Advertisement
249 ಮತಗಟ್ಟೆಗಳಿಗೆ ಎ. 17ರಂದು ತೆರಳುವ 1,166 ಚುನಾವಣಾಧಿಕಾರಿ ವರ್ಗಕ್ಕೆ ಮಸ್ಟರಿಂಗ್ ಕೇಂದ್ರ ಮೊಡಂ ಕಾಪು ಇನ್ಫೆಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ 21 ರೂಂಗಳಲ್ಲಿ ವ್ಯವಸ್ಥೆಗಳು ಸಿದ್ಧಗೊಂಡಿದೆ. 85 ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ, 35 ಮತಗಟ್ಟೆಗಳಿಗೆ ವೀಕ್ಷಕರ ನೇಮಕ ಮಾಡಿದೆ. 17 ಮತಗಟ್ಟೆಗಳಲ್ಲಿ ನೇರ ವೆಬ್ ಕಾಸ್ಟಿಂಗ್ ವ್ಯವಸ್ಥೆ ಇದೆ. 15 ಮತಗಟ್ಟೆಗಳಲ್ಲಿ ವಿಡಿಯೋ ಗ್ರಾಫಿಂಗ್ ವ್ಯವಸ್ಥೆ ಮಾಡಿದೆ. 96 ರೂಟ್ ವ್ಯವಸ್ಥೆಗೆ ಮಾರ್ಗಾಧಿಕಾರಿಗಳು ಇರುತ್ತಾರೆ. 125 ವಾಹನಗಳನ್ನು ಎ. 16ರಂದೇ ಮಸ್ಟರಿಂಗ್ ಕೇಂದ್ರಕ್ಕೆ ತರಿಸಿ ಕಾದಿರಿಸಿಕೊಳ್ಳಲಾಗಿದೆ. ಬೂತ್ ಮಟ್ಟದಲ್ಲಿ ಬೂತ್ ಲೆವೆಲ್ ಅಸಿಸ್ಟೆಂಟ್‌ಗಳು ಕರ್ತವ್ಯ ನಿರ್ವಹಿಸಲು ತೊಡಗಿಸಿದ್ದು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ.
ಮೊಡಂಕಾಪು ಮತಗಟ್ಟೆ ಕೇಂದ್ರಕ್ಕೆ ಎ. 16ರಂದು ಸಂಜೆ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್ ಭೇಟಿ ನೀಡಿ ಮಸ್ಟರಿಂಗ್ ಕೇಂದ್ರ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದರು. ಈ ಸಂದರ್ಭ ಅವರು ಮಾಹಿತಿ ನೀಡಿ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಬ್ಬರು ಡಿವೈಎಸ್‌ಪಿ, ನಾಲ್ಕು ಮಂದಿ ಇನ್‌ಸ್ಪೆಕ್ಟರ್‌ಗಳು ಕರ್ತವ್ಯದಲ್ಲಿ ಇರುವರು. ಠಾಣೆಯ ಸಬ್ ಇನ್‌ಸ್ಪೆಕ್ಟರ್‌ಗಳು ಕರ್ತವ್ಯದ ರೌಂಡ್ಸ್‌ನಲ್ಲಿ ಇರುವರು. ಸಂಗಬೆಟ್ಟು ಕೆರೆಬಳಿ ಸರಕಾರಿ ಹಿ.ಪ್ರಾ.ಶಾಲೆಯನ್ನು ಪಿಂಕ್ ಮತಗಟ್ಟೆಯಾಗಿ ರೂಪಿಸಿದ್ದು ಅಲ್ಲಿಗೆ ಮಹಿಳಾ ಪೊಲೀಸ್ ಸಿಬಂದಿಯನ್ನು ನಿಯೋಜಿಸಲಾಗುತ್ತದೆ.ಮತದಾರರು ಶಾಂತ ರೀತಿಯಲ್ಲಿ ಮತದಾನ ಮಾಡಬೇಕು. ಯಾವುದೇ ಭಯಕ್ಕೆ ಆಸ್ಪದವಿಲ್ಲ ಎಂದರು. ಊಟ -ಉಪಾಹಾರ
ಮತಗಟ್ಟೆಗೆ ತೆರಳುವ ಅಧಿಕಾರಿ ಸಿಬಂದಿಗೆ ಮಸ್ಟರಿಂಗ್ ಕೇಂದ್ರದಲ್ಲಿ ಎ. 17ರಂದು ಬೆಳಗ್ಗೆ 2,000 ಮಂದಿಗೆ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಎ. 17ರಂದು ರಾತ್ರಿ, 18ರಂದು ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ, ಸಂಜೆ ಚಹಾದ ವ್ಯವಸ್ಥೆಯನ್ನು ಬಿಸಿಯೂಟ ಕಾರ್ಯಕರ್ತರು ನಿರ್ವಹಿಸುವರು. 18 ಚುನಾವಣ ದಿನ ಸಂಜೆ ಮತಯಂತ್ರವನ್ನು ಡಿಮಸ್ಟರಿಂಗ್ ಕೇಂದ್ರಕ್ಕೆ ಒಪ್ಪಿಸಲು ಬರುವ 2,000 ಮಂದಿ ಮತಗಟ್ಟೆ ಅಧಿಕಾರಿ ಸಿಬಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
Related Articles
ಕ್ಷೇತ್ರದಲ್ಲಿ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ 70 ಸೆಕ್ಟರ್‌ಗಳನ್ನು ಮಾಡಿಕೊಂಡು 300 ಪೊಲೀಸ್ ಸಿಬಂದಿ ನಿಯೋಜಿಸಲಾಗಿದೆ. 85 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿದ್ದು , ಪೊಲೀಸ್ ಸಿಬಂದಿ ಜತೆ ಸಿಆರ್‌ಪಿಗಳನ್ನು ನಿಯೋಜಿಸಿದೆ. ಬಂಟ್ವಾಳಕ್ಕೆ ಎರಡು ಹೆಚ್ಚುವರಿ ಕೆಎಸ್‌ಆರ್‌ಪಿ ಬೆಟಾಲಿಯನ್, ಹೋಂಗಾಡ್ ಸಿಬಂದಿಯನ್ನು ಕರ್ತವ್ಯಕ್ಕೆ ತೊಡಗಿಸಿದೆ
ಲಕ್ಷ್ಮೀಪ್ರಸಾದ್, ಜಿಲ್ಲಾ ಪೊಲೀಸ್ ಅಧೀಕ್ಷಕರು
Advertisement