರು ಪಕ್ಷವೇ ನಮ್ಮ ಸೇವೆ ಗುರುತಿಸಿ ಕೊಡಬಹುದು ಎಂದೇ ನಿರೀಕ್ಷೆಯಲ್ಲಿದ್ದರು. ಆದರೆ, ಎಲ್ಲರ ಲೆಕ್ಕಾಚಾರ ತಲೆ ಕೆಳಗಾಗಿದೆ. ಮಲ್ಲಿಕಾರ್ಜುನ ಯದ್ದಲದಿನ್ನಿ, ಹಿರಿಯ ಮುಖಂಡರಾದ ಕೆ. ಶಾಂತಪ್ಪ, ರುದ್ರಪ್ಪ ಅಂಗಡಿ, ಶರಣಪ್ಪ ಮೇಟಿ, ಎಂ. ಈರಣ್ಣ, ಬಸನಗೌಡ ಬಾದರ್ಲಿ ಸೇರಿದಂತೆ ಅನೇಕರು ಆಕಾಂಕ್ಷಿಗಳಾಗಿದ್ದರು. ಆದರೆ, ಬಸನಗೌಡ ಬಾದರ್ಲಿ, ಕೆ. ಶಾಂತಪ್ಪ, ರಾಮಣ್ಣ ಇರಬಗೇರಾ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸುವ ಮೂಲಕ ಸಮಾಧಾನಪಡಿಸುವ ಕೆಲಸ ಮಾಡಲಾಗಿದೆ ಎನ್ನಲಾಗುತ್ತಿದೆ.
ಐದು ದಶಕಗಳ ಬಳಿಕ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ. ಚುನಾವಣೆಗೂ ಜಿಲ್ಲಾಧ್ಯಕ್ಷರ ನೇಮಕಕ್ಕೂ ಸಂಬಂಧವಿಲ್ಲ. ಆದರೂ ನಾವು ಎಲ್ಲರನ್ನೂ ಸಂಘಟನೆ ಮಾಡುವ ಮೂಲಕ ಪಕ್ಷಕ್ಕಾಗಿ ಶ್ರಮಿಸಲಾಗುವುದು. ನಾನು ಇನ್ನೂ ಅಧಿಕಾರ ಸ್ವೀಕರಿಸಿಲ್ಲ. ಪದಗ್ರಹಣದ ಬಳಿಕ ಎಲ್ಲರ ಜತೆಗೂಡಿ ಸಭೆ ನಡೆಸಲಾಗುವುದು.*ಬಸವರಾಜ್ ಪಾಟೀಲ್ ಇಟಗಿ,
ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ * ಸಿದ್ಧಯ್ಯಸ್ವಾಮಿ ಕುಕನೂರು